ವೆನಿಜುವೆಲಾದಲ್ಲಿ ದೊಂಬಿ, ಲೂಟಿಗೆ ಕಾರಣವಾದ ನೋಟು ನಿಷೇಧ

Posted By:
Subscribe to Oneindia Kannada

ವೆನಿಜುವೆಲಾ, ಡಿಸೆಂಬರ್ 19: ವೆನಿಜುವೆಲಾದಲ್ಲಿನ ನೋಟು ನಿಷೇಧ ನಿರ್ಧಾರ ಅಲ್ಲಿನ ರಾಷ್ಟ್ರಪತಿ ನಿಕೋಲಾಸ್ ಮಡುರೋಗೆ ಉಲ್ಟಾ ಹೊಡೆದಿದ್ದು, ಆ ಕಾರಣಕ್ಕೆ ಜನವರಿ 2ರ ತನಕ ನೋಟು ನಿಷೇಧ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸದ್ಯಕ್ಕಂತೂ ನೂರು ಬೊಲಿವರ್ ಬಿಲ್ ಚಲಾವಣೆಯಲ್ಲಿ ಮುಂದುವರಿಯಲಿದೆ.

ಅದರೆ, ಬ್ರೆಜಿಲ್, ಕೊಲಂಬಿಯಾದ ಗಡಿಯನ್ನು ಮುಚ್ಚಲಾಗಿದೆ. ದೇಶವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಇಲ್ಲಿನ ಹಣವನ್ನು ಹೊರಗೆ ತೆಗೆದುಕೊಂಡು ಹೋಗುವ 'ಮಾಫಿಯಾ'ಗಳ ಆಟವನ್ನು ತಡೆಯಬೇಕು ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. "ನೀವು ಸಮಾಧಾನದಿಂದ ನೂರು ಬಿಲ್ ನ ಖರೀದಿಗೆ ಬಳಸಬಹುದು" ಎಂದು ಮಡುರೋ ತಿಳಿಸಿದ್ದಾರೆ.[ನೋಟು ಬದಲಾವಣೆ ನಿರ್ಧಾರ ಯಾವ್ಯಾವ ದೇಶದಲ್ಲಿ ಸೋತಿದೆ?]

ವೆನಿಜುವೆಲಾದಲ್ಲಿ ಹಣದುಬ್ಬರದ ಪ್ರಮಾನ ತೀವ್ರವಾಗಿ ಹೆಚ್ಚಾಗಿದೆ. ಐಎಂಎಫ್ ಪ್ರಕಾರ ಈ ವರ್ಷ ಹಣದುಬ್ಬರ ಪ್ರಮಾಣ 475 ಪರ್ಸೆಂಟ್ ತಲುಪುವ ಸಾಧ್ಯತೆ ಇದೆ. ಅಲ್ಲಿನ ಸರಕಾರ ಹೊಸದಾಗಿ ಈಗಿನ ಮುಖಬೆಲೆಗಿಂತ ಇನ್ನೂರು ಪಟ್ಟು ಹೆಚ್ಚಿನ ಬೆಲೆಯ ನೋಟುಗಳನ್ನು ಪರಿಚಯಿಸಲು ಮುಂದಾಗಿದೆ. ಆದರೆ 100-ಬೊಲಿವರ್ ನೋಟು ನಿಷೇಧಕ್ಕೆ ಕಲ್ಲೋಲ ಸೃಷ್ಟಿಯಾಗಿದೆ.

Amid unrest, riots and looting,Maduro delays demonetisation

ಈ ದೇಶದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದ ಹಿಂಸಾಚಾರ ಇದೆ. ಕ್ರಿಸ್ ಮಸ್ ಕಣ್ಣೆದುರಿಗೆ ಇದ್ದು, ಅದಕ್ಕಾಗಿ ಷಾಪಿಂಗ್ ಕೂಡ ಮಾಡಲಾಗದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ಅಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಆದರೆ ಅಧಿಕಾರಿಗಳು ಈ ಸಂಖ್ಯೆಯನ್ನು ಖಾತ್ರಿ ಪಡಿಸಿಲ್ಲ.

ಲೂಟಿಯಲ್ಲಿ ತೊಡಗಿದ್ದ ನೂರಾ ಮೂವತ್ತೈದು ಜನರನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಮಡುರೋ ಪರ ಗವರ್ನರ್ ಫ್ರಾನ್ಸಿಸ್ಕೋ ರಾಂಜೆಲ್ ಗೊಮೆಜ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With protests rocking his unpopular government, embattled President Nicolas Maduro delayed until January 2 taking Venezuela’s highest denomination bill out of circulation.
Please Wait while comments are loading...