ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ: ವಿಡಿಯೋ

ಟೆಕ್ಸಾಸ್, ಜು. 21: ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪತಿ ಆಕೆಯನ್ನು ಆಸ್ಪತ್ರಗೆ ಸೇರಿಸಲು ತನ್ನ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ. ಆದರೆ ಟ್ರಾಫಿಕ್ ಸಮಸ್ಯೆಯಿಂದ ನಿಗದಿತ ವೇಳೆಗೆ ತಲುಪುವುದು ಅಸಾಧ್ಯ ಎಂಬುದು ಖಾತ್ರಿಯಾಗಿದ್ದು.

ಗಂಡನನ್ನು ಬಿಟ್ಟರೇ ಕಾರಿನಲ್ಲಿ ಯಾರೂ ಇರಲಿಲ್ಲ. ಹೆರಿಗೆ ನೋವು ಕ್ಷಣಕ್ಷಣಕ್ಕೂ ಜಾಸ್ತಿಯಾಗುತ್ತಿತ್ತು. ಮಹಿಳೆ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. ಮಗು ಮತ್ತು ತಾಯಿ ಇಬ್ಬರ ಆರೋಗ್ಯದಲ್ಲೂ ಯಾವ ಸಮಸ್ಯೆಗಳು ತಲೆತೋರಲಿಲ್ಲ.[ಖಾಸಗಿ ಆಸ್ಪತ್ರೆ ಪ್ರಯೋಗಕ್ಕೆ ಸಿಲುಕಿದ ಮಗುವಿನ ಕತೆ]

rain

ಬಸ್ ನಲ್ಲಿ, ರೈಲಿನಲ್ಲಿ ಹೆರಿಗೆಯಾದ ಘಟನೆಗಳು ಭಾರತದಲ್ಲಿ ವರದಿಯಾಗುತ್ತಲೇ ಇರುತ್ತವೆ. ಇದೆಂಥ ವಿಶೇಷ ಅಂದುಕೊಳ್ಳಬೇಡಿ. ಈ ಸಂಪೂರ್ಣ ಘಟನಾವಳಿಗಳನ್ನು ಚಿತ್ರಿಕರಣವಾಗಿದ್ದು ಯು ಟ್ಯೂಬ್ ಗೆ ಅಪ ಲೋಡ್ ಆದ ತುಣುಕನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

ಜೋನಾಥನ್ ಎಂಬವರು ತನ್ನ ಪತ್ನಿ ಲೀಸಾರನ್ನು ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ತುಂಬಾ ಟ್ರಾಫಿಕ್ ಇದ್ದ ಕಾರಣದಿಂದ ಆಸ್ಪತ್ರೆಗೆ ಹೋಗಲು ವಿಳಂಬವಾಗಿದ್ದು ಈ ನಡುವೆ ದಾರಿ ಮಧ್ಯದಲ್ಲಿಯೇ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಜೋನಾಥನ್ ಕಾರಿನಲ್ಲಿ ಗೋ ಪ್ರೋ ಕ್ಯಾಮೆರಾ ಅಳವಡಿಸಿದ್ದು, ಲೀಸಾ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದೆ. ನಂತರ ಜೋನಾಥನ್ ವಿಡಿಯೋವನ್ನು ಅಂತರ್ಜಾಲಕ್ಕೆ ಅಪ್ ಲೋಡ್ ಮಾಡಿದ್ದಾರೆ.[ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

ಕಾರಿನಲ್ಲೇ ಹೆರಿಗೆಯಾಗಿದ್ದು ಆಸ್ಪತ್ರೆ ತಲುಪಿದ ತಕ್ಷಣ ವೈದ್ಯರು ತಾಯಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಿದ್ದು ತಾಯಿ ಮಗುವಿಬ್ಬರೂ ಆರೋಗ್ಯವಾಗಿವೆ. ವಿಡಿಯೋವನ್ನು ನೀವು ವೀಕ್ಷಣೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+