ನೆರವು ನೀಡಲು ಹೋದವರು ಹೆಣವಾದರು...

ಅವರೆಲ್ಲಾ ಒಳ್ಳೆಯವರು.. ಯುದ್ಧದ ಭೀಕರತೆಗೆ ನರಳಿ ಹೋಗಿದ್ದ ಜನರಿಗೆ ನೆರವು ನೀಡಲು ಬಂದಿದ್ದವರು.. ಆದರೆ ಅಲ್ಲಿ ಆಗಿದ್ದೇ ಬೇರೆ, ಯುದ್ಧ ನಡೆಯುತ್ತಿರುವ ರಣರಂಗದಲ್ಲಿ ಜೀವ ಉಳಿಸಲು ಬಂದ ಅವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇಡೀ ಜಗತ್ತಿನಾದ್ಯಂತ ಈ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ಈ ಅಮಾನವೀಯ ಘಟನೆ ನಡೆದಿದ್ದು ಎಲ್ಲಿ? ಮುಂದೆ ಓದಿ.

ಯುದ್ಧ ಅಂತಾ ಶುರುವಾದರೆ ಮನುಷ್ಯ ತನ್ನ ಗೆಲುವಿಗಾಗಿ ಎಷ್ಟು ಜನರ ರಕ್ತ ಬೇಕಾದರೂ ಹರಿಸುತ್ತಾನೆ. ಹೀಗಾಗಿಯೇ ಯುದ್ಧ ಬೇಡ ಎಂಬ ಸಂದೇಶವನ್ನು ಅದೆಷ್ಟೋ ದಾರ್ಶನಿಕರು ಸಾರಿ ಹೋಗಿದ್ದಾರೆ. ಸಾವಿರಾರು ವರ್ಷಗಳಿಂದಲೂ ಈ ಯುದ್ಧಗಳು ನಡೆಯುತ್ತಲೇ ಬಂದಿವೆ. ಆದರೆ ಯುದ್ಧಗಳಿಗೆ ಎಂದಿಗೂ ಬ್ರೇಕ್ ಬಿದ್ದಿಲ್ಲ. ಅದ್ರಲ್ಲೂ ಆಧುನಿಕ ಕಾಲದಲ್ಲಿ ಮನುಷ್ಯ ಭರ್ಜರಿ 2 ಮಹಾಯುದ್ಧಗಳನ್ನ ಮಾಡಿ ಕೋಟಿ ಕೋಟಿ ಜನರ ಜೀವ ಕಳೆದಿದ್ದಾನೆ. ಹೀಗೆ, ರಕ್ತದ ನದಿಯನ್ನೇ ಹರಿಸಿದ್ದರೂ ಮನುಷ್ಯನ ಮನಸ್ಸು ತಣ್ಣಗಾಗಿಲ್ಲ. ಹೀಗಾಗಿಯೇ ಮತ್ತೆ, ಮತ್ತೆ ಯುದ್ಧದ ದಾಹಕ್ಕೆ ಬಲಿಯಾಗುತ್ತಿದ್ದಾನೆ. ಇದೀಗ ಯುದ್ಧ ಭೂಮಿಯಲ್ಲಿ, ಸಹಾಯ ಮಾಡಲು ಹೋದವರು ಕೂಡ ಯುದ್ಧದ ಭೀಕರತೆ ಬಲಿಯಾಗಿದ್ದಾರೆ.

Allegedly Volunteers Died In Israel Military Attack At Gaza Strip

ಇಸ್ರೇಲ್ ದಾಳಿಗೆ ಅಮೆರಿಕ & ಕೆನಡಾದವರು ಬಲಿ?

ಅಂದಹಾಗೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸಿದ ವಾಯು ದಾಳಿಗೆ ಮಾನವೀಯ ನೆರವು ನೀಡಲು ಹೋಗಿದ್ದ 7 ಒಳ್ಳೆಯವರ ಪ್ರಾಣಪಕ್ಷಿ ಹಾರಿ ಹೋಗಿದೆ. 'ವರ್ಲ್ಡ್ ಸೆಂಟ್ರಲ್ ಕಿಚನ್‌ ಚಾರಿಟೇಬಲ್ ಟ್ರಸ್ಟ್‌'ನ 7 ಸ್ವಯಂ ಸೇವಕರು ಹೀಗೆ ಯುದ್ಧ ಭೂಮಿಯಲ್ಲಿ ಇಸ್ರೇಲ್ ಸೇನೆಯ ದಾಳಿಗೆ ಬಲಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕೇಂದ್ರ ಗಾಜಾದ, ಡೇರ್ ಅಲ್ ಬಲ್ಲಾ ಎಂಬಲ್ಲಿ ಘಟನೆ ನಡೆದಿದ್ದು, ಮೃತಪಟ್ಟ ಸ್ವಯಂ ಸೇವಕರಲ್ಲಿ ಅಮೆರಿಕ, ಕೆನಡಾದ ಇಬ್ಬರು ಕೂಡ ಸೇರಿದ್ದಾರೆ ಎಂಬುದು ಈಗ ಕಿಚ್ಚು ಹೊತ್ತಿಸಿದೆ.

100 ಟನ್ ಆಹಾರ ಸಾಮಗ್ರಿ...

ಇನ್ನು ಎಲ್ಲರೂ ತಮ್ಮ ಸ್ವಾರ್ಥ ಮರೆತು, ಯುದ್ಧ ಭೂಮಿಯಲ್ಲಿ ಆಹಾರ ಇಲ್ಲದೆ ಪ್ರತಿನಿತ್ಯ ನರಳಾಡುತ್ತಿದ್ದ ಜನರ ನೆರವಿಗೆ ನಿಂತಿದ್ದರು. ಹಾಗೇ 'ವರ್ಲ್ಡ್ ಸೆಂಟ್ರಲ್ ಕಿಚನ್‌ ಚಾರಿಟೇಬಲ್ ಟ್ರಸ್ಟ್‌' ಕಡೆಯಿಂದ ಬಂದಿದ್ದ 100 ಟನ್ ಆಹಾರ ಸಾಮಗ್ರಿ ತಲುಪಿಸುತ್ತಿದ್ದರು. ಟ್ರಕ್‌ ಮೂಲಕ ಅವರು ಆಹಾರ ಸಾಮಾಗ್ರಿಗಳನ್ನು ಉಗ್ರಾಣಕ್ಕೆ ಸಾಗಿಸುತ್ತಿದ್ದರು. ಆದರೆ ಇದೇ ವೇಳೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಸ್ವಯಂ ಸೇವಕರ ಪೈಕಿ 7 ಜನರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

Allegedly Volunteers Died In Israel Military Attack At Gaza Strip

ಇಸ್ರೇಲ್ ಸೇನೆ ಹೇಳಿದ್ದು ಏನು?

ಮತ್ತೊಂದು ಕಡೆ ಈ ