ಶಾಂತಿ.. ಶಾಂತಿ.. ಇಸ್ರೇಲ್ & ಇರಾನ್ ಸೇನೆಗಳಿಗೆ ಶಾಂತಿ ಪಾಠ ಮಾಡಿದ ಡೊನಾಲ್ಡ್ ಟ್ರಂಪ್! Israel And Iran
ಇಸ್ರೇಲ್ & ಇರಾನ್ ಫೈಟಿಂಗ್ ಜೋರು ಜೋರಾಗಿದ್ದು, ಇಬ್ಬರ ಈ ಬಡಿದಾಟ ನೋಡಿ ಒಂದು ಕ್ಷಣ ಮತ್ತೊಂದು ಮಹಾ ಯುದ್ಧದ ಭಯದಲ್ಲಿ ಜನರು ನರಳುತ್ತಿದ್ದಾರೆ. ಒಂದು ಕಡೆ ಇರಾನ್ ದಾಳಿ ಮಾಡಿದೆ ಅಂತಾ ಆರೋಪಿಸಿ ಇಸ್ರೇಲ್ ಕೂಡ ದಾಳಿ ಮಾಡುತ್ತಿದೆ, ಹಾಗೇ ಇಸ್ರೇಲ್ ದಾಳಿ ಮಾಡಿದೆ ಅಂತಾ ಇರಾನ್ ಮರುದಾಳಿ ಮಾಡುತ್ತಿದೆ. ಹೀಗೆ ಇಬ್ಬರ ಮಧ್ಯೆ ಪರಮಾಣು ಯುದ್ಧ ನಡೆಯುವ ಆತಂಕ ಕೂಡ ಆವರಿಸಿದೆ. ಹೀಗಿದ್ದಾಗಲೇ, ಶಾಂತಿ.. ಶಾಂತಿ.. ಇಸ್ರೇಲ್ & ಇರಾನ್ ಸೇನೆಗಳಿಗೆ ಶಾಂತಿ ಪಾಠ ಮಾಡಿದ ಡೊನಾಲ್ಡ್ ಟ್ರಂಪ್!
ಒಂದು ಬಾರಿ ಪರಮಾಣು ಯುದ್ಧ ನಡೆದರೆ ಪರಿಸ್ಥಿತಿ ಏನಾಗುತ್ತದೆ? ಅನ್ನೋದು ಇಡೀ ಜಗತ್ತಿಗೇ ಗೊತ್ತಾಗಿ ಹೋಗಿದೆ. 2ನೇ ಮಹಾಯುದ್ಧ ನಿಮಗೆಲ್ಲಾ ನೆನಪು ಇರಬಹುದು, ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಸಾಕಿ ಮೇಲೆ ಇದೇ ಅಮೆರಿಕ ಭೀಕರ ಪರಮಾಣು ದಾಳಿ ಮಾಡಿ ಎಲ್ಲವನ್ನೂ ನಾಶ ಮಾಡಿ ಹಾಕಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ರೀತಿ ಅಮೆರಿಕ ಸೇನೆ ನಡೆಸಿದ ಪರಮಾಣು ದಾಳಿ ಅಂದ್ರೆ ಆಟಂ ಬಾಂಬ್ ಅಟ್ಯಾಕ್ ಪರಿಣಾಮವನ್ನ ಈಗಲೂ ಜಪಾನ್ ದೇಶದ ಜನರು ಎದುರಿಸುತ್ತಿದ್ದಾರೆ. ಆದರೆ 1945 ಸಮಯದಲ್ಲಿ ನಡೆದ ಈ ದಾಳಿ ನಂತರ ಮತ್ತೆ ಯಾವತ್ತು ಪರಮಾಣು ಅಂದ್ರೆ ನ್ಯೂಕ್ಲಿಯರ್ ಅಟ್ಯಾಕ್ ಅಗಿರಲಿಲ್ಲ. ಆದರೆ ಈಗ ಇರಾನ್ & ಇಸ್ರೇಲ್ ನಡುವೆ ಪರಮಾಣು ಯುದ್ಧದ ಆತಂಕ ಆವರಿಸಿದೆ. ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷರು ಮಾತನಾಡಿ ಮತ್ವದ ಹೇಳಿಕೆ ನೀಡಿದ್ದಾರೆ.

ಯುದ್ಧ.. ಹಿಂಸೆ.. ಬಡಿದಾಟ..
ಅಂದಹಾಗೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ & ಇರಾನ್ ಕೂತು ಮಾತುಕತೆ ಮೂಲಕವೇ ಸಮಸ್ಯೆ ಸರಿ ಮಾಡಿಕೊಳ್ಳಲಿ, ಯುದ್ಧ ನಿಲ್ಲಿಸಲಿ ಅಂತಾ ಸಲಹೆ ನೀಡಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಈ ಸಮಯದಲ್ಲೇ ಟ್ರಂಪ್ ಅವರ ಹೇಳಿಕೆ ಸಾಕಷ್ಟು ಮಹತ್ವದ ಪಡೆದುಕೊಂಡಿದೆ. ಅಮೆರಿಕ ಈಗಾಗಲೇ ಇಸ್ರೇಲ್ ಸೇನೆಯ ಬೆನ್ನಿಗೆ ನಿಂತಿದ್ದು, ಇರಾನ್ ಸೈಲೆಂಟ್ ಆಗಲಿ ಅಂತಾ ಕಾಯುತ್ತಿತ್ತು. ಆದರೆ ಯಾವಾಗ ಇರಾನ್ ಕೂಡ ಘೋರವಾಗಿ, ತೀಕ್ಷ್ಣವಾಗಿ ದಾಳಿ ಮಾಡಲು ಶುರು ಮಾಡಿತ್ತೋ ಆಗಲೇ ಅಮೆರಿಕ ತನ್ನ ವರಸೆ ಬದಲಿಸಿದ್ದು. ಡೊನಾಲ್ಡ್ ಟ್ರಂಪ್ ಅವರೇ ಈಗ ಶಾಂತಿ ಮಂತ್ರ ಜಪಿಸಿದ್ದಾರೆ.












Click it and Unblock the Notifications