ಇಸ್ರೇಲ್‌ಗೆ ‘ಬುದ್ಧಿನೇ ಇಲ್ಲ’ ಅಂದ್ರು ಅಮೆರಿಕ ಅಧ್ಯಕ್ಷ!

ಹಮಾಸ್ ವಿರುದ್ಧ ಯುದ್ಧ ಸಾರಿ ಇಸ್ರೇಲ್ ಸೇನೆ ಈಗ ತೊಡೆತಟ್ಟಿ ನಿಂತಿದೆ. ಒಂದು ಕಡೆ ಈ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆ ನಡೆಯುವಾಗಲೇ, ಇಸ್ರೇಲ್ ಫ್ರೆಂಡ್ ಅಮೆರಿಕದ ಕಡೆಯಿಂದ ಇಸ್ರೇಲ್‌ಗೆ ಒಂದು ಬ್ಯಾಡ್ ನ್ಯೂಸ್ ಬಂದಿದೆ. ಅಮೆರಿಕದ ಅಧ್ಯಕ್ಷರೇ ಆಕ್ರೋಶ ಹೊರಹಾಕಿ ಪರೋಕ್ಷವಾಗಿ ವಾರ್ನಿಂಗ್ ಮಾಡಿದ್ದಾರೆ.

ರಕ್ತಪಾತ ನಿಲ್ಲಿಸಲು ಮನುಷ್ಯ ಈಗ ಸಿದ್ಧವಿಲ್ಲ, ಯಾಕಂದ್ರೆ ಜಗತ್ತಿನಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ರಕ್ತಪಾತ ನಡೆಯುತ್ತಲೇ ಇದೆ. ಅದರಲ್ಲೂ ಯುದ್ಧದ ಹೆಸರಲ್ಲಿ ಅಮಾಯಕರಿಗೆ ಕುತ್ತು ಬಂದಿದೆ ಎಂಬ ಆರೋಪ ಪದೇ ಪದೇ ನಾವು ಕೇಳಿರುತ್ತೇವೆ. ಈಗ ಇಸ್ರೇಲ್ ಹಾಗೂ ಹಮಾಸ್ ಯುದ್ಧದ ಬಗ್ಗೆಯೂ ಇಂತಹದ್ದೇ ಆರೋಪ ಕೇಳಿಬರುತ್ತಿದೆ. ತಿಕ್ಕಾಟ ಜೋರಾದ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗ ಇಸ್ರೇಲ್ ಪ್ರಧಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

American President Joe Biden Said This About Israel Prime Minister

ಇಸ್ರೇಲ್ ವಿರುದ್ಧ ಅಮೆರಿಕ ಗರಂ!

ಅಮೆರಿಕ ಮೊದಲಿನಿಂದ ಕೂಡ ಇಸ್ರೇಲ್‌ಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಅತ್ತ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ಎದುರಿಸಿದರೂ ಇಸ್ರೇಲ್ ಪರವಾಗಿ ನಿಂತಿದ್ದ ದೊಡ್ಡಣ್ಣ ಅಮೆರಿಕ, ಇದೇ ಕಾರಣಕ್ಕೆ ಹಲವಾರು ಸಮಸ್ಯೆ ಎದುರಿಸಿದೆ. ಹೀಗಿದ್ದಾಗ, ಇಸ್ರೇಲ್ ಮಾತ್ರ ಅಮೆರಿಕದ ಮಾತನ್ನು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಅಧ್ಯಕ್ಷ ಬೈಡನ್ ದಿಢೀರ್ ರೊಚ್ಚಿಗೆದ್ದಿದ್ದಾರೆ. ಅಷ್ಟಕ್ಕೂ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದಿದ್ದಾರೆ ಜೋ ಬೈಡನ್.

ತಪ್ಪು ಮಾಡಿದರಾ ಇಸ್ರೇಲ್ ಪ್ರಧಾನಿ?

ಅಲ್ಲದೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಹಮಾಸ್‌ ಬಂಡುಕೋರರ ವಿರುದ್ಧದ ಈ ಯುದ್ಧದಲ್ಲಿ, ಭಾರಿ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇದೀಗ ಗರಂ ಆಗಿದ್ದಾರೆ. ಖಾಸಗಿ ಸಂದರ್ಶನದ ವೇಳೆ ಇಸ್ರೇಲ್ ಪ್ರಧಾನಿ ಬಗ್ಗೆ ಮುಕ್ತವಾಗಿ ಬೈಡನ್ ಮಾತನಾಡಿದ್ದಾರೆ. ಹೀಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪ್ರಧಾನಿಯ ವಿರುದ್ಧ ನೀಡಿರುವ ಹೇಳಿಕೆ, ಎರಡೂ ದೇಶಗಳ ನಡುವೆ ಸೃಷ್ಟಿಯಾಗಿರುವ ಗೊಂದಲದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದಂತೆ ಕಾಣುತ್ತಿದೆ.

American President Joe Biden Said This About Israel Prime Minister

ಕಳೆದ 6 ತಿಂಗಳಿಂದ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಯುದ್ಧ ಈಗ ದೊಡ್ಡ ತಿರುವು ಪಡೆದಿದ್ದು, 32,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಯುದ್ಧದ ಹಿನ್ನೆಲೆ ಜೀವ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಇಸ್ರೇಲ್‌ ವಿರುದ್ಧ ಅಮೆರಿಕ ಕೋಪ ತೋರಿಸುತ್ತಿದ್ದು, ಇಬ್ಬರ ನಡುವಿನ ಕಿರಿಕ್ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ? ಎಂಬ ಚರ್ಚೆ ಕೂಡ ಶುರುವಾಗಿ, ಸಂಚಲನ ಸೃಷ್ಟಿಯಾಗಿದೆ. ಯಾಕಂದ್ರೆ ಕಳೆದ 60-70 ವರ್ಷಗಳಿಂದಲೂ ಅಮೆರಿಕ ಮತ್ತು ಇಸ್ರೇಲ್ ನಡುವೆ ಉತ್ತಮ ಸಂಬಂಧ ಇತ್ತು. ಆದರೆ ಇದೀಗ ಆ ಸಂಬಂಧ ಹಾಳಾದ ರೀತಿ, ಮೇಲ್ನೋಟಕ್ಕೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+