ಹೊಸ ಸ್ಕಾರ್ಪಿಯೋ ಕಾರಿನಲ್ಲಿ ದೋಷ: ಶೋರೂಂ ಮುಂದೆಯೇ ಕಾರಿನ ಮೇಲೆ ಕಸ ಸುರಿದು ಆಕ್ರೋಶ; ವೈರಲ್
ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲ ವಾಹನಗಳ ಉತ್ಪಾದನೆ ಹೆಚ್ಚಾಗುತ್ತಿದೆ. ವಾಹನಗಳ ಗುಣಮಟ್ಟ ಕಾಯ್ದುಕೊಳ್ಳುವುದು, ಅವುಗಳ ರಿಪೇರಿ ವಿಚಾರದಲ್ಲಿ ಉತ್ತಮ ಸೇವೆ ನೀಡುವುದು ಮುಖ್ಯವಾಗಿರುತ್ತದೆ. ಈ ಹಿಂದೆ ಓಲಾ ಸ್ಕೂಟರ್ ಸರ್ವೀಸ್ ವಿಚಾರದಲ್ಲಿ ಸಾಕಷ್ಟು ಜನ ಆಕ್ರೋಶ ಹೊರ ಹಾಕಿದ್ದರು. ಇದೀಗ ಮಹಿಂದ್ರಾ ಸ್ಕಾರ್ಪಿಯೋ ಕಾರುಗಳಲ್ಲಿ ಲೋಪದೋಷ ಉಂಟಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಇದೇ ಸ್ಕಾರ್ಪಿಯೋ ಖರೀದಿಸಿದ್ದ ವ್ಯಕ್ತಿ ಸೂಕ್ತ ಸರ್ವೀಸ್, ಕಂಪನಿಯ ಸ್ಪಂದನೆ ಸಿಗದಿದ್ದಕ್ಕೆ ರೋಸಿ ಹೋಗಿ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಅದರ ಪೋಟೊಗಳು ವೈರಲ್ ಆಗುತ್ತಿವೆ.
ಹೊಸ ಮಹೀಂದ್ರಾ ಸ್ಕಾರ್ಪಿಯೋ ಸಮಸ್ಯೆ ಮುಂದುವರೆದಿದೆ, ಗ್ರಾಹಕರು ನಿರಾಶೆಗೊಂಡಿದ್ದನ್ನು ಇಲ್ಲಿ ತೋರಿಸಲಾಗಿದೆ. ಸುಮಾರು 12 ಲಕ್ಷ ರೂಪಾಯಿ ಕೊಟ್ಟು ಸ್ಕಾರ್ಪಿಯೋ ಖರೀದಿಸಿದ ನಂತರ ವ್ಯಕ್ತಿಯು ಭಾರಿ ಹಿನ್ನಡೆ, ಮಾನಸಿಕ ಹಿಂಸೆಯನ್ನು ಅನುಭವಿಸಿದ್ದಾರೆ. ಈ ಕಾರು ಖರೀದಿಸಿದ ಕೇವಲ ಒಂದು ತಿಂಗಳೊಳಗೆ, ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ.

ಮಹೀಂದ್ರಾ ಶೋರೂಂ ಮುಂದೇ ವಿನೂತನ ಪ್ರತಿಭಟನೆ
ಮಹೀಂದ್ರಾ ಸರ್ವೀಸ್ ಸೆಂಟರ್‍ಗಳನ್ನು ಅಲೆದರು ಸೂಕ್ತ ಸ್ಪಂದನೆ ದೊರೆತಿಲ್ಲ. ಅನೇಕ ಸಲ ಭೇಟಿ ನೀಡಿದರೂ ಸಹಿತ ಸಮಸ್ಯೆ ಪರಿಹರಿಸಲು ಯಾರು ಮುಂದೆ ಬಂದಿಲ್ಲ. ಇದರಿಂದ ಹತಾಶೆಗೊಂಡ ಸ್ಕಾರ್ಪಿಯೋ ಮಾಲೀಕ ವಿನೂತನ ಪ್ರತಿಭಟನೆ ಮಾರ್ಗ ಅನುಸರಿಸಿದ್ದಾರೆ. ಮಹೀಂದ್ರಾ ಶೋರೂಂ ಮುಂದೆಯೇ ಸ್ವಂತ ಕಾರು ರಸ್ತೆ ಬದಿ ನಿಲ್ಲಿಸಿದ್ದಾರೆ. ಕಾರಿನ ಮೇಲೆ ಡ್ರಂಗಟ್ಟಲೇ ಕಸವನ್ನು ತಂದು ಸುರಿದು ಕಂಪನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳದಲ್ಲಿದ್ದವರು ಪ್ರತಿಭಟನೆ ಪೋಟೋ ತೆಗೆದು ಹರಿಬಿಟ್ಟಿದ್ದಾರೆ. ಸದ್ಯ ಈ ಪೋಸ್ಟ್‌ನ್ನು @Imsonali0 ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವಾಹನ ಖರೀದಿಸದಂತೆ ನೆಟ್ಟಿಗರ ಎಚ್ಚರ
