ಅಬ್ಬಾ ಜಸ್ಟ್ ಮಿಸ್! ಹೆಚ್ಚು-ಕಮ್ಮಿ ಆಗಿದ್ರೆ ಇರಾನ್ ಪೂರ್ತಿ ಉಡೀಸ್!
ಇರಾನ್ ಗ್ರಹಚಾರವೇ ಸರಿ ಇಲ್ಲ ಅಂತಾ ಕಾಣುತ್ತೆ, ಏಕೆಂದರೆ ಸುತ್ತ ಶತ್ರುಗಳನ್ನೇ ಸಾಕಿಕೊಂಡು ಪರದಾಡುವ ಸ್ಥಿತಿ ಆ ದೇಶದ್ದು. ಈಗ ಕೂಡ ಅಷ್ಟೇ ಇರಾನ್ ಶತ್ರು ರಾಷ್ಟ್ರಗಳು ಮತ್ತೊಮ್ಮೆ ಆ ದೇಶಕ್ಕೆ ಉಪಟಳ ಕೊಟ್ಟಿವೆ. ಕೆಲವು ದಿನಗಳ ಹಿಂದೆ ದೈತ್ಯ ಹಡಗು ಕಳೆದುಕೊಂಡು ಕೊರಗುತ್ತಿರುವ ಇರಾನ್‌ಗೆ, ನ್ಯೂಕ್ಲಿಯರ್ ಪ್ಲ್ಯಾಂಟ್‌ನ ಸಮೀಪವೇ ಶತ್ರುಗಳು ಚಮಕ್ ಕೊಟ್ಟಿದ್ದಾರೆ.
Recommended Video
ಇರಾನ್ ಪರಮಾಣು ಸ್ಥಾವರದ ಮೇಲೆ ಡ್ರೋಣ್ ಹಾರಿಸುವ ಮೂಲಕ ದಾಳಿಗೆ ವಿಫಲ ಯತ್ನ ನಡೆಸಲಾಗಿದೆ. ಈ ಬಗ್ಗೆ ಖುದ್ದು ಇರಾನ್ ಪ್ರತಿಕ್ರಿಯೆ ನೀಡಿದ್ದು, ಅನುಮಾನ ಬಂದ ಕೂಡಲೇ ಕ್ರಮ ಕೈಗೊಂಡಿದ್ದೇವೆ. ಹೀಗಾಗಿ ನಮ್ಮ ಅಣುಸ್ಥಾವರ ಸೇಫ್ ಆಗಿದೆ ಎಂದಿದೆ. ಆದ್ರೆ ಎಲ್ಲೋ ಎಡವಟ್ಟಾಗಿದೆ ಅನ್ನೋದು ಇರಾನ್ ಹೇಳಿಕೆಯಿಂದ ಗೊತ್ತಾಗುತ್ತಿದೆ. ಏಕೆಂದರೆ ಇರಾನ್ ಮೇಲೆ ಪದೇ ಪದೆ ಇಂತಹ ದಾಳಿಗಳು ನಡೆಯುತ್ತಿವೆ.
ಹೀಗೆ ದಾಳಿ ನಡೆದಾಗೆಲ್ಲಾ ಇರಾನ್ ಬಚಾವ್ ಆಗುತ್ತಿದ್ದರೂ, ಭವಿಷ್ಯದಲ್ಲಿ ಇರಾನ್ ನ್ಯೂಕ್ಲಿಯರ್ ಪ್ಲಾಂಟ್‌ಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಏಕೆಂದರೆ ಅಕಸ್ಮಾತ್ ಇರಾನ್ ಅಣುಸ್ಥಾವರದಲ್ಲಿ ದುರಂತ ನಡೆದರೆ, ಇಡೀ ಜಗತ್ತೇ ಅದರ ಪರಿಣಾಮ ಎದುರಿಸಬೇಕು. ಈಗಾಗಲೇ ಜಪಾನ್ ವಿಷಯದಲ್ಲಿ ಇಂತಹ ದುರಂತ ನಡೆದಿದೆ. ಹೀಗಾಗಿಯೇ ಇರಾನ್‌ನಲ್ಲಿ ನಡೆದಿರುವ ಘಟನೆ ಆತಂಕ ಮೂಡಿಸಿದೆ.

