Get Updates
Get notified of breaking news, exclusive insights, and must-see stories!

ಸೂಪರ್ ಮಾರ್ಕೆಟ್‌ನಲ್ಲಿ ಹಲ್ಲೆ ಓರ್ವ ಸಾವು, ಜನಪ್ರಿಯ ಫುಟ್ಬಾಲರ್‌ಗೆ ಗಾಯ

ಮಿಲಾನ್, ಅ.28: ಇಟಲಿಯ ಅಸಾಗೋದಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವ ವರದಿ ಬಂದಿದೆ. ಇದೇ ಘಟನೆಯಲ್ಲಿ ಅಲ್ಲಿದ್ದ ಸ್ಪ್ಯಾನಿಷ್ ಫುಟ್‌ಬಾಲ್ ಆಟಗಾರ ಪಾಬ್ಲೊ ಮಾರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮಿಲಾನ್‌ನ ಉಪನಗರವಾದ ಅಸ್ಸಾಗೋದಲ್ಲಿನ ಶಾಪಿಂಗ್ ಸೆಂಟರ್‌ನಲ್ಲಿ ದಾಳಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಂಕಿತ 46 ವರ್ಷದ ಇಟಾಲಿಯನ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಜನರನ್ನು ಇರಿದು ಹಾಕಲು ನಿರ್ಧರಿಸಿ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ್ದ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿ ಈ ಹಿಂದೆ ಈ ರೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳಿಲ್ಲ. ಆತನಿಗೆ ದಾಳಿಯ ಉದ್ದೇಶ ತಿಳಿದಿಲ್ಲ, ಆದರೆ ಆ ವ್ಯಕ್ತಿ ಮಾನಸಿಕವಾಗಿ ಅಸ್ಥಿರವಾಗಿರುವ ಲಕ್ಷಣಗಳನ್ನು ತೋರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದು ಯಾವುದೇ ಭಯೋತ್ಪಾದನೆ ಕೃತ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಗಾಯಗೊಂಡವರ ಪೈಕಿ ಆರ್ಸೆನಲ್‌ನಿಂದ ಸೀರಿ ಎ ಕ್ಲಬ್ ಪರ ಮೊನ್ಜಾಗೆ ಆಡಲು ತೆರಳಿರುವ ಪಾಬ್ಲೊ ಮಾರಿ ಕೂಡಾ ಸೇರಿದ್ದಾರೆ.

 Footfall Player Pablo Mari

ಆರ್ಸೆನಲ್ ಕ್ಲಬ್ ಹೇಳಿಕೆ

ದಾಳಿಯ ನಂತರ, ಆರ್ಸೆನಲ್ ಹೇಳಿಕೆಯನ್ನು ನೀಡಿ, ಪ್ಯಾಬ್ಲೋ ಮಾರಿ "ಗಂಭೀರವಾಗಿ ಗಾಯಗೊಂಡಿಲ್ಲ" ಆದರೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದೆ. "ಪ್ಯಾಬ್ಲೋ ಮಾರಿ ಮತ್ತು ಇಟಲಿಯಲ್ಲಿ ಇಂದಿನ ಭೀಕರ ಘಟನೆಯ ಸಂತ್ರಸ್ತರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ನಾವು ಪಾಬ್ಲೊ ಅವರ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿರುತ್ತೇವೆ ಮತ್ತು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಂಭೀರವಾಗಿ ಗಾಯಗೊಂಡಿಲ್ಲ ಎಂದಿದೆ.

"ಆತ್ಮೀಯ ಪಾಬ್ಲೋ, ನಾವೆಲ್ಲರೂ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದೇವೆ, ನಾವು ನಿಮಗೆ ಶುಭ ಹಾರೈಸುತ್ತೇವೆ, ಹೇಗೆ ಮಾಡಬೇಕೆಂದು ನಿಮಗೆ ತಿಳಿದಿರುವಂತೆ ಹೋರಾಡುತ್ತಿರಿ, ನೀವು ಯೋಧ ಮತ್ತು ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಿ" ಎಂದು ಮೊನ್ಜಾ ಅವರ ಅಧಿಕೃತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ಮೊನ್ಜಾ ಕಾರ್ಯಕಾರಿ ಅಧಿಕಾರಿ ಗಲಿಯಾನಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+