ಯುದ್ಧ ನಿಲ್ಲಿಸಿ ಸಾಕು ಪ್ಲೀಸ್: ಇಸ್ರೇಲ್‌ಗೆ ಅಮೆರಿಕ ಹೇಳಿದ್ದು ಏನು?
ಇಸ್ರೇಲ್‌ಗೆ ಇದೀಗ ಬಿಸಿ ತುಪ್ಪ ಗಂಟಲಿಗೆ ಬಿದ್ದಂತೆ ಆಗಿದ್ದು, ಗಾಜಾ ವಿರುದ್ಧ ಯುದ್ಧ ಸಾರಿದ ಬಳಿಕ ಒಂದಲ್ಲ ಒಂದು ರೀತಿ ಸಂಕಷ್ಟ ಎದುರಿಸುತ್ತಿದೆ. ಅಮೆರಿಕ ಕೂಡ ಈ ವಿಚಾರದಲ್ಲಿ ಇಸ್ರೇಲ್ ಸೇನೆಯ ವಿರುದ್ಧ ಗರಂ ಆಗಿದೆ. ಯಾಕಂದ್ರೆ ಇಸ್ರೇಲ್ ಮಿಲಿಟರಿ ಬೆನ್ನಿಗೆ ನಿಂತಿರುವ ಅಮೆರಿಕದ ಮೇಲೆ ಒತ್ತಡ ಕೂಡ ಹೆಚ್ಚಾಗಿದೆ. ಹೀಗಿದ್ದಾಗಲೇ ಅಮೆರಿಕ ಮಹತ್ವದ ಮನವಿ ಒಂದನ್ನು ಇಸ್ರೇಲ್ ಮುಂದೆ ಇಟ್ಟು, ಯುದ್ಧ ನಿಲ್ಲಿಸಿ ಸಾಕು ಪ್ಲೀಸ್ ಅಂತಿದೆ!
ಗಾಜಾ ಪಟ್ಟಿ ವಿರುದ್ಧ ಇಸ್ರೇಲ್ ಯುದ್ಧ ಸಾರಿ ಈಗಾಗಲೇ 01 ವರ್ಷ ಕಳೆದು ಹೋಗಿದ್ದು, ಹೀಗಾಗಿ ಯುದ್ಧ ನಿಲ್ಲಬೇಕು ಇದು ಮುಂದುವರಿದರೆ ಸಂಕಷ್ಟ ಅಂತಾ ಜಗತ್ತು ವಾದ ಮಾಡುತ್ತಿದೆ. ಅದ್ರಲ್ಲೂ ಇಸ್ರೇಲ್ ದಾಳಿ ನಡೆಸುತ್ತಿರುವ ವೇಗಕ್ಕೆ ದೊಡ್ಡ ಅವಾಂತರ ಸೃಷ್ಟಿಯಾಗುತ್ತಿದೆ. ಹೀಗಾಗಿ ಯುದ್ಧವನ್ನ ನಿಲ್ಲಿಸಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಕಂಡಿರುವ ಅಮೆರಿಕ ಇದೀಗ ನೇರವಾಗಿ ಇಸ್ರೇಲ್‌ಗೆ ಒಂದು ಮಹತ್ವದ ಸೂಚನೆ ನೀಡಿದೆ. ಆ ಸೂಚನೆ ಹೊಸ ಸಂಚಲನ ಸೃಷ್ಟಿ ಮಾಡುತ್ತಿದೆ.

ಯುದ್ಧ ನಿಲ್ಲಿಸಲು ಅಮೆರಿಕ ಹೇಳಿದ್ದೇನು?