ಘಟನೆಗೆ ಮುನ್ನ ಆಗಿದ್ದೇನು..?
ಒಂದು ನ್ಯೂಕ್ಲಿಯರ್ ಪ್ಲಾಂಟ್ ನಿರ್ಮಾಣ ಆಯ್ತು ಎಂದರೆ ಮುಗೀತು ಕಥೆ, ಆ ಪ್ರದೇಶದ ಸುತ್ತ ಅನುಮತಿ ಇಲ್ಲದೆ ಬರೋದು ಇರಲಿ. ಹೆಚ್ಚು ಹೊತ್ತು ಆ ಪ್ರದೇಶವನ್ನ ನೋಡುತ್ತಾ ನಿಲ್ಲೋಕು ಸಾಧ್ಯವಿಲ್ಲ. ಹಾಗೇನಾದ್ರು ಮಾಡಿದ್ರೆ ತಕ್ಷಣ ಅಲ್ಲಿಗೆ ಭದ್ರತಾ ಅಧಿಕಾರಿಗಳು ಓಡೋಡಿ ಬರ್ತಾರೆ, ಬಂದವರೆ ಎತ್ತಾಕ್ಕೊಂಡು ಹೋಗ್ತಾರೆ. ಹೌದು, ಒಂದು ನ್ಯೂಕ್ಲಿಯರ್ ಪ್ಲಾಂಟ್ ಅಂದಮೇಲೆ ಇಷ್ಟಾದರೂ ಸೆಕ್ಯೂರಿಟಿ ಇರಬೇಕು. ಇಲ್ಲ ಅಂದ್ರೆ ಅಲ್ಲಿ ಅಹಿತಕರ ಘಟನೆಗಳು ಮಾಮೂಲಿ ಆಗಿಬಿಡುತ್ತವೆ. ಅಕಸ್ಮಾತ್ ಒಂದು ಅಣುಸ್ಥಾವರ ಸ್ಫೋಟಿಸಿದರೂ ಲಕ್ಷ ಲಕ್ಷ ವರ್ಷ ಅದರ ಪರಿಣಾಮ ಇರುತ್ತದೆ. ಆದರೆ ಇರಾನ್ ಅಣುಸ್ಥಾವರದ ಮೇಲೆ ಪದೇ ಪದೆ ಇಂತಹದ್ದೇ ದಾಳಿಗಳು ನಡೆಯುತ್ತಿವೆ. ಈಗ ನೋಡಿದರೆ ಡ್ರೋಣ್ ಬಳಸಿ ಬಾಂಬ್ ಹಾಕಲು ಯತ್ನಿಸಿದ್ದಾ ಕಿರಾತಕರು.

ಅಣು ವಿಜ್ಞಾನಿಯ ಭೀಕರ ಹತ್ಯೆ
ನವೆಂಬರ್ 27ರಂದು ಇರಾನ್ ಅಣು ವಿಜ್ಞಾನಿ ಮೊಹ್ಸೆನ್ ಫಖ್ರಿಜಾದೆಹ್ ಕಾರ್‌ನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿಗೆ ಇಸ್ರೇಲ್ ರೂವಾರಿ ಎಂದು ಇರಾನ್ ಆರೋಪ ಮಾಡಿತ್ತು. ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹ್ಸೆನ್ ಫಖ್ರಿಜಾದೆಹ್ ಕಾರನ್ನ ಅಡ್ಡಹಾಕಿ ಮಷಿನ್ ಗನ್ ಬಳಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಮಾಸುವ ಮೊದಲೇ ಇರಾನ್‌ನ ಅಣು ಕೇಂದ್ರಗಳ ಮೇಲೆ ಸೈಬರ್ ದಾಳಿ ನಡೆದಿರುವುದು ಮಧ್ಯಪ್ರಾಚ್ಯ ಶಾಂತಿಗೆ ಭಂಗ ತಂದಿದೆ. ಪ್ರತಿಕಾರಕ್ಕಾಗಿ ಇರಾನ್ ಕಾದು ಕುಳಿತಿದ್ದು, ಇಸ್ರೇಲ್‌ಗೆ ಕೌಂಟರ್ ಕೊಡುವ ಲೆಕ್ಕಾಚಾರ ಹಾಕುತ್ತಿದೆ.

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್
ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್‌ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್‌ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ.

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ
ಅಂದಹಾಗೆ ದಶಕದ ಹಿಂದೆ ಇರಾನ್ ಪರಮಾಣು ಯೋಜನೆ ಪ್ರಾರಂಭಿಸಿದ ನಂತರ ಫಖ್ರಿಜಾದೆಹ್ ರೀತಿ ಹಲವು ವಿಜ್ಞಾನಿಗಳನ್ನ ಕೊಂದು ಹಾಕಲಾಗಿದೆ. ಎಲ್ಲಾ ಕೊಲೆಗಳ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬುದು ಇರಾನ್ ಆರೋಪ. ಒಂದು ಕಡೆ ಅರಬ್ ರಾಷ್ಟ್ರಗಳು ಒಂದೊಂದಾಗಿ ಇಸ್ರೇಲ್ ಜೊತೆಗಿನ ದ್ವೇಷ ಮರೆತು ಸ್ನೇಹ ಸಾಧಿಸುತ್ತಿವೆ. ಆದರೆ ಇರಾನ್ ಮಾತ್ರ ಇಸ್ರೇಲ್ ಜೊತೆಗೆ ಸ್ನೇಹ ಮಾಡಲು ಬಿಲ್‌ಕುಲ್ ಸಿದ್ಧವಿಲ್ಲ. ಇದು ಉರಿವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ದಿನದಿಂದ ದಿನಕ್ಕೆ ಎರಡೂ ರಾಷ್ಟ್ರಗಳ ಸಂಬಂಧ ಹಳಸುತ್ತಿದೆ.












Click it and Unblock the Notifications