• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್‌ನಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಪುನರಾರಂಭ

|

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಯೋಗಿಕ ಕೊವಿಡ್ 19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಜಪಾನ್‌ನಲ್ಲಿ ಪುನರಾರಂಭಗೊಂಡಿದೆ.

ಸ್ವಯಂ ಸೇವಕರ ಅನಾರೋಗ್ಯದ ಕಾರಣ ಸ್ಥಗಿತಗೊಂಡು ತಿಂಗಳ ಬಳಿಕ ಯುಎಸ್ ಅಧಿಕಾರಿಗಳೊಂದಿಗೆ ಚರ್ಚೆ ಮುಂದುವರೆದಿದೆ.

ಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದು

ರಾಷ್ಟ್ರೀಯ ಆರೋಗ್ಯ ನಿಯಂತ್ರಕ, ಜಪಾನೀಸ್ ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಏಜೆನ್ಸಿಯೊಂದಿಗೆ ಸಮಾಲೋಚಿಸಿದ ಬಳಿಕ ಲಸಿಕೆ ಆರಂಭಿಕ ಹಂತದಿಂದ ಮಧ್ಯ ಹಂತದ ಪ್ರಯೋಗ ಪುನರಾರಂಭಗೊಂಡಿದೆ ಎಂದು ಬ್ರಿಟಿಷ್ ಔಷಧ ತಯಾರಕ ಶುಕ್ರವಾರ ತಿಳಿಸಿದ್ದಾರೆ.

ಲಸಿಕೆ ಪ್ರಯೋಗವನ್ನು ಏನೆಂದು ಕರೆಯಲಾಗುತ್ತೆ?

ಲಸಿಕೆ ಪ್ರಯೋಗವನ್ನು ಏನೆಂದು ಕರೆಯಲಾಗುತ್ತೆ?

ಲಸಿಕೆ ಪ್ರಯೋಗವನ್ನು AZD1222 ಅಥವಾ ChAdOx1 nCoV-19 ಎಂದು ಕರೆಯಲಾಗುತ್ತದೆ.ಸೆಪ್ಟೆಂಬರ್ 6 ರಂದು ಪ್ರಯೋಗದಲ್ಲಿ ಪಾಲ್ಗೊಂಡವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಳಿಕ ಅವರಿಗೆ ಟ್ರಾನ್ಸ್ವರ್ಸ್ ಮೈಲೈಟಿಸ್ ಎಂಬ ಅಪರೂಪದ ಬೆನ್ನುಮೂಳೆಯ ಉರಿಯೂತದ ಕಾಯಿಲೆ ಆರಂಭವಾಗಿತ್ತು.

ಯುಕೆ, ಬ್ರೆಜಿಲ್, ಭಾರತದಲ್ಲಿ ಪ್ರಯೋಗ ಪುನರಾರಂಭ

ಯುಕೆ, ಬ್ರೆಜಿಲ್, ಭಾರತದಲ್ಲಿ ಪ್ರಯೋಗ ಪುನರಾರಂಭ

ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಪ್ರಯೋಗಗಳು ಈಗಾಗಲೇ ಪುನರಾರಂಭಗೊಂಡಿದೆ. ಆದರೆ ನಿಯಂತ್ರಕರು ತಮ್ಮ ತನಿಖೆಯನ್ನು ವಿಸ್ತರಿಸಿದ ಕಾರಣ ಅಮೆರಿಕದಲ್ಲಿ ಇನ್ನೂ ಪ್ರಯೋಗ ಆರಂಭಗೊಂಡಿಲ್ಲ. ಆಸ್ಟ್ರಾಜೆನೆಕಾ ಈ ಸ್ಥಗಿತವನ್ನು ಪ್ರಮಾಣಿತ ವಿಮರ್ಶೆ ಕಾರ್ಯವಿಧಾನ ಎಂದು ಕರೆದಿದೆ.

ಲಸಿಕೆ ಮತ್ತು ಅನಾರೋಗ್ಯಕ್ಕೆ ಸಂಬಂಧವಿಲ್ಲ

ಲಸಿಕೆ ಮತ್ತು ಅನಾರೋಗ್ಯಕ್ಕೆ ಸಂಬಂಧವಿಲ್ಲ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ ದಾಖಲೆಯಲ್ಲಿ ಅನಾರೋಗ್ಯ ಹಾಗೂ ಲಸಿಕೆಗೆ ಯಾವುದೇ ಸಂಬಂಧವಿಲ್ಲ, ಆದಾಗ್ಯೂ ಕೊರೊನಾದಿಂದ ಉಂಟಾದ ಅನಾರೋಗ್ಯದ ವಿರುದ್ಧ ಯಶಸ್ವಿ ಲಸಿಕೆ ನೀಡುವ ಸ್ಪರ್ಧೆಯಲ್ಲಿ ಅಭ್ಯರ್ಥಿಗಳ ಸುರಕ್ಷತೆಯ ಬಗ್ಗೆ ಗಮನಹರಿಸಿದೆ. , ಇದು ಜಾಗತಿಕವಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಜೀವವನ್ನು ಬಲಿ ಪಡೆದಿದೆ.

ಮಾಡೆರ್ನಾ ಲಸಿಕೆ ಕೂಡ ಇನ್ನೂ ತಡ

ಮಾಡೆರ್ನಾ ಲಸಿಕೆ ಕೂಡ ಇನ್ನೂ ತಡ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಒಳಗೆ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ನವೆಂಬರ್ 25ರೊಳಗೆ ಮಾರ್ಡೆನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಯುಎಸ್ ಬಯೋಟೆಕ್ ಫರ್ಮ್ ಮಾಡೆರ್ನಾ ತಿಳಿಸಿದೆ. ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಕೊರೊನಾ ಲಸಿಕೆ ದೊರೆತರೆ ತಮ್ಮ ಪ್ರಚಾರಕ್ಕೂ ಸಹಾಯವಾಗುತ್ತಿತ್ತು ಎಂದು ಡೊನಾಲ್ಡ್ ಟ್ರಂಪ್ ಬಯಸಿದ್ದರು. ಆದರೆ ಚುನಾವಣೆಗೂ ಮುನ್ನ ಲಸಿಕೆ ಸಿಗುವುದು ಕಷ್ಟ ಎಂದು ಮಾಡೆರ್ನಾ ಹೇಳಿದೆ.

   ಕಡೆಗೂ ಪ್ರಕರಣದ ಬಗ್ಗೆ ಮೌನ ಮುರಿದ UP ಮುಖ್ಯಮಂತ್ರಿ Yogi AdityaNath | Oneindia Kannada

   English summary
   Clinical trials of AstraZeneca and Oxford University’s experimental COVID-19 vaccine have resumed in Japan, almost a month after being put on hold due to an illness of a British volunteer, while discussions with U.S. authorities continue
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X