Get Updates
Get notified of breaking news, exclusive insights, and must-see stories!

ಜಿ20 ಸಮ್ಮೇಳನದಲ್ಲಿ ಚೀನಾದ ಎರಡು ನಾಲಿಗೆಗಳ ಅನಾವರಣ

ಜಿ-20 ಸಮ್ಮೇಳನಲ್ಲಿ ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರಿಂದ ಪ್ರಧಾನಿ ಮೋದಿ ಶ್ಲಾಘನೆ. ಇತ್ತ, ಸಿಕ್ಕಿಂ ಗಡಿಯಲ್ಲಿ ಚೀನಾ ಸೇನೆಯ ಸಮರಾಭ್ಯಾಸ ಜಾರಿ.

ಹ್ಯಾಂಬರ್ಗ್, ಜುಲೈ 7: ಭಾರತದ ವಿರುದ್ಧ ಗಡಿಭಾಗದಲ್ಲಿ ಕತ್ತಿ ಮಸೆಯುತ್ತಿರುವ ಚೀನಾ, ದೂರದ ಜರ್ಮನಿಯಲ್ಲಿ ಶುಕ್ರವಾರ ಆರಂಭವಾಗಿರುವ ಜಿ20 ಸಮ್ಮೇಳನದಲ್ಲಿ ಭಾರತವನ್ನು ಹಾಡಿ ಹೊಗಳಿದೆ. ಇದು, ಚೀನಾದ ಎರಡು ನಾಲಿಗೆಯ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ.

ಸಮ್ಮೇಳನದಲ್ಲಿ ಭಾಗವಹಿಸಿರುವ ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರು, ಇದೇ ಸಮಾವೇಶದಲ್ಲಿ ಭಾಗವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಹಾಡಿ ಹೊಗಳಿದ್ದಾರೆ.

ಉಗ್ರವಾದದ ವಿರುದ್ಧ ಮೋದಿಯವರು ಹೋರಾಡುತ್ತಿರುವ ಶೈಲಿಯನ್ನು ಮೆಚ್ಚಿಕೊಂಡ ಅವರು, ಬ್ರಿಕ್ಸ್ ರಾಷ್ಟ್ರಗಳನ್ನು ಒಗ್ಗೂಡಿಸಿ ಹೊಸ ದಿಗಂತದತ್ತ ಕರೆಯೊತ್ತಿರುವ ಮೋದಿಯವರ ಕೆಲಸ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದ್ದಾರೆ. ಔಪಚಾರಿಕ ಸಮಾರಂಭದ ನಂತರ ಪರಸ್ಪರ ನಾಯಕರು ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.

ಆದರೆ, ಜಿನ್ ಪಿಂಗ್ ಅವರ ಈ ಮಾತುಗಳು ಪ್ರಸಕ್ತ ಸನ್ನಿವೇಶದಲ್ಲಿ ನಾಟಕೀಯ ಎನಿಸುತ್ತಿವೆ. ಅತ್ತ, ಜಿನ್ ಪಿಂಗ್ ಅವರು ಭಾರತವನ್ನು ಹಾಡಿ ಹೊಗಳುತ್ತಿದ್ದರೆ, ಇತ್ತ ಸಿಕ್ಕಿಂ ಗಡಿಯಲ್ಲಿ ಚೀನಾ ಸಮರಾಭ್ಯಾಸ ಜಾರಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಭಾರತದ ಮುಗಿಬೀಳುವ ಆತಂಕವನ್ನು ಸೃಷ್ಟಿಸಿದೆ.

ಔಪಚಾರಿಕ ಭೇಟಿಯಷ್ಟೇ!

ಔಪಚಾರಿಕ ಭೇಟಿಯಷ್ಟೇ!

ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನ ಶುಕ್ರವಾರ ಆರಂಭವಾಯಿತು. ಈ ಸಮ್ಮೇಳನಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಹಾಗೂ ಚೀನಾದ ಅಧ್ಯಕ್ಷ ಜಿನ್ ಪಿಂಗ್ ನಡುವೆ ಮಾತುಕತೆ ಏರ್ಪಡಬಹುದು ಎಂದು ಸಮ್ಮೇಳನಕ್ಕೂ ಮೊದಲೇ ಊಹಿಸಲಾಗಿತ್ತು. ಆದರೆ, ಔಪಚಾರಿಕವಾಗಿ ಈ ಇಬ್ಬರೂ ನಾಯಕರು ಭೇಟಿಯಾಗಿದ್ದಾರೆ.

