Get Updates
Get notified of breaking news, exclusive insights, and must-see stories!

ಅಮೆರಿಕ: ಫ್ಲೋರಿಡಾದಲ್ಲಿ ಭೀಕರ ಶೂಟೌಟ್ ಗೆ ನಾಲ್ವರು ಬಲಿ

ಫ್ಲೋರಿಡಾ, ಆಗಸ್ಟ್ 27: ಅಮೆರಿಕದ ಫ್ಲೋರಿಡಾದ ಜಾಕ್ಸೋನ್ ವಿಲ್ಲೆ ಎಂಬಲ್ಲಿ ನಡೆದ ಶೂಟೌಟ್ ನಲ್ಲಿ ನಾಲ್ವರು ಮೃತರಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಸ್ಥಳೀಯ ಕಾಲಮಾನದ ಪ್ರಕಾರ ಭಾನುವಾರ ಈ ಘಟನೆ ಸಂಭವಿಸಿದ್ದು, 11 ಜನರ ಮೇಲೆ ಓರ್ವ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

America: Many killed in Florida mass shooting

ಆರೋಪಿ ಸಹ ಘಟನೆಯಲ್ಲಿ ಮೃತನಾಗಿದ್ದಾನೆಂದು ವರದಿ ತಿಳಿಸಿದೆ. ವಿಡಿಯೋ ಗೇಮ್ ಟೂರ್ನಮೆಂಟ್ ವೊಂದು ನಡೆಯುತ್ತಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ.

ಆರೋಪಿಯನ್ನು ಮಾಲ್ಟಿಮೋರ್ ನ 24 ವರ್ಷ ವಯಸ್ಸಿನ ಡೆವಿಡ್ ಕಾಟ್ಜ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ನಾಲ್ವರು ಮೃತರಾದರೆ, 11 ಜನ ಗಂಭೀರ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಫ್ಲೋರಿಡಾದ ಶಾಲೆಯೊಂದರ ಮೇಲೆ ನಡೆದ ಶೂಟೌಟ್ ನಲ್ಲಿ 17 ಜನರು ಬಲಿಯಾಗಿದ್ದರು. ಈ ಹೀನಾತಿಹೀನ ಕೃತ್ಯದಲ್ಲಿ ಇದೇ ಶಾಲೆಯ ಹಳೇ ವಿದ್ಯಾರ್ಥಿಯೊಬ್ಬನ ಕೈವಾಡವಿದೆ ಎಂದು ಆತನನ್ನು ಬಂಧಿಸಲಾಗಿತ್ತು. ಆದರೆ ಯಾವ ತಪ್ಪನ್ನೂ ಮಾಡದ ಅಮಾಯಕ ಮಕ್ಕಳು ಈ ಘಟನೆಯಲ್ಲಿ ಬಲಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+