ಆಪಲ್ ಕಂಪೆನಿಗೂ ಆಪಲ್ ಹಣ್ಣಿಗೂ ಗೊಂದಲಕ್ಕೆ ಈಡಾದ ಪಾಕ್ ಸುದ್ದಿ ನಿರೂಪಕಿ

ಆಪಲ್ ಕಂಪೆನಿಯನ್ನು ಸೇಬು ಹಣ್ಣಿನೊಂದಿಗೆ ಕನ್ ಫ್ಯೂಸ್ ಆದ ಪಾಕಿಸ್ತಾನದ ಸುದ್ದಿ ನಿರೂಪಕಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ. ಟೀವಿ ಚಾನೆಲ್ ವೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ಬಗ್ಗೆ ತಮಾಷೆ ಮಾಡುವಂತಾಗಿದೆ. ಪತ್ರಕರ್ತರಾದ ನಾಲಿಯಾ ಇನಾಯತ್ ಈ ವಿಡಿಯೋ ಷೇರ್ ಮಾಡಿದ್ದಾರೆ.

ಸ್ಟುಡಿಯೋದಲ್ಲಿ ಪ್ಯಾನೆಲಿಸ್ಟ್ ವೊಬ್ಬರ ಜತೆ ಸುದ್ದಿ ನಿರೂಪಕಿ ಚರ್ಚೆಯಲ್ಲಿ ತೊಡಗಿದ್ದಾಗ, ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಬಗ್ಗೆ ಆತ ವಿವರಿಸುತ್ತಾ, "ಆಪಲ್ ನವರ ವಹಿವಾಟಿನ ಮೊತ್ತವೇ ಪಾಕಿಸ್ತಾನದ ವಾರ್ಷಿಕ ಬಜೆಟ್ ಗಿಂತ ಹೆಚ್ಚಿದೆ" ಎಂದು ಹೇಳಿದ್ದಾರೆ. ಆಗ ಸುದ್ದಿ ನಿರೂಪಕಿ, ಹೌದು. ನಾನು ಕೂಡ ಕೇಳಿದ್ದೇನೆ; ಒಂದು ಸೇಬು ಹಣ್ಣಿನ ಬೆಲೆಯೇ ವಿಪರೀತ ದುಬಾರಿ ಆಗಿದೆಯಂತೆ ಎಂದು ಹೇಳಿದ್ದಾರೆ.

Apple company confused with apple fruit by Pakistan news anchor

ತಕ್ಷಣವೇ ಆಕೆಯ ತಪ್ಪನ್ನು ಸರಿಪಡಿಸಿದ ಪ್ಯಾನೆಲಿಸ್ಟ್, ನಾನು ಮಾತನಾಡುತ್ತಿರುವುದು ಆಪಲ್ ಕಂಪೆನಿ ಬಗ್ಗೆ ಎಂದಿದ್ದಾರೆ. ಆಗ ಸುದ್ದಿ ನಿರೂಪಕಿಯು ನಗುನಗುತ್ತಾ, ನಾಚಿಕೊಳ್ಳುತ್ತಾ ತನ್ನ ತಪ್ಪನ್ನು ತಿದ್ದುಕೊಂಡು, ಚರ್ಚೆ ಮುಂದುವರಿಸಿದ್ದಾರೆ. ಇನ್ನು ಈ ಚರ್ಚೆ ಈಗ ನೋಡುಗರ ಗೇಲಿಯ ವಿಷಯ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+