16 ಜನರನ್ನು ಹತ್ಯೆಗೈದ ಶೂಟರ್ 12 ಗಂಟೆಗಳಲ್ಲಿ ಹತ

ಮಾಂಟ್ರಿಯಲ್, ಏಪ್ರಿಲ್ 20: ಪೊಲೀಸರ ವಾಹನವನ್ನು ಬಳಸಿ ಸಾಮೂಹಿಕ ಹತ್ಯೆ ನಡೆಸಿದ ದುಷ್ಕರ್ಮಿಯನ್ನು ಘಟನೆ ನಡೆದ 12 ಗಂಟೆಗಳಲ್ಲೇ ಹುಡುಕಿ ಗುಂಡಿಕ್ಕಿ ಕೊಲ್ಲಲಾಗಿದೆ. ಅಟ್ಲಾಂಟಿಕ್ ಕೆನಡಾದಲ್ಲಿ ನಡೆದ ದುರ್ಘಟನೆಯಲ್ಲಿ 16 ಮಂದಿ ಸಾರ್ವಜನಿಕರು ಬಲಿಯಾಗಿದ್ದು, ಕೆನಡಾದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದುರ್ಘಟನೆ ಎನ್ನಲಾಗಿದೆ.

ಶೂಟರ್ ನನ್ನು 51 ವರ್ಷ ವಯಸ್ಸಿನ ಗ್ರೇಬಿಯಲ್ ವರ್ಟ್ ಮನ್ ಎಂದು ಗುರುತಿಸಲಾಗಿದೆ. ಈ ಪ್ರಾಂತ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುತ್ತಿದ್ದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಪಡೆಯ ಹಿರಿಯ ಮಹಿಳಾ ಕಾನ್ಸ್ ಟೇಬಲ್ ಕೂಡಾ ಸಂತ್ರಸ್ತರಾಗಿದ್ದಾರೆ.

ಹಾಲಿಫ್ಯಾಕ್ಸ್ ನಿಂದ 100 ಕಿ.ಮೀ ದೂರದಲ್ಲಿರುವ ಪೊರ್ಟಾಪಿಕ್ಯೂ ಎಂಬಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಗೇಬ್ರಿಯಲ್ ನನ್ನು ನೋವಾ ಸ್ಕಾಟಿಯಾ ಪ್ರಾಂತ್ಯದಲ್ಲಿ ಪತ್ತೆ ಹಚ್ಚಿ ಹೊಡೆದುರುಳಿಸಲಾಗಿದೆ ಎಂದು ಕೆನಡಾ ಪೊಲೀಸರು ಹೇಳಿದ್ದಾರೆ.

At Least 16 Killed In Overnight Shooting Rampage In Canada, Gunman Killed

1989ರಲ್ಲಿ ಮಾಂಟ್ರಿಯಲ್ ಎಕೊಲ್ ಪಾಲಿಟೆಕ್ನಿಕ್ ನ 18 ವಿದ್ಯಾರ್ಥಿನಿಗಳನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದ ಇದಾದ ಬಳಿಕ ಇಂಥ ಸಾಮೂಹಿಕ ಹತ್ಯೆ ನಡೆದಿರಲಿಲ್ಲ. ನೋವಾ ಸ್ಕಾಟಿಯಾದ ಘಟನೆಯಿಂದ ತೀವ್ರ ನೋವಾಗಿದೆ ಎಂದು ಪ್ರಧಾನಿ ಜಸ್ಟಿನ್ ಟ್ರೂಡೋ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+