ಅಮೆರಿಕದ ಬುಡಕ್ಕೆ ಬಾಂಬ್ ಇಟ್ಟ ಸರ್ವಾಧಿಕಾರಿ ಕಿಮ್!

ಉ.ಕೊರಿಯಾ: ಅಲ್ಲಿ ಅವನದ್ದೇ ರೂಲ್ಸ್.. ಅವನು ಹೇಳಿದ ಮಾತೇ ಫೈನಲ್.. ಹೆಚ್ಚು ಕಮ್ಮಿ ಮಾತನಾಡಿದ್ರೆ ಹೆಣ ಕೂಡ ಸಿಗೋದಿಲ್ಲ. ಅಂದಹಾಗೆ ನಾವು ಹೇಳ್ತಿರೋದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಗ್ಗೆ. ಈ ಮಹಾಶಯ ಕಿಮ್ ಜಾಂಗ್ ಉನ್ (kim jong un) ಈಗ ಅಮೆರಿಕದ ಬುಡಕ್ಕೆ ಬಾಂಬ್ ಇಟ್ಟಿದ್ದಾನಂತೆ. ಏನದು? ಹೊಸ ಕ್ಷಿಪಣಿ ತಂದನಾ ಅಂದ್ರಾ? ಇಲ್ಲ ಇದು ಬೇರೆಯದ್ದೇ ಅಸ್ತ್ರ!

ಹೌದು, ಉತ್ತರ ಕೊರಿಯಾ ತನ್ನ ಮೊಟ್ಟ ಮೊದಲ ಮಿಲಿಟರಿ ಉಪಗ್ರಹ ಅಥವಾ ಗುಪ್ತಚರ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದೆ. ಇನ್ನೇನು ಕೆಲ ದಿನದಲ್ಲಿ ಮಿಲಿಟರಿ ಉಪಗ್ರಹ ಆಕಾಶಕ್ಕೆ ಹಾರಲಿದೆ. ಆ ಮೂಲಕ ತನ್ನ ಶತ್ರುಗಳ ಮೇಲೆ ಕಣ್ಣಿಡಲು ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಂಡಿದ್ದಾನೆ ಉತ್ತರ ಕೊರಿಯಾ (north korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಹೀಗಾಗಿ ರೊಚ್ಚಿಗೆದ್ದಿರುವ ಅಮೆರಿಕ ನೇರವಾಗಿ ಸರ್ವಾಧಿಕಾರಿಗೆ ಎಚ್ಚರಿಕೆ ನೀಡಿದೆ, ಅಲ್ಲದೆ ವಿಶ್ವಸಂಸ್ಥೆ ಕೂಡ ಮುಂದೆ ಬಂದು ವಾರ್ನಿಂಗ್ ಕೊಟ್ಟಿದೆ.

America warned North Korea about launching of military spy satellite

ಒಂದೇ ವರ್ಷ, 100 ಮಿಸೈಲ್!

ಕಳೆದ 1 ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ, ಕಳೆದ ತಿಂಗಳಷ್ಟೇ ತನ್ನ ದೇಶ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಮಾಡುತ್ತಿದೆ ಎಂದು ತಿಳಿಸಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಉ.ಕೊರಿಯಾ ತಯಾರಿಸಿರುವ ಮಿಲಿಟರಿ ಉಪಗ್ರಹ ಉಡಾಯಿಸಲು ಕಿಮ್ ಸಜ್ಜಾಗಿದ್ದಾನೆ.

ಬೆಚ್ಚಿಬಿದ್ದ ಜಪಾನ್, ದ.ಕೊರಿಯಾ!

