ಕಾಬೂಲ್‌ನಲ್ಲಿ ಮತ್ತೆ ದಾಳಿ ನಡೆಯಲಿದೆ; ಅಮೆರಿಕ ಎಚ್ಚರಿಕೆ

ಕಾಬೂಲ್, ಆಗಸ್ಟ್ 29; ಕಾಬೂಲ್ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತೆ ದಾಳಿ ನಡೆಯಲಿದೆ. ತಕ್ಷಣ ಆ ಪ್ರದೇಶವನ್ನು ಖಾಲಿ ಮಾಡಿ ಎಂದು ಅಮೆರಿಕ ತನ್ನ ನಾಗರಿಕರು ಮತ್ತು ಸೇನಾ ಪಡೆಗೆ ಸೂಚನೆ ನೀಡಿದೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಈ ಕುರಿತು ಸಂಭಾವ್ಯ ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. "24 ರಿಂದ 36 ಗಂಟೆಗಳಲ್ಲಿ ದೊಡ್ಡ ದಾಳಿ ನಡೆಯಬಹುದು. ಜನರು ಆ ಪ್ರದೇಶ ತೊರೆಯುವುದು ಒಳ್ಳೆಯದು" ಎಂದು ಎಚ್ಚರಿಸಿದ್ದಾರೆ.

"ಕಾಬೂಲ್ ವಿಮಾನ ನಿಲ್ದಾಣದ ಸುತ್ತಲೂ ಪರಿಸ್ಥಿತಿ ಬಹಳ ಅಪಾಯಕಾರಿಯಾಗಿದೆ. ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಯುವ ಸಾಧ್ಯತೆ ಬಹಳ ಹೆಚ್ಚಿದೆ. 24 ರಿಂದ 36 ಗಂಟೆಗಳಲ್ಲಿ ದಾಳಿ ನಡೆಯಲಿದೆ ಎಂದು ನಮ್ಮ ಕಮಾಂಡರ್‌ಗಳು ಸೂಚನೆ ನೀಡಿದ್ದಾರೆ" ಎಂದು ಜೋ ಬೈಡನ್ ಹೇಳಿದ್ದಾರೆ.

Kabul Airport

ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ನಿಲ್ದಾಣ ಸುತ್ತ ಇರುವ ಅಮೆರಿಕ ನಾಗರಿಕರು ತಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಹ ಎಚ್ಚರಿಕೆ ರವಾನಿಸಿದೆ.

ಗುರುವಾರ ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ 13 ಅಮೆರಿಕದ ಸೈನಿಕರು ಸೇರಿದಂತೆ 78 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಅಮೆರಿಕ ಶನಿವಾರ ನಡೆಸಿದ ಡ್ರೋಣ್ ದಾಳಿಯಲ್ಲಿ ಇಬ್ಬರು ಐಎಸ್ಐಎಸ್ ಉಗ್ರರು ಮೃತಪಟ್ಟಿದ್ದರು.

ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಅಮೆರಿಕ ಶನಿವಾರ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತಿಕಾರವಾಗಿ ಐಎಸ್ಐಎಸ್ ಉಗ್ರರು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಅಮೆರಿಕ ಎಚ್ಚರಿಕೆ ರವಾನೆ ಮಾಡಿದೆ.

ಅಮೆರಿಕದ ಮಿಲಿಟರಿ ಪಡೆಯ ಕೊನೆಯ ವಿಮಾನ ಕಾಬೂಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಮೆರಿಕದ ನಾಗರಿಕರು, ಮಿಲಿಟರಿ ಪಡೆಗಳ ಸ್ಥಳಾಂತರ ಕಾರ್ಯ ಆಗಸ್ಟ್ 31ರ ಮೊದಲೇ ಪೂರ್ಣಗೊಂಡಿದೆಯೇ? ಎಂದು ಅಮೆರಿಕ ಇನ್ನೂ ಅಧಿಕೃತವಾಗಿ ಹೇಳಿಲ್ಲ.

ಗುರುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಅಮೆರಿಕ ಸ್ಥಳಾಂತರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿತ್ತು. ದಾಳಿಯ ಬಳಿಕ ಅಮೆರಿಕ ವಿಮಾನ ನಿಲ್ದಾಣದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಈಗ ಮತ್ತೊಂದು ದಾಳಿಯ ಎಚ್ಚರಿಕೆ ಬಂದಿದೆ.

ಸ್ಪೇನ್ ಈಗಾಗಲೇ ತನ್ನ ದೇಶದ ಎಲ್ಲಾ ನಾಗರಿಕರನ್ನು ಸ್ಥಳಾಂತರ ಮಾಡಿರುವುದಾಗಿ ಘೋಷಣೆ ಮಾಡಿದೆ. ಅಮೆರಿಕದ ಕೊನೆಯ ಮಿಲಿಟರಿ ವಿಮಾನ ಸಹ ಟೇಕಾಫ್ ಆಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇನ್ನೂ ಯಾವ ದೇಶದ ನಾಗರಿಕರು ಕಾಬೂಲ್‌ನಲ್ಲಿ ಉಳಿದಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

ಗುರುವಾರದ ದಾಳಿ ಬಳಿಕ ಕಾಬೂಲ್ ವಿಮಾನ ನಿಲ್ದಾಣದ ಸುತ್ತಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಜನರು ಸಹ ಆತಂಕಗೊಂಡಿದ್ದರು. ಶನಿವಾರ ವಿಮಾನ ನಿಲ್ದಾಣದ ಮುಖ್ಯ ದ್ವಾರದ ಬಳಿಕ ಗುಂಡಿನ ದಾಳಿ ಸಹ ನಡೆದಿತ್ತು.

ಅಮೆರಿಕ ನಡೆಸಿದ ಮಾನವ ರಹಿತ ಡ್ರೋನ್ ದಾಳಿಯಲ್ಲಿ ಮೃತಪಟ್ಟವರು ಐಎಸ್‌ಐಎಸ್‌ನ ಖುರಾಸನ್ ಘಟಕದ ಇಬ್ಬರು ಉಗ್ರರಾಗಿದ್ದಾರೆ, ಮತ್ತೊಬ್ಬ ಉಗ್ರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಮೆರಿಕ ಹೇಳಿತ್ತು. ಆದರೆ ಇವರು ವಿಮಾನ ನಿಲ್ದಾಣದ ಬಳಿ ನಡೆದ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದರೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಶನಿವಾರ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಐಎಸ್‌ಐಎಸ್ ಉಗ್ರರು ಕಾಬೂಲ್‌ನಲ್ಲಿ ದಾಳಿ ನಡೆಸಬಹುದು ಎಂಬ ಸೂಚನೆ ಸಿಕ್ಕಿದೆ. ಅದಕ್ಕಾಗಿಯೇ ಅಮೆರಿಕ ನೇರವಾಗಿ ಸೇನಾಪಡೆ, ನಾಗರಿಕರಿಗೆ ಈ ಕುರಿತು ಎಚ್ಚರಿಕೆ ರವಾನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+