US Strikes Venezuela: ಸಾಲ ತೀರಿಸಲಾಗದ ಅಮೆರಿಕಾ ವಿಶ್ವ ಶಾಂತಿ ಕದಡುವುದು ಪಕ್ಕಾ: ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ

ಅಮೆರಿಕಾ: ವಿಶ್ವದ ದೊಡ್ಡಣ್ಣ ಅಮೆರಿಕಾ ಇದೀಗ ದಕ್ಷಿಣ ಅಮೆರಿಕಾ ಖಂಡದ 7ನೇ ದೊಡ್ಡ ದೇಶವಾದ ವೆನೆಜುವೆಲಾ ಮೇಲೆ ಬಾಂಬ್‌ಗಳ ಸುರಿಮಳೆಯನ್ನು ಸುರಿಸಿದೆ. ಇದಕ್ಕೆ ಡ್ರಗ್ ಉಗ್ರವಾದವನ್ನು ತಡೆಯುವ ಉದ್ದೇಶದಿಂದ ಈ ದಾಳಿಯನ್ನು ಮಾಡಿರುವುದಾಗಿ ಹೇಳಿದೆ. ಆದರೆ ಅಮೆರಿಕಾದ ಲೆಕ್ಕಾಚಾರ ಯಾವಾಗಲೂ ವ್ಯವಹಾರದ ಸುತ್ತಲು ಇರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಇದೀಗ ವೆನೆಜುವೆಲಾ ಮೇಲಿನ ದಾಳಿ ಹಾಗೂ ಅಧ್ಯಕ್ಷರ ಬಂಧನ ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಲಿದೆ ಎಂದು ಅಂದಾಜಿಸಲಾಗಿದೆ. ಸಾಲ ತೀರಿಸಲಾಗದ ಅಮೆರಿಕಾ ವಿಶ್ವ ಶಾಂತಿ ಕದಡುವುದು ಪಕ್ಕಾ ಎಂದು ಆರ್ಥಿಕ ತಜ್ಞ ಹಾಗೂ ಬರಹಗಾರರಾದ ರಂಗಸ್ವಾಮಿ ಮೂಕನಹಳ್ಳಿ ಅವರು ಎಚ್ಚರಿಸಿದ್ದಾರೆ.

Americas Debt Crisis Will Disrupt World Peace Venezuela Tensions Growing Economist Rangaswamy Mookanahalli

ತೈಲ ಸಂಪನ್ಮೂಲ ದೇಶಗಳ ಮೇಲಿನ ದಾಳಿಯನ್ನು ಅಮೆರಿಕಾ ಮುಂದುವರಿಸಿಕೊಂಡು ಬಂದಿದೆ. ಯಾವುದಾದರೂ ನೆಪವೊಡ್ಡಿ ತನ್ನ ಮಾತನ್ನು ಕೇಳದ ದೇಶ ತೈಲ ದೇಶಗಳ ಮೇಲೆ ದಾಳಿ ಮಾಡುವ ಅಥವಾ ಒತ್ತಡ ಹೇರುವ ಕಾರ್ಯತಂತ್ರವನ್ನು ಅಮೆರಿಕಾ ಮುಂದುವರಿಸಿಕೊಂಡು ಬಂದಿದೆ. ಆದರೆ ಈಗ ವೆನೆಜುವೆಲಾ ಮೇಲೆ ಅಮೆರಿಕಾ ಮಾಡಿರುವ ದಾಳಿಯು ಹೊಸ ಅಪಾಯವನ್ನು ತಂದೊಡ್ಡುವುದು ಖಚಿತ ಎನ್ನುತ್ತಾರೆ ರಂಗಸ್ವಾಮಿ ಮೂಕನಹಳ್ಳಿ. ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾ ಬಂಧಿಸಿದೆ.

"ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಟ್ರಂಪ್ ಮಹಾಶಯ ಕಿಡ್ನಾಪ್ ಮಾಡಿಸಿ ಅಮೆರಿಕಾಕ್ಕೆ ಕರೆದುಕೊಂಡು ಹೋಗಿದ್ದಾನೆ. ತನ್ಮೂಲಕ ಜಾಗತಿಕವಾಗಿ ಅಸ್ತಿತ್ವದಲ್ಲಿರುವ ಯುನೈಟೆಡ್ ನೇಷನ್, ನ್ಯಾಯಾಲಯ ಎಲ್ಲವೂ ಬಕ್ವಾಸ್ ಎಂದು ಸಾರಿದ್ದಾನೆ. ಪುಟಿನ್, ಉಕ್ರೇನ್ ಅಧ್ಯಕ್ಷ, ಭಾರತ, ಪಾಕಿಸ್ತಾನದ ಮುನೀರ್ ಮತ್ತು ಯೂನಸ್‌ನನ್ನು, ಚೀನಾ, ತೈವಾನ್ ದೇಶವನ್ನು ಯಾವಾಗ ಬೇಕಾದರೂ ಕಬಳಿಸಬಹುದು. ಇದೀಗ ಜಗತ್ತು ರೂಲ್ಸ್ ಲೆಸ್!" ಎಂದು ರಂಗಸ್ವಾಮಿ ಮೂಕನಹಳ್ಳಿ ಅವರು ಅಭಿಪ್ರಾಯಪಟ್ಟಿದ್ದಾರೆ.

"ಸ್ಯಾಂಕ್ಷನ್ ಎನ್ನುವ ನಾಟಕ ಕೇವಲ ಸಣ್ಣ ರಾಷ್ಟ್ರಗಳಿಗೆ ಮಾತ್ರ ಅನ್ವಯ. ಗಮನಿಸಿ ನೋಡಿ ವೆನೆಜುವೆಲಾ ಜಗತ್ತಿನ ಅತೀ ಹೆಚ್ಚು ತೈಲ ಹೊಂದಿದ್ದ ದೇಶ, ಮೂರನೇ ಸ್ಥಾನದಲ್ಲಿ ಇರಾನ್. ಸದ್ಯಕ್ಕೆ ಇವೆರೆಡೂ ದೇಶಗಳಲ್ಲಿ ಆರಾಜಕತೆಯಿದೆ. ಸೌದಿ ಎರಡನೇ ಅತೀ ದೊಡ್ಡ ತೈಲ ನಿಕ್ಷೇಪ ಹೊಂದಿದ ದೇಶವಾಗಿದೆ .ಬಟ್ ಅದು ಅಮೆರಿಕಾ ಹೇಳಿದಂತೆ ಕೇಳುತ್ತದೆ. ಸಾಲ ತೀರಿಸಲಾಗದ ಅಮೆರಿಕಾ ವಿಶ್ವ ಶಾಂತಿ ಕದಡುವುದು ಪಕ್ಕಾ" ಎಂದು ರಂಗಸ್ವಾಮಿ ಅವರು ಎಚ್ಚರಿಸಿದ್ದಾರೆ.

ಅಮೆರಿಕಾ ಹಿತ ರಕ್ಷಣೆ ನೆಪ ಮಾತ್ರ!

ಇನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಅಮೆರಿಕಾ ಸರ್ಕಾರವು ವೆನೆಜುವೆಲಾ ದೇಶದ ಮೇಲೆ ದಾಳಿ ಮಾಡಿರುವುದಕ್ಕೆ ನೀಡಿರುವ ಪ್ರಮುಖ ಕಾರಣ ಅಮೆರಿಕಾಗೆ ಭಾರಿ ಪ್ರಮಾಣದಲ್ಲಿ ವೆನೆಜುವೆಲಾದಿಂದ ಡ್ರಗ್ಸ್‌ ಬರುತ್ತಿದೆ. ಆದರೆ ಈ ಡ್ರಗ್ಸ್‌ ಅಮೆರಿಕಾಗೆ ಬರದಂತೆ ತಡೆಯುವಲ್ಲಿ ವೆನೆಜುವೆಲಾ ವಿಫಲವಾಗಿದೆ. ಇದೇ ಕಾರಣಕ್ಕಾಗಿ ನಾವು ವೆನೆಜುವೆಲಾದ ಮೇಲೆ ಸೇನಾ ದಾಳಿ ಮಾಡಿದ್ದೇವೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ. ಆದರೆ ಅಮೆರಿಕಾ ಇತ್ತೀಚಿನ ದಿನಗಳಲ್ಲಿ ತಾನು ರೂಪಿಸಿದ್ದೇ ನಿಯಮ ಎನ್ನುವ ರೀತಿಯಲ್ಲಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+