ಈಗಾಗಲೇ ಪರಮಾಣು ಕ್ಷಿಪಣಿಗಳ ಮೂಲಕ ಹೆಸರು ಮಾಡಿರುವ ಕಿಮ್ ಜಾಂಗ್ ಉನ್, ಈಗ ಗುಪ್ತಚರ ಉಪಗ್ರಹದ ಮೂಲಕ ಶತ್ರುಗಳ ಎದೆ ನಡುಗಿಸಲು ಸಜ್ಜಾಗಿದ್ದಾನೆ. ಈ ಮಾಹಿತಿ ಸಿಕ್ಕ ತಕ್ಷಣ ದಕ್ಷಿಣ ಕೊರಿಯಾ, ಜಪಾನ್ ಸೇರಿ ಅಮೆರಿಕ ಕೂಡ ಬೆಚ್ಚಿಬಿದ್ದಿದೆ. ಯಾಕಂದ್ರೆ ಈ ದೇಶಗಳೇ ಕಿಮ್ ಜಾಂಗ್ ಉನ್‌ಗೆ ಮೊದಲ ಟಾರ್ಗೆಟ್. ಹೀಗೆ ಶತ್ರುಗಳ ಆಳ ಅರಿಯಲು ಕಿಮ್ ಮಾಡಿಕೊಳ್ಳುತ್ತಿರುವ ಸಿದ್ಧತೆ & ಮಿಲಿಟರಿ ಉಪಗ್ರಹ ಉಡಾವಣೆ ಆಗುತ್ತಿರುವ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿದೆ.

America warned North Korea about launching of military spy satellite

ಮಿಸೈಲ್ ಬಳಿಕ ಸ್ಯಾಟಲೈಟ್ ಶಾಕ್!

ಕಿಮ್ ಜಾಂಗ್ ಉನ್ ಕಳೆದ ತಿಂಗಳು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿತ್ತು. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್.

ಜಂಟಿ ಸಮರಭ್ಯಾಸ ತಂದ ಕಂಟಕ?

ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಜಂಟಿಯಾಗಿ ದಕ್ಷಿಣ ಕೊರಿಯಾ ಕಡಲ ತೀರದಲ್ಲಿ ಕ್ಷಿಪಣಿ ನಿಗ್ರಹ ಸಮರಾಭ್ಯಾಸ ನಡೆಸಿದ್ದವು. ಸಮರಾಭ್ಯಾಸದಲ್ಲಿ ಸುಮಾರು 110 ಯುದ್ಧ ವಿಮಾನಗಳ ಭಾಗಿಯಾಗಿದ್ದವು. ಇದರ ಬಗ್ಗೆ ಕಿಮ್ ಜಾಂಗ್ ಉನ್ ಪದೇ ಪದೆ ವಾರ್ನಿಂಗ್ ಕೊಡುತ್ತಲೇ ಬಂದಿದ್ದ. ಅಮೆರಿಕ, ದಕ್ಷಿಣ ಕೊರಿಯಾದ ನಿರ್ಧಾರಕ್ಕೆ ಕೆಂಡ ಕಾರಿದ್ದ. ಆ ಸಂದರ್ಭದಲ್ಲಿ ತಾನು ಮಿಲಿಟರಿ ಉಪಗ್ರಹ ಉಡಾವಣೆ ಮಾಡುತ್ತಿರುವುದಾಗಿ ಘೋಷಣೆ ಹೊರಡಿಸಿದ್ದ. ಈಗ ಒಂದೇ ತಿಂಗಳಲ್ಲಿ ಉಪಗ್ರಹ ಉಡಾವಣೆ ಆಗುತ್ತಿದೆ.

America warned North Korea about launching of military spy satellite

ಒಟ್ನಲ್ಲಿ ಕಿಮ್ ಜಾಂಗ್ ಉನ್ ಇಟ್ಟಿರುವ ಬಾಂಬ್ ಆತನ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಿಸೈಲ್ ಮೂಲಕ ಶಾಕ್ ನೀಡುತ್ತಿದ್ದ ಮನುಷ್ಯ ಈಗ ಉಪಗ್ರಹ ಉಡಾವಣೆ ಮಾಡಲು ಮುಂದೆ ಬಂದಿದ್ದಾನೆ. ಎಲ್ಲಾ ಬೆಳವಣಿಗೆ ಬಗ್ಗೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಆತಂಕ ವ್ಯಕ್ತಪಡಿಸಿವೆ. ಮತ್ತೊಂದ್ಕಡೆ ಅಮೆರಿಕ ಮಾತ್ರ ಏನು ಆಗಲ್ಲ ಅಂತಾ ಎರಡೂ ದೇಶಗಳಿಗೆ ಧೈರ್ಯ ಹೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+