Get Updates
Get notified of breaking news, exclusive insights, and must-see stories!

ಚೀನಾ ಶತ್ರು ತೈವಾನ್‌ಗೆ ಅಮೆರಿಕ ಕೊಡಲಿದೆ ₹2,838 ಕೋಟಿ!

ವಾಷಿಂಗ್ಟನ್: ತೈವಾನ್ ವಿಚಾರದಲ್ಲಿ ಅಮೆರಿಕ & ಚೀನಾ ನಡುವೆ ಬೆಂಕಿ ಹೊತ್ತಿದೆ. ಅತ್ತ ಅಮೆರಿಕ ತನ್ನ ನಿಲುವು ಬದಲಿಸುತ್ತಿಲ್ಲ, ಇತ್ತ ಚೀನಾ ತನ್ನ ಸಿಟ್ಟು ಬಿಡುತ್ತಿಲ್ಲ. ಹೀಗಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಚೀನಾದ ಕೋಪ ತಣ್ಣಗೆ ಮಾಡಲು ಅಮೆರಿಕ ಯತ್ನಿಸಿತ್ತು. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾನೆ ದೊಡ್ಡಣ್ಣ!

ಹೌದು, ಅಮೆರಿಕ ಇದೀಗ ತೈವಾನ್‌ಗೆ ಭಾರಿ ಪ್ರಮಾಣದ ನೆರವನ್ನು ಘೋಷಿಸಿದೆ. ಅದು ಒಂದೋ ಅಥವಾ ಎರಡು ಕೋಟಿ ರೂಪಾಯಿ ಮೊತ್ತದ ಸಹಾಯ ಅಲ್ಲ. ಹತ್ತಿರ ಹತ್ತಿರ 3 ಸಾವಿರ ಕೋಟಿ ರೂಪಾಯಿ ನೆರವನ್ನು ನೀಡಲು ಅಮೆರಿಕ ಮುಂದಾಗಿದೆ. ಈ ಮೂಲಕ ತೈವಾನ್ ವಿಚಾರದಲ್ಲಿ ಚೀನಾ ವಿರುದ್ಧ ಅಮೆರಿಕ ಮತ್ತೊಮ್ಮೆ ತೊಡೆತಟ್ಟಿ ನಿಂತಿದೆ. ಅರೆ ಇಷ್ಟು ದೊಡ್ಡ ಮೊತ್ತದ ಹಣವನ್ನ ಅಮೆರಿಕ ಹೇಗೆ ನೀಡುತ್ತೆ? 345 ಮಿಲಿಯನ್ ಡಾಲರ್ ಅಂದ್ರೆ ಸುಮಾರು 2,838 ಕೋಟಿ ರೂಪಾಯಿ ಯಾವ ರೂಪದಲ್ಲಿ ತೈವಾನ್‌ಗೆ ಸೇರಲಿದೆ? ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

america-will-send-big-budget-military

ಅಮೆರಿಕ ನೆರವು ನೀಡುವುದು ಹೇಗೆ?

ಇನ್ನೂ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳಿಗೆ ಸಹಾಯ ಮಾಡುತ್ತಾ, ಶತ್ರು ರಾಷ್ಟ್ರಗಳಿಗೆ ಈ ಮೂಲಕ ಎಚ್ಚರಿಕೆ ನೀಡುವುದು ಮಾಮೂಲಿ. ಅದರಲ್ಲೂ ಅಮೆರಿಕ ನೆರವು ನೀಡುವುದು ಬಹುತೇಕ ಮಿಲಿಟರಿ ಅಥವಾ ಸೇನಾ ವಿಚಾರದಲ್ಲಿ. ಈಗ ಕೂಡ ಅಷ್ಟೇ ತೈವಾನ್ ಸೇನೆಗೆ ಭಾರಿ ಪ್ರಮಾಣದ ನೆರವು ನೀಡಲು ಅಮೆರಿಕ ಮುಂದಾಗಿದೆ. ಇತ್ತೀಚೆಗೆ ಅಮೆರಿಕ ಕಾಂಗ್ರೆಸ್ ಬರೋಬ್ಬರಿ 1 ಬಿಲಿಯನ್ ಡಾಲರ್ ನೆರವನ್ನ ತೈವಾನ್‌ಗೆ ನೀಡಲು ಸಮ್ಮತಿ ನೀಡಿತ್ತು. ಆ ಮೂಲಕ ಚೀನಾ ವಿರುದ್ಧ ಅಮೆರಿಕ ರಣತಂತ್ರ ಹೆಣೆದಿತ್ತು. ಕೆಲ ತಿಂಗಳ ಹಿಂದಷ್ಟೇ ಭಾರಿ ಪ್ರಮಾಣದ ನೆರವು ನೀಡಿ ₹4000 ಕೋಟಿ ರೂಪಾಯಿ ಘೋಷಿಸಿತ್ತು ಅಮೆರಿಕ. ಈಗ ಮತ್ತೆ ತೈವಾನ್‌ಗೆ ಅಮೆರಿಕೆ ನೆರವು ನೀಡಲು ಮುಂದಾಗಿದೆ.

