ತನ್ನ ಸೋಲಿಗೆ ಅಮೆರಿಕ ಇಸ್ಲಾಮಾಬಾದನ್ನು ಬಲಿಪಶುವನ್ನಾಗಿಸಿದೆ: ಪಾಕ್

Posted By:
Subscribe to Oneindia Kannada

ಇಸ್ಲಾಮಾಬಾದ್, ಜನವರಿ 05: ಅಫ್ಘಾನಿಸ್ತಾನದಲ್ಲಿನ ತನ್ನ ಸೋಲಿಗೆ ಅಮೆರಿಕವು ಇಸ್ಲಾಮಾಬಾದನ್ನು ಬಲಿಪಶುವನ್ನಾಗಿ ಮಾಡುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಅಷ್ಟೇ ಅಲ್ಲ, ಡೊನಾಲ್ಡ್ ಟ್ರಂಪ್ ಭಾರತದ ಪರವಾಗಿ ಮಾತನಾಡುತ್ತಿದ್ದಾರೆ, ಅವರ ಮಾತು ಭಾರತದ ಭಾಷೆಯಂತೆಯೇ ಇದೆ ಎಂದಿದ್ದಾರೆ.

ಪಾಕಿಸ್ತಾನದೊಂದಿಗೆ ಸೇನಾ ಸಂಬಂಧವೂ ಇಲ್ಲ: ಡೊನಾಲ್ಡ್ ಟ್ರಂಪ್

ನಮಗೆ ಅಮೆರಿಕ ಯಾವುದೇ ನೆರವು ನೀಡದಿದ್ದರೂ ಬದುಕುವುದಕ್ಕೆ ಗೊತ್ತು. ಅಮೆರಿಕದ ಇಂಥ ವಿಶ್ವಾಸಘಾತುಕ ನಡೆ ಇದೇ ಹೊಸದಲ್ಲ. ಇತಿಹಾಸ ಕೆದಕಿದರೆ ಇಂಥ ಹಲವು ನಡೆಗಳು ಕಾಣಿಸುತ್ತವೆ ಎಂದು ಅವರು ಅಮೆರಿಕಾ ನಡೆಯ ವಿರುದ್ಧ ಹರಿಹಾಯ್ದಿದ್ದಾರೆ.

Americal makes Islamabad a scapegoat for its failure in Afghanistan: Pak

ಜನವರಿ 1 ರಂದು ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್ ಇನ್ನು ಮುಂದೆ ಅಮೆರಿಕವು ಪಾಕಿಸ್ತಾನಕ್ಕೆ ಯಾವುದೇ ರೀತಿಯಲ್ಲಿ ಆರ್ಥಿಕ ನೆರವು ನೀಡುವುದಿಲ್ಲ ಎಂದಿದ್ದರು. ನಮ್ಮ ಆರ್ಥಿಕ ನೆರವಿಗೆ ಪ್ರತಿಯಾಗಿ ಪಾಕಿಸ್ತಾನ ಸುಳ್ಳು ಮತ್ತು ಮೋಸವನ್ನಷ್ಟೇ ಹಿಂದಿರುಗಿಸಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಅದು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.

ಅಷ್ಟೇ ಅಲ್ಲದೆ, ಇನ್ನು ಮುಂದೆ ಪಾಕಿಸ್ತಾನಕ್ಕೆ ಯಾವುದೇ ರೀತಿಯಾ ಸೇನಾ ನೆರವು, ಭದ್ರತಾ ನೆರವು ನೀಡುವುದಿಲ್ಲ ಎಂದು ಸಹ ಅಮೆರಿಕ ಸ್ಪಷ್ಟಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Americas making Islamabad a scapegoat for its failure in Afghanistan" Pakistan foreign minister Khawaja Asif told to media in Islamabad. And he accuses Donald Trump of speaking India's language.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