ಉಕ್ರೇನ್‌ಗೆ ಸಾವಿರ ಸಾವಿರ ಕೋಟಿ ಉಡುಗೊರೆ ಕೊಟ್ಟ ಅಮೆರಿಕ!
ವಾಷಿಂಗ್ಟನ್: ರಷ್ಯಾದಲ್ಲಿ ಆಂತರಿಕ ಬೆಂಕಿ ಹೊತ್ತಿಕೊಂಡಿದೆ, ಮತ್ತೊಂದ್ಕಡೆ ಅಮೆರಿಕ ಈ ಹೊತ್ತಲ್ಲೇ ಉಕ್ರೇನ್‌ಗೆ ಭಾರಿ ನೆರವು ಘೋಷಣೆ ಮಾಡಿದೆ. ಈ ಮೂಲಕ ಪುಟಿನ್ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ ಅಮೆರಿಕ. ಈಗಾಗಲೇ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಿರುವ ದೊಡ್ಡಣ್ಣ, ಇದೀಗ ಉಕ್ರೇನ್‌ಗೆ
ಕೊಟ್ಟಿರುವ ಗಿಫ್ಟ್ ಎಷ್ಟು ಮೊತ್ತದ್ದು ಗೊತ್ತಾ?
ಹೌದು, ಅಮೆರಿಕ ಈಗ ಮತ್ತೊಂದು ಹಂತದ ನೆರವು ಎಂದು ಉಕ್ರೇನ್‌ಗೆ ಸುಮಾರು 500 ಮಿಲಿಯನ್ ಡಾಲರ್ ನೆರವು ನೀಡಿದೆ. ಇದನ್ನ ಭಾರತೀಯ ರೂಪಾಯಿ ಲೆಕ್ಕಕ್ಕೆ ಕನ್ವರ್ಟ್ ಮಾಡಿ ಹೇಳುವುದಾದರೆ, ಸುಮಾರು 4 ಸಾವಿರ ಕೋಟಿ ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತದ ನೆರವನ್ನು ಉಕ್ರೇನ್‌ಗೆ ಘೋಷಿಸಿದೆ ಅಮೆರಿಕ. ರಷ್ಯಾ ಮತ್ತು ಉಕ್ರೇನ್ ಯುದ್ಧವು ಶುರುವಾಗಿ ಸುಮಾರು 500 ದಿನ ಕಳೆದಿದೆ. ಇದೇ ಹೊತ್ತಲ್ಲಿ ಅಮೆರಿಕ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 3 ಲಕ್ಷ ಕೋಟಿಗೂ ಹೆಚ್ಚು ನೆರವು ನೀಡಿದೆ. ಈ ಮೂಲಕ ರಷ್ಯಾಗೆ ಪರೋಕ್ಷವಾಗಿ ಸೆಡ್ಡು ಹೊಡೆದಿದೆ. ಹಾಗಾದ್ರೆ ಈಗ ಅಮೆರಿಕ ಕೊಟ್ಟಿರುವ ಉಡುಗೊರೆಗಳು ಯಾವುವು? ಮುಂದೆ ಓದಿ.

ಉಕ್ರೇನ್‌ಗೆ ನೆರವು ಕೊಟ್ಟಿದ್ದು ಏಕೆ?
ಅಷ್ಟಕ್ಕೂ ರಷ್ಯಾ ವಿರುದ್ಧ ಹೋರಾಡಲು ಇದೀಗ ಅಮೆರಿಕ 50ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನ ಒಳಗೊಂಡ ವಾಹನಗಳು, ವೈಮಾನಿಕ ರಕ್ಷಣಾ ವ್ಯವಸ್ಥಗೆ ಅಗತ್ಯ ದ್ರಾವಣವನ್ನೂ ಉಕ್ರೇನ್‌ಗೆ ಕಳುಹಿಸಲಿದೆ. ಉಕ್ರೇನ್ ಮೇಲೆ ರಷ್ಯಾ ಪಡೆಗಳು ಆಕ್ರಮಣ ಆರಂಭಿಸಿದ ನಂತರ ಅಮೆರಿಕ ಈವರೆಗೆ 41ನೇ ಬಾರಿ ಉಕ್ರೇನ್‌ಗೆ ನೆರವು ನೀಡಿದಂತಾಗುತ್ತದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ.