ಮೇ ತಿಂಗಳಲ್ಲೂ ಭರ್ಜರಿ ಗಿಫ್ಟ್!

ಅಮೆರಿಕ & ತೈವಾನ್ ನಡುವೆ ಸಾಕಷ್ಟು ಒಪ್ಪಂದ ನಡೆದಿವೆ. ಈ ಪೈಕಿ F-16V ಫೈಟರ್ ಜೆಟ್ ಅಥವಾ ಯುದ್ಧ ವಿಮಾನಗಳ ಪೂರೈಕೆ ಪ್ರಮುಖ. ಏಕೆಂದರೆ F-16V ಯುದ್ಧ ವಿಮಾನಗಳು ಶತ್ರುಗಳ ಎದೆ ನಡುಗಿಸಬಲ್ಲವು. ಹೀಗಾಗಿಯೇ 66 F-16V ಯುದ್ಧ ವಿಮಾನಗಳನ್ನ ತೈವಾನ್ ಆರ್ಡರ್ ಮಾಡಿದೆ. ಇನ್ನೇನು F-16V ಯುದ್ಧ ವಿಮಾನಗಳು ಅಮೆರಿಕದಿಂದ ತೈವಾನ್ ತೆಕ್ಕೆಗೆ ಸೇರಲಿವೆ. ಹೀಗಾಗಿ ಕಳೆದ ಮೇ ತಿಂಗಳಲ್ಲಿ ತೈವಾನ್‌ಗೆ ಅಮೆರಿಕ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಮೊತ್ತದ ದೊಡ್ಡ ಉಡುಗೊರೆ ನೀಡಲು ಮುಂದಾಗಿತ್ತು. ಇದೀಗ ಮತ್ತೆ 2 ಸಾವಿರದ 800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸೇನಾ ನೆರವು ಘೋಷಿಸಿದೆ.

america-will-send-big-budget-military

ಚೀನಾ-ತೈವಾನ್ ಯುದ್ಧ ಭೀತಿ

ಚೀನಾ ಸುತ್ತಮುತ್ತಲ ದೇಶಗಳು ಅಮೆರಿಕ ಸಹವಾಸ ಮಾಡಿದ್ರೆ ಸಹಿಸಲ್ಲ. ಅದ್ರಲ್ಲೂ ತೈವಾನ್ ನಮ್ಮದೇ ಜಾಗ ಎಂದು ಹೇಳಿಕೊಂಡು ಬರುತ್ತಿರುವ ಚೀನಾ, ಅಮೆರಿಕ ಜೊತೆ ತೈವಾನ್ ಸ್ನೇಹ ಬೆಳೆಸಿದರೆ ಉರಿದು ಬೀಳುತ್ತೆ. ಆದರೆ ಈ ಬಾರಿ ಕಿತ್ತಾಟ, ಘರ್ಷಣೆ ಜೋರಾಗಿದೆ. ಪರಿಣಾಮ ತೈವಾನ್ ಸುತ್ತಲೂ ತನ್ನ ಸೇನೆ ನಿಯೋಜನೆ ಮಾಡಿ, ಪ್ರತಿ ಕ್ಷಣವೂ ತೈವಾನ್ ಮೇಲೆ ಹದ್ದಿನ ಕಣ್ಣು ಇಟ್ಟು ಕೂತಿದೆ ಚೀನಾ. ಈ ಸಂದರ್ಭದಲ್ಲಿ ಅಮೆರಿಕ ಎಂಟ್ರಿ ಕೊಟ್ಟು, ಮೇಲಿಂದ ಮೇಲೆ ತೈವಾನ್‌ಗೆ ಬೆಂಬಲ ನೀಡಿದೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರ ನೆರವು ನೀಡುತ್ತಿರುವುದು ಸಹಜವಾಗಿ ಚೀನಾದ ಕೋಪ ಮತ್ತಷ್ಟು ಹೆಚ್ಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+