• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಪುವಾ ನ್ಯೂ ಗಿನಿಯಾದಲ್ಲಿ ಭೂಕಂಪ: 7.3 ತೀವ್ರತೆ ದಾಖಲು

|

ನ್ಯೂ ಬ್ರಿಟೇನ್(ಪಪುವಾ ನ್ಯೂ ಗಿನಿಯಾ), ಅಕ್ಟೋಬರ್ 11: ನ್ಯೂ ಗಿನಿಯಾದ ದ್ವೀಪಗಳ ದೇಶ ಪಪುವಾ ನ್ಯೂ ಗಿನಿಯಾದಲ್ಲಿ ಇಂದು ಬೆಳಿಗ್ಗೆ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ.

ಹೈಟಿಯಲ್ಲಿ 5.9ರ ತೀವ್ರತೆಯ ಭೂಕಂಪ, ಕನಿಷ್ಠ 11 ಮಂದಿ ಸಾವು

ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ, ಮೊದಲು ಸುನಾಮಿ ಎಚ್ಚರಿಕೆ ನೀಡಲಾಗಿತ್ತಾದರೂ ನಂತರ ಸುನಾಮಿಯಾಗುವ ಸಂಭವವೂ ಕಡಿಮೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್

ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ಸುಮಾರು 7 ಗಂಟೆಯ ಸಮಯಕ್ಕೆ ಭೂಕಂಪ ಸಂಭವಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೇ ಹೈಟಿಯ ವಾಯವ್ಯ ತೀರದಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದಿಂದಾಗಿ ಕನಿಷ್ಠ 11 ಮಂದಿ ಮೃತರಾಗಿದ್ದರು.

ವೈರಲ್ ವಿಡಿಯೋ: ಭೂಕಂಪ-ಸುನಾಮಿ ನಂತರ ಹೇಗಾಗಿದೆ ನೋಡಿ ಇಂಡೋನೇಷ್ಯಾ

ಇಂಡೋನೇಷ್ಯದಲ್ಲಿ ಇತ್ತೀಚೆಗೆ ಸಂಭವಿಸಿದ 7.5 ತೀವ್ರತೆಯ ಭೂಕಂಪ ಮತ್ತು ನಂತರ ಎದ್ದ ಸುನಾಮಿಯಲ್ಲಿ ಸುಮಾರು 1400 ಕ್ಕೂ ಹೆಚ್ಚು ಜನ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
An earthquake of 7.3 magnitude hits Papua New Guinea today. more details awaited. There is Tsunami alert also. Independent State of Papua New Guinea, is an Oceanian country that occupies the eastern half of the island of New Guinea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X