ಕಾರಿನ ಸಂಪೂರ್ಣ ಮೊತ್ತವನ್ನು ಪಾವತಿಸಿದೂ ಕಂಪನಿಯಿಂದ ಬೆಂಬಲವಾಗಲಿ, ಕಾರಿನ ತಾಂತ್ರಿಕ ಸಮಸ್ಯೆಗೆ ಪರಿಹಾರವಾಗಲಿ ಸಿಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಈ ಕಂಪನಿ ಕಾರು ಖರೀದಿಸದಂತೆ ಮನವಿ ಮಾಡಿದ್ದಾರೆ. ಜೊತೆಗೆ ತಮಗಾದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ರಸ್ತೆಗುಂಡಿಗಳಿಂದ ಬೇಸತ್ತ ಉದ್ಯಮಿಯೊಬ್ಬರು ತನ್ನ ಐಶಾರಾಮಿ ಪೋರ್ಷೆ ಕಾರಿನ ಮೇಲೆ ಸೀಮೆಂಟ್ ಕಲಿಸಿ ರಸ್ತೆಗುಂಡಿ ಮುಚ್ಚಿದ್ದ ದೃಶ್ಯ ವೈರಲ್ ಆಗಿತ್ತು. ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇವೆ.
ನೆಟ್ಟಿಗರೊಬ್ಬರು 'ಹೊಸ ಕಾರು ಸಂತೋಷ ತರಬೇಕೇ ವಿನಃ ತಲೆನೋವಲ್ಲ. ಸಮಸ್ಯೆಗಳು ಕಂಡು ಬಂದ ಕೆಲವು ದಿನಗಳಲ್ಲಿ ಕಂಪನಿ ಸರಿಯಾಗಿ ಪ್ರತಿಕ್ರಿಯಬೇಕು. ಅದು ವಿಫಲವಾದಾಗ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಮಹೀಂದ್ರಾ ಕಂಪನಿ ತನ್ನ ಮಾರಾಟ, ಸರ್ವೀಸ್ ಸೇವೆಯಲ್ಲಿ ಗಂಭೀರ ಸುಧಾರಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ' ಎಂದರು.
ಮತ್ತೊಬ್ಬರು ತಾವು ಸುಜುಕಿ ಕಾರಿನೊಂದಿಗೆ ಗೋವಾಗೆ ತೆರಳಿ ಬರುವಾಗ ಒಂದಷ್ಟು ತೊಂದರ ಆಗಿತ್ತು. ಈ ಬಗ್ಗೆ ವಿಚಾರಿಸಿದಾಗ ಮೊದಲು ಸ್ಪಂದಿಸಲಿಲ್ಲ. ವಾಹನ ಈ ಬಿಡಿ ಭಾಗದ ಸಿಗದು ಎಂದು ಹೇಳಿದ್ದರು. ಬಳಿಕ ನಾವು ಇಮೇಲ್ ಮೂಲಕ ದೂರು ನೀಡುತ್ತಿದ್ದಂತೆ ನಾವಿರುವ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿಕೊಟ್ಟರು. ಒಂದಷ್ಟು ಸಮಯ ನೀಡುವಂತೆಯು ಕೋರಿದರು. ಅವರು ವಾಹನ ರಿಪೇರಿ ಮುಗಿಸಿ ಮರಳ ನೀಡಿದಾಗ ಅದು ತೊಳೆದ ಸ್ಥಿತಿಯಲ್ಲಿತ್ತು' ಎಂದು ಸುಜುಕಿ ಕಾರಿನ ಉತ್ತಮ ಸರ್ವೀಸ್ ಸೇವೆ ಬಗ್ಗೆ ವಿವರಿಸಿದ್ದಾರೆ.
After Buying a ₹12 Lakh Scorpio, Man Faces Major Setback | New Mahindra Scorpio Continues to Have Issues, Customer Frustrated
— sonali (@Imsonali0) May 3, 2026
In Ahmedabad, a man bought a Mahindra Scorpio worth around ₹12 lakh, but he was disappointed with the service after the purchase.
Within just a month of… pic.twitter.com/feIVuH4lKo













Click it and Unblock the Notifications