Get Updates
Get notified of breaking news, exclusive insights, and must-see stories!

ಅಮೆರಿಕ ಚುನಾವಣೆಯಲ್ಲಿ ಬಾಂಬ್ ಆತಂಕ, ರಷ್ಯಾದಿಂದ ನಿರ್ವಹಣೆ!

bomb threats: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಜೋರಾಗುತ್ತಿದ್ದಂತೆಯೇ ಹಲವು ರಾಜ್ಯಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಮೆರಿಕ ಎಂದರೆ ವಿಶ್ವದ ದೊಡ್ಡಣ್ಣ ಹಾಗೂ ಸೂಪರ್‌ ಪವರ್‌ ರಾಷ್ಟ್ರ ಆದರೆ, ಈಗ ವಿಶ್ವದ ಬೃಹತ್‌ ಹಾಗೂ ಬಲಿಷ್ಠ ದೇಶ ಎನ್ನುವ ಖ್ಯಾತಿಯೊಂದಿಗೆ ಮೆರೆಯುತ್ತಿರುವ ಅಮೆರಿಕಾದಲ್ಲಿ ನಡುಕು ಶುರುವಾಗಿದೆ. ಅದಕ್ಕೆ ಕಾರಣ ಅತ್ಯಂತ ಭಯಾನಕವಾಗಿದೆ. ಚುನಾವಣೆಗೆ ಜನ ಸೇರುವ ಸಂದರ್ಭದಲ್ಲೇ ಬಾಂಬ್ ಸುದ್ದಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ.

ಅಮೆರಿಕ ಚುನಾವಣೆ ಪ್ರಾರಂಭವಾಗುವುದಕ್ಕೂ ಮುಂಚೆಯೇ ಅಮೆರಿಕ ಚುನಾವಣೆ ನಡೆಯುವಾಗ ಇಲ್ಲ, ನಡೆದಾದ ಮೇಲೆ ಏನಾದರೂ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಮೆರಿಕ ದೇಶವು ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಮೆರಿಕದ ಮಧ್ಯಸ್ಥಿತಿಕೆಯಿಂದಲೇ ಹಲವು ದೇಶಗಳಲ್ಲಿ ಯುದ್ಧೋನ್ಮಾದ ಹಾಗೂ ಯುದ್ಧ ಪರಿಸ್ಥಿತಿ ಬಿಗಡಾಯಿಸಿದೆ ಎನ್ನುವ ಆರೋಪ ಇದೆ.

American election bomb fear suspicion of Russian handiwork

ಇದೀಗ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ಸಂದರ್ಭದಲ್ಲೇ ವಿರೋಧಿ ಬಣಗಳು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಪ್ಲಾನ್ ಮಾಡಿಕೊಂಡಿವೆ ಎನ್ನಲಾಗಿತ್ತು. ಈ ಭವಿಷ್ಯ ನಿಜವಾಗುವಂತಿದೆ. ಯಾಕೆಂದರೆ ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿರುವಾಗಲೇ ಬಾಂಬ್‌ ಬೆದರಿಕೆ ಕರೆಗಳು ಬರ್ತಿವೆ. ಇದು ಅಮೆರಿಕನ್ನರನ್ನು ನಡುಗಿಸುತ್ತಿದ್ದೆ. ಇನ್ನು ಈ ಬಾಂಬ್‌ ಬೆದರಿಕೆ ಕರೆಗಳಿಗೂ ರಷ್ಯಾಗೂ ಸಂಪರ್ಕವಿರುವ ಸಾಧ್ಯತೆ ಇದೆ ಅಂತ ಅಮೆರಿಕದ ಗುಪ್ತಚರದಳದ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಬಾಂಬ್ ಬೆದರಿಕೆ: ಇತ್ತ ಅಮೆರಿಕದ 50 ರಾಜ್ಯಗಳ ಬಹುತೇಕ ಭಾಗದಲ್ಲಿ ಚುನಾವಣೆ ಬಿರುಸು ಪಡೆದುಕೊಂಡಿದ್ದಾರೆ. ಕೆಲವು ಭಾಗದಲ್ಲಿ ಬಾಂಬ್‌ ಬೆದರಿಕೆ ಕರೆಗಳು ಬರ್ತಿವೆ. ಮತಗಟ್ಟೆ ಅಥವಾ ಮತದಾನ ನಡೆಯುವ ಸ್ಥಳಗಳಲ್ಲಿ ಬಾಂಬ್‌ ಬೆದರಿಕೆ ಬರ್ತಿದೆ ಅಂತ ಎಫ್‌ಬಿಐ (Fbi ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಹೇಳಿದೆ. ಹೀಗಾಗಿ, ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಯುಎಸ್‌ನಲ್ಲಿ ಮತದಾನ ಜೋರಾಗಿ ನಡಿತಿದೆ. ಜನ ಇಲ್ಲಿ ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಂತು ಮತ ಚಲಾಯಿಸುತ್ತಿದ್ದಾರೆ. ಆದರೆ, ಈ ನಡುವೆ ಬಾಂಬ್‌ ಬೆದರಿಕೆ ಕರೆಗಳು ಬರ್ತಿರೋದು ಅಮೆರಿಕನ್ನರನ್ನು ಆತಂಕಕ್ಕೆ ದೂಡಿದೆ.

ರಷ್ಯಾ ಕೈವಾಡ ಶಂಕೆ: ಇನ್ನು ಅಮೆರಿಕದಲ್ಲಿ ಮತದಾನದ ವೇಳೆ ಬರುತ್ತಿರುವ ಬಾಂಬ್ ಬೆದರಿಕೆ ಕರೆಗಳ ಹಿಂದೆ ರಷ್ಯಾ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಈ ರೀತಿ ಬರುತ್ತಿರುವ ಈ ರೀತಿ ಬಂದ ಬಾಂಬ್ ಬೆದರಿಕೆ ಕರೆಗಳಲ್ಲಿ ಅಥವಾ ಮೆಸೇಜ್‌ಗಳಲ್ಲಿ ಹಲವು ರಷ್ಯಾದ ಇ -ಮೇಲ್‌ ಡೊಮೇನ್‌ಗಳಿಂದಲೇ ಬಂದಿವೆ ಎಂದು ಹೇಳಲಾಗಿದೆ.

ಇನ್ನು ಈ ರೀತಿಯ ಬೆದರಿಕೆಗಳಿಂದ ಮತದಾನದ ಮೇಲೆ ಯಾವುದೇ ರೀತಿಯ ಪರಿಣಾಮ ಆಗದಂತೆ ಹಾಗೂ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಅಮೆರಿಕನ್‌ ಪೊಲೀಸ್‌ ಹಾಗೂ ಎಫ್‌ಬಿಐ ಹೇಳಿದೆ. ಅಲ್ಲದೇ ಅಮೆರಿಕನ್ನರಿಗೆ ಎಂದಿನಂತೆ ಯಾವುದಾದರು ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಕೋರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+