Aase Serial: ಆಸೆ ಸೀರಿಯಲ್ ಜೀವಾಳವಾಗಿದ್ದ ಸೂರ್ಯ ಸಾವು: ಹೊಸ ಟ್ವಿಸ್ಟ್‌ಗೆ ಪ್ರೇಕ್ಷಕ ಕಂಗಾಲು

Aase Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಆಸೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಸೂರ್ಯ ಮೃತಪಟ್ಟಿರುವಂತೆ ತೋರಿಸಲಾಗಿದೆ. ಸ್ಟಾರ್ ಸುವರ್ಣ ವಾಹಿನಿಯಪ್ಪಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೂಡು ಕುಟುಂಬದ ಕಥೆಯಾಗಿರುವ ಈ ಸೀರಿಯಲ್‌ನಲ್ಲಿ ಹಲವು ರಂಗಭೂಮಿ ಕಲಾವಿದರು ಇದ್ದಾರೆ. ಇದೀಗ ವಿಧಿಯಾಟಕ್ಕೆ ಬಲಿಯಾಗಿಬಿಟ್ನಾ ಸೂರ್ಯ? ಎನ್ನುವ ಹೊಸ ಎಪಿಸೋಡ್ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರು ಶಾಕ್ ಆಗಿದ್ದಾರೆ.

ಕುಟುಂಬದ ಜವಾಬ್ದಾರಿ ಹೊತ್ತಿರುವ ಮೀನಾ ಮತ್ತು ಸೂರ್ಯ ಇಡೀ ಸೀರಿಯಲ್‌ನ ಕೇಂದ್ರ ಬಿಂದುವಾಗಿದ್ದರು. ಆದರೆ ಇದೀಗ ರೌಡಿಗಳೊಂದಿಗೆ ನಡೆದ ಹೊಡೆದಾಟದಲ್ಲಿ ಸೂರ್ಯ ಮೃತಪಟ್ಟಿರುವಂತೆ ತೋರಿಸಲಾಗಿದೆ. ಸೂರ್ಯ ಸಾವಿನ ಸುದ್ದಿಯನ್ನು ಕೇಳಿ ಇಡೀ ಕುಟುಂಬವೇ ಕಣ್ಣೀರಾಕಿದೆ. ಸೂರ್ಯ ತಾಯಿಯನ್ನು ನೋಡಿ ಅವರ ತಂದೆ ರಂಗನಾಥ್ ಅವರು, ಅವನು ಬದುಕಿರುವಾಗ ಒಂದು ದಿನವೂ ಅವನ ನೆರಳು ಸೋಕದಂತೆ ನಡೆದುಕೊಂಡು ಬಿಟ್ಟೆಯಲ್ಲ. ಈಗ ನೀನು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರೂ ಸಿಗದೆ ಇರುವಷ್ಟು ದೂರ ಹೋಗಿ ಬಿಟ್ಟಿದ್ದಾನೆ, ನನ್ನ ಮಗನನ್ನ ಕರೆದುಕೊಂಡು ಬಿಟ್ಯಲ್ಲಪ್ಪ, ನನ್ನ ಮಗ ದೂರವಾಗಿ ಹೋದ ಎಂದು ಸೂರ್ಯ ಅವತ ತಂದೆ ಕಣ್ಣೀರು ಹಾಕಿದ್ದಾರೆ.

