ಆಸ್ಟ್ರಾಜೆನೆಕಾ ಲಸಿಕೆ: ವೃದ್ಧರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಲಸಿಕೆಯ 2 ನೇ ಹಂತದ ಪ್ರಯೋಗದಲ್ಲಿ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದೆ ಎನ್ನುವ ವಿಷಯ ತಿಳಿದುಬಂದಿದೆ.

ಜುಲೈನಲ್ಲಿ ನಡೆಸಲಾದ ಪ್ರಯೋಗದಲ್ಲಿ ಈಲಸಿಕೆ 18 ರಿಂದ 55 ವರ್ಷದ ಆರೋಗ್ಯವಂತ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.

ಕೊರೊನಾದಿಂದ ವೃದ್ಧರೇ ಹೆಚ್ಚಾಗಿ ಮೃತಪಡುತ್ತಿರುವುದರಿಂದ ಈ ವಿಚಾರದ ಬಗ್ಗೆ ಹೆಚ್ಚು ಒತ್ತನ್ನು ನೀಡಲಾಗಿತ್ತು. ಕೊರೊನಾ ವಿರುದ್ಧ ಕಂಡು ಹಿಡಿಯಲಾಗುತ್ತಿರುವ ಲಸಿಕೆಗಳಲ್ಲಿ ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಲಸಿಕೆ ಕೂಡ ಮುಂಚೂಣಿಯಲ್ಲಿದೆ.

ತಾತ್ಕಾಲಿಕವಾಗಿ ಪ್ರಯೋಗ ಸ್ಥಗಿತಗೊಳಿಸಿದ್ದ ಈ ಲಸಿಕೆ ಇದೀಗ ಅಮೆರಿಕದಲ್ಲಿ ಅಂತಿಮ ಹಂತದ ಪ್ರಯೋಗವನ್ನು ನಡೆಸುತ್ತಿದೆ. ಹಿಂದಿನ ಪ್ರಯೋಗಗಳು, ಜುಲೈನಲ್ಲಿ ಲಸಿಕೆ ಪರವಾಗಿ ಬಂದ ಫಲಿತಾಂಶಗಳು ಆಸ್ಟ್ರಾಜೆನೆಕಾ ಲಸಿಕೆ ಮೇಲಿನ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಅಪಾಯದಲ್ಲಿರುವವರನ್ನು ರಕ್ಷಿಸುವ ಲಸಿಕೆ

ಅಪಾಯದಲ್ಲಿರುವವರನ್ನು ರಕ್ಷಿಸುವ ಲಸಿಕೆ

ಕೊರೊನಾ ಸೋಂಕಿನಿಂದ ಅನಾರೋಗ್ಯದ ಅಪಾಯದಲ್ಲಿರುವ ಜನಸಂಖ್ಯೆಯ ಒಂದು ಭಾಗವನ್ನು ರಕ್ಷಿಸುವಲ್ಲಿ ಈ ಲಸಿಕೆ ಯಶಸ್ವಿಯಾಗಿದೆ. ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಶೋ ನಲ್ಲಿ ಪ್ರಕಟವಾದ ಪ್ರಾಥಮಿಕ ಸಂಶೋಧನೆಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಬ್ರಿಟಿಷ್-ಸ್ವೀಡಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಲಸಿಕೆ ಅಭ್ಯರ್ಥಿಯು ವಯಸ್ಸಾದವರ ಮೇಲೂ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿದೆ ಎಂಬುದು ತಿಳಿದುಬಂದಿದೆ.

ಆದ್ಯತೆಯ ಆಧಾರದಲ್ಲಿ ಲಸಿಕೆ ವಿತರಣೆ

ಆದ್ಯತೆಯ ಆಧಾರದಲ್ಲಿ ಲಸಿಕೆ ವಿತರಣೆ

ಕೊವಿಡ್-19 ಲಸಿಕೆ ಲಭ್ಯವಾದಾಗ ಆದ್ಯತೆಯ ಆಧಾರದಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಸಚಿವ ಹರ್ಷವರ್ಧನ್ ನೀಡಿರುವ ಮಾಹಿತಿ ಏನು?

ಸಚಿವ ಹರ್ಷವರ್ಧನ್ ನೀಡಿರುವ ಮಾಹಿತಿ ಏನು?

ಎಫ್ಐಸಿಸಿಐ ಎಫ್ಎಲ್ಒಯಿಂದ ಆಯೋಜನೆಗೊಂಡ ವೆಬಿನಾರ್ ನಲ್ಲಿ ಮಾತನಾಡಿರುವ ಡಾ. ಹರ್ಷವರ್ಧನ್, ಮುಂದಿನ ಕೆಲವು ತಿಂಗಳುಗಳಲ್ಲಿ ಕೊವಿಡ್-19 ಲಸಿಕೆ ಲಭ್ಯವಾಗಲಿದೆ. ಜುಲೈ- ಆಗಸ್ಟ್ ನಲ್ಲಿ 400-500 ಮಿಲಿಯನ್ ಲಸಿಕೆಗಳು 25-30 ಕೋಟಿ ಜನರಿಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ಯತೆಯ ಆಧಾರದಲ್ಲಿ ಕೊವಿಡ್-19 ಲಸಿಕೆಯನ್ನು ಹಂಚುವುದು ಸ್ವಾಭಾವಿಕ.

65 ವರ್ಷ ಮೇಲ್ಪಟ್ಟವರಿಗೆ ಮೊದಲ ಲಸಿಕೆ

65 ವರ್ಷ ಮೇಲ್ಪಟ್ಟವರಿಗೆ ಮೊದಲ ಲಸಿಕೆ

ಕೊರೊನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 65 ವಯಸ್ಸಿನವರಿಗೆ ಲಸಿಕೆಗಳನ್ನು ಮೊದಲು ವಿತರಿಸಲಾಗುವುದು ಆ ನಂತರ 50-65 ವಯಸ್ಸಿನವರನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. 50 ವರ್ಷ ವಯಸ್ಸಿಗಿಂತ ಕಡಿಮೆ ಇದ್ದು, ಈಗಾಗಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಬಗ್ಗೆ ತಜ್ಞರು ನಿರ್ಧರಿಸಲಿದ್ದಾರೆ, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸ್ಪಷ್ಟ ಯೋಜನೆ ರೂಪಿಸಲಾಗಿರುವುದನ್ನು ಹರ್ಷವರ್ಧನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+