ವೇದಿಕೆಯಲ್ಲಿ ಪುಂಖಾನುಪಂಖ ಹೊಗಳಿಕೆ

ವೇದಿಕೆಯಲ್ಲಿ ಪುಂಖಾನುಪಂಖ ಹೊಗಳಿಕೆ

ಮೋದಿ ಹಾಗೂ ಜಿನ್ ಪಿಂಗ್ ನಡುವೆ ಅಧಿಕೃತ ಮಾತುಕತೆ ನಡೆಯದಿದ್ದರೇನಂತೆ, ಚೀನಾ ಮಾತ್ರ ಸಮ್ಮೇಳನದ ವೇದಿಕೆಯಲ್ಲಿ ಭಾರತವನ್ನು ಹೊಗಳದೇ ಬಿಟ್ಟಿಲ್ಲ. ಉಗ್ರವಾದದ ವಿರುದ್ಧ ಮೋದಿ ಸರ್ಕಾರ ಭೀಕರ ಸಮರ ಸಾರಿದೆ ಎಂದು ಅವರು ಹೇಳಿದ್ದಾರೆ.

ಮೋದಿಗೆ ಚೀನಾದ ಅಧ್ಯಕ್ಷರಿಂದ ಪ್ರಶಂಸೆಯ ಸುರಿಮಳೆ

ಮೋದಿಗೆ ಚೀನಾದ ಅಧ್ಯಕ್ಷರಿಂದ ಪ್ರಶಂಸೆಯ ಸುರಿಮಳೆ

ಭಯೋತ್ಪಾದನೆ ವಿರುದ್ಧ ಮೋದಿ ಸರ್ಕಾರ ಸಮರ ಸಾರಿರುವುದೇನೋ ನಿಜ. ಆದರೆ, ಅದೇ ಭಯೋತ್ಪಾದನೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವವರು ಯಾರು? ಈ ಪ್ರಶ್ನೆಯನ್ನು ಚೀನಾ ತನಗೆ ತಾನೇ ಕೇಳಿಕೊಂಡರೆ ಉತ್ತಮ. ಹಾಗಾಗಿ, ಈ ಸಂದರ್ಭದಲ್ಲಿ ಜಿನ್ ಪಿಂಗ್ ಅವರ ಮಾತು ನಾಟಕೀಯ ಎಂದೆನಿಸದೇ ಮತ್ತೇನು?

ಇವು ಹೃದಯಾಂತರಾಳದ ಮಾತೇ?

ಇವು ಹೃದಯಾಂತರಾಳದ ಮಾತೇ?

ಇನ್ನು, ಬ್ರಿಕ್ಸ್ ರಾಷ್ಟ್ರಗಳನ್ನು ಒಗ್ಗೂಡಿಸಿಕೊಂಡು ಭಾರತ ಮುನ್ನಡೆಯುತ್ತಿದ್ದು, ಅದರ ಕಾರ್ಯ ಶ್ಲಾಘನೀಯ ಎಂದಿದ್ದಾರೆ ಜಿನ್ ಪಿಂಗ್. ಏಷ್ಯಾದಲ್ಲಿ ತಾನೊಬ್ಬನೇ ಸಾರ್ವಭೌಮನಾಗಬೇಕು ಎಂಬ ಒಳ ಸ್ವಾರ್ಥವನ್ನಿಟ್ಟುಕೊಂಡು, ಭಾರತದ ಏಳ್ಗೆಯನ್ನು ಸಹಿಸಲಾಗದೇ ಗಡಿಯಲ್ಲಿ ಒಂದು ಕಡೆ ಪಾಕಿಸ್ತಾನಕ್ಕೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ, ಮತ್ತೊಂದೆಡೆ ಸಿಕ್ಕಿ ಗಡಿಭಾಗದಲ್ಲಿ ಭಾರತದೊಂದಿಗೆ ಕಾಲು ಕೆರೆದು ಜಗಳ ಕಾಯುತ್ತಿರುವ ಜಿನ್ ಪಿಂಗ್ ಅವರ ಈ ಮಾತುಗಳು ಹೃದಯಾಂತರಾಳದಿಂದ ಬಂದವು ಎಂದು ಹೇಳಲು ಸಾಧ್ಯವೇ?

ಗಡಿ ಭಾಗದಲ್ಲಿ ಕವಿದವು ಯುದ್ಧದ ಕಾರ್ಮೋಡ

ಗಡಿ ಭಾಗದಲ್ಲಿ ಕವಿದವು ಯುದ್ಧದ ಕಾರ್ಮೋಡ

ಅಲ್ಲಿ ಚೀನಾದ ಅಧ್ಯಕ್ಷ ಹಾಗೆ ಭಾರತವನ್ನು, ಮೋದಿಯನ್ನು ಹಾಡಿ ಹೊಗಳುತ್ತಿದ್ದರೆ, ಇತ್ತ ಸಿಕ್ಕಿಂ ಗಡಿಯಲ್ಲಿ ಚೀನಾ ಸೈನಿಕರ ಸಮರಾಭ್ಯಾಸ ಮತ್ತಷ್ಟು ಚುರುಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+