Aase Serial

ಆಘಾತಕ್ಕೆ ಒಳಗಾದ ಮೀನಾ

ಸೂರ್ಯ ಸಾವನ್ನಪ್ಪಿದ್ದಾನೆ ಎನ್ನುವ ವಿಚಾರವನ್ನು ಆಕೆಯ ಪತ್ನಿ ಮೀನಾಳಿಂದ ಇನ್ನೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಸೂರ್ಯ ಸಾವು ಮೀನಾಳನ್ನು ಕಂಗಾಲಾಗಿಸಿದೆ. ಮೀನಾಳ ನೋವು ಮುಗಿಲು ಮುಟ್ಟಿದ್ದು ಮನೆಯವರು ಸಮಾಧಾನ ಮಾಡುತ್ತಿದ್ದಾರೆ. ಆದರೆ ಮೀನಾಗೆ ಸೂರ್ಯ ಸಾವನ್ನು ಎದುರಿಸುವ ಧೈರ್ಯವಾಗಿಲ್ಲ ಎನ್ನುವಂತೆ ಹೊಸ ಎಪಿಸೋಡ್‌ನಲ್ಲಿ ತೋರಿಸಲಾಗಿದೆ. ರಂಗನಾಥ್ ಮನೆ ಬೆಳಗೋ ಸೂರ್ಯ ಮುಳುಗಿಹೋಯಿತಾ ಎನ್ನುವ ಪ್ರಶ್ನೆಯೇ ಪ್ರೇಕ್ಷಕರಿಗೂ ಭಾರೀ ದೊಡ್ಡ ಶಾಕ್ ನೀಡಿದೆ.

ಇನ್ನು ಮತ್ತೊಂದು ಕಡೆ ರೋಹಿಣಿಗೆ ಮೊದಲೇ ಮದುವೆಯಾಗಿರೋ ವಿಷಯ ಮನೋಜ್‌ಗೆ ಗೊತ್ತಾದ್ರೆ ಅವರ ಸಂಬಂಧ ಮುರಿದುಬೀಳುತ್ತಾ ಎನ್ನುವ ಪ್ರಶ್ನೆಯೂ ಎದುರಾಗಿದೆ. ರೋಹಿಣಿಗೆ ಈಗಾಗಲೇ ಮಗು ಇರುವ ವಿಚಾರವು ಸಹ ಹಲವು ಎಪಿಸೋಡ್‌ಗಳ ನಂತರ ಈಚೆಗೆ ರಿವೀಲ್ ಆಗಿತ್ತು. ಈ ಶಾಕ್‌ನಿಂದ ಹೊರ ಬರುವ ಮೊದಲೇ ಸೂರ್ಯ ಸಾವನ್ನಪ್ಪಿದ್ದಾನೆ ಎನ್ನುವ ಸಂಗತಿಯು ಈ ಸೀರಿಯಲ್ ಪ್ರೇಕ್ಷಕರಲ್ಲಿ ಆಘಾತವನ್ನುಂಟು ಮಾಡಿದೆ.

ಪ್ರೇಕ್ಷಕರು ಹೇಳಿದ್ದೇನು

ಆಸೆ ಸೀರಿಯಲ್‌ನ ಅನಿರೀಕ್ಷಿತ ತಿರುವಿಗೆ ಪ್ರೇಕ್ಷಕರು ಶಾಕ್ ಆಗಿದ್ದು. ಸೂರ್ಯ ಸತ್ತರೆ ನಾವು ಸೀರಿಯಲ್ ನೋಡುವುದಿಲ್ಲ ಅಂತ ಹೇಳಿದ್ದಾರೆ. ಭಾಗ್ಯ ಎನ್ನುವವರು ರೋಹಿಣಿ ಯಾವಾಗ್ಲೂ ಗೆಲ್ಲುತ್ತಾಳೆ ಎಂದರೆ ಸತ್ಯಕ್ಕೆ ಬೆಲೆನೇ ಇಲ್ವಾ, ಸೂರ್ಯ ಇಲ್ಲದಿರೋ ಆಸೆ ಧಾರಾವಾಹಿ ನೋಡಲು ಯೋಗ್ಯವಲ್ಲ ಇದೆ ನನ್ನ ಆಸೆ ಎಂದಿದ್ದಾರೆ. ಸೂರ್ಯನೆ ಆಸೆ ಸೀರಿಯಲ್‌ನ ಜೀವಾಳವಾಗಿದ್ದರು. ಅವರ ಕಾಮಿಡಿಯು ಸೀರಿಯಲ್‌ನಲ್ಲಿ ಚೆನ್ನಾಗಿ ಮೂಡಿಬರುತ್ತಿತ್ತು. ಹೀಗಾಗಿ, ಸೀರಿಯಲ್‌ನಲ್ಲಿ ಸೂರ್ಯ ಪಾತ್ರ ಮುಗಿಸಬೇಡಿ ಅಂತ ಪ್ರೇಕ್ಷಕರು ಮನವಿ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+