ಪುಟಿನ್ ವಿರುದ್ಧ ನಡೆದಿದೆಯಾ ಸಂಚು?
ಇನ್ನೊಂದ್ಕಡೆ ರಷ್ಯಾ ಸೇನಾ ಮುಖ್ಯಸ್ಥನ ವಿರುದ್ಧ ದಂಗೆ ಎದ್ದಿದ್ದ ರಷ್ಯಾ ಖಾಸಗಿ ಸೇನಾ ಪಡೆ ವ್ಯಾಗ್ನರ್ ಗ್ರೂಪ್ ಮಸಲತ್ತು ಮೊದಲೇ ಗೊತ್ತಿತ್ತು ಎಂಬ ಸುದ್ದಿ ಈಗ ಸಂಚಲನ ಸೃಷ್ಟಿಸಿದೆ. ಯೆವ್ಗೆನಿಯ ಕುತಂತ್ರ ಮೊದಲೇ ಗೊತ್ತಿತ್ತು, ರಷ್ಯಾ ಸೇನಾಧಿಕಾರಿಗೂ ಮೊದಲೇ ಮಾಹಿತಿ ಇತ್ತು ಎಂದು ಅಮೆರಿಕದ 'ನ್ಯೂ ಯಾರ್ಕ್ ಟೈಮ್ಸ್' ವರದಿ ಮಾಡಿದೆ. ಮೊದಲೇ ಹೊತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿದೆ (Wagner Group Coup). ಉಕ್ರೇನ್ ಯುದ್ಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ರಷ್ಯಾ ಉಪ ಕಮಾಂಡರ್ ಸೆರ್ಗೇ ಸುರೊವಿಕಿನ್‌ಗೆ ವ್ಯಾಗ್ನರ್ ಗ್ರೂಪ್ ದಂಗೆ ಏಳುವ ಯೋಜನೆಯ ಬಗ್ಗೆ ಮೊದಲೇ ಗೊತ್ತಿತ್ತಂತೆ. ಗುಪ್ತಚರ ಮಾಹಿತಿ ಆಧರಿಸಿ ಅಮೆರಿಕದ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ನಲ್ಲಿ ರಷ್ಯಾ & ಅಮೆರಿಕ ಮಧ್ಯೆ ಕಿತ್ತಾಟದಲ್ಲಿ ಉಕ್ರೇನ್ ಅಸ್ತ್ರವಾಗಿ ಬಳಕೆಯಾಗುತ್ತಿದೆ ಅನ್ನೋ ಆರೋಪಕ್ಕೆ ಈಗ ಮತ್ತೆ ಬಲ ಸಿಕ್ಕಂತಾಗಿದೆ. ಉಕ್ರೇನ್ ಬಳಸಿಕೊಂಡು ಅಮೆರಿಕ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ರಷ್ಯಾ ಆರೋಪ ಮಾಡುತ್ತಿದೆ. ಈ ನಡುವೆ ರಷ್ಯಾ ಮಾತಿಗೆ ಬೆಲೆ ಕೊಡದೆ ಅಮೆರಿಕ ಕೂಡ ಉಕ್ರೇನ್‌ಗೆ ಭಾರಿ ಪ್ರಮಾಣದ ನೆರವನ್ನು ನೀಡುತ್ತಿದೆ. ಇಲ್ಲಿಯವರೆಗೂ ಸುಮಾರು 3 ಲಕ್ಷ ಕೋಟಿ ನೆರವು ನೀಡಿದ್ದ ಅಮೆರಿಕ ಇದೀಗ ಮತ್ತೆ 4 ಸಾವಿರ ಕೋಟಿ ರೂಪಾಯಿ ನೆರವನ್ನು ಘೋಷಣೆ ಮಾಡಿದೆ.












Click it and Unblock the Notifications