ಅಂದಹಾಗೆ ಗಾಜಾ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಗೆಲುವು ಸಾಧಿಸಿದೆ. ಹೀಗಾಗಿ ಈ ಯುದ್ಧವನ್ನು ನಿಲ್ಲಿಸಬೇಕು, ಈ ಮೂಲಕ ಕೌಶಲಯುಕ್ತವಾದ ಗೆಲುವನ್ನು ಇಸ್ರೇಲ್ ಕಾರ್ಯತಂತ್ರದ ಯಶಸ್ಸನ್ನಾಗಿ ಪರಿವರ್ತಿಸುವ ಅಗತ್ಯವಿದೆ ಅಂತಾ ಅಮೆರಿಕ ಹೇಳಿದೆ. ಈ ಕಾರ್ಯ ಸಾಧನೆಗಾಗಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧ ಕೊನೆಗಾಣಿಸಿ, ಇದಕ್ಕಾಗಿ ಮಹತ್ವದ ಒಪ್ಪಂದಕ್ಕೆ ಬನ್ನಿ ಎಂದು ಹೇಳಿದೆ ಈಗ ಅಮೆರಿಕ. ಆದರೆ ಇಸ್ರೇಲ್ ಅಮೆರಿಕದ ಮಾತು ಕೇಳುತ್ತಾ? ಎಂಬ ಹೊಸ ಕುತೂಹಲ ಮೂಡಿದೆ. ಈ ವಿಚಾರದಲ್ಲಿ ಹಿಂದೆ ಅಮೆರಿಕ ನೀಡಿದ್ದ ಸಲಹೆಗಳನ್ನ ಇಸ್ರೇಲ್ ತಿರಸ್ಕಾರ ಮಾಡಿತ್ತು. ಮತ್ತೊಂದ್ಕಡೆ 'ಬ್ರಿಕ್ಸ್' ಶೃಂಗಸಭೆಯಲ್ಲಿ ಕೂಡ ಗಾಜಾ ಯುದ್ಧ ನಿಲ್ಲಿಸುವ ಮಹತ್ವದ ಆಜ್ಞೆಯನ್ನು ಮಾಡಲಾಗಿತ್ತು.
'ಬ್ರಿಕ್ಸ್' ಒಕ್ಕೂಟ ಹೇಳಿದ್ದು ಏನು?
2023ರ ಅಕ್ಟೋಬರ್ ತಿಂಗಳಲ್ಲಿ ಗಾಜಾ ಪಟ್ಟಿ ವಿರುದ್ಧ ಇಸ್ರೇಲ್ ಯುದ್ಧ ಸಾರಿತ್ತು. ಮೊದಲಿಗೆ ಹೀಗೆ ಯುದ್ಧ ಸಾರಲು ಕಾರಣ ಆಗಿದ್ದೇ ಹಮಾಸ್. ಯಾಕಂದ್ರೆ ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕವೇ, ಭೀಕರ ದಾಳಿ ನಡೆಸಿದ್ದ ಹಮಾಸ್ ಬಂಡುಕೋರರು ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದರು.
ಅಲ್ಲದೆ ನೂರಾರು ಉಗ್ರರು ಇಸ್ರೇಲ್ ಒಳಗೆ ನುಗ್ಗಿ ಮಾರಣಹೋಮ ನಡೆಸಿದ್ದ ಆರೋಪ ಕೂಡ ಈ ವಿಚಾರದಲ್ಲಿ ಕೇಳಿ ಬಂದಿತ್ತು. ಹೀಗಿದ್ದಾಗಲೇ ಇಸ್ರೇಲ್ ಕೂಡ ರೊಚ್ಚಿಗೆದ್ದು ಯುದ್ಧ ಘೋಷಣೆ ಮಾಡಿ ಗಾಜಾ ಪಟ್ಟಿ ಒಳಗೆ ನುಗ್ಗಿತ್ತು. ಹೀಗೆ ಸರಿಯಾಗಿ ಒಂದು ವರ್ಷದಿಂದ ಎರಡೂ ದೇಶಗಳು ಕಿತ್ತಾಡುತ್ತಾ ಇವೆ. ಇದೇ ಸಮಯದಲ್ಲಿ 'ಬ್ರಿಕ್ಸ್' ಒಕ್ಕೂಟ ಇಸ್ರೇಲ್‌ಗೆ ಶಾಕ್ ನೀಡಿದೆ. ಅಲ್ಲದೆ ಗಾಜಾ ವಿರುದ್ಧದ ಯುದ್ಧ ನಿಲ್ಲಿಸಬೇಕು ಎಂದು ಇಸ್ರೇಲ್‌ಗೆ 'ಬ್ರಿಕ್ಸ್' ಒಕ್ಕೂಟ ಆಗ್ರಹ ಕೂಡ ಮಾಡಿದೆ.












Click it and Unblock the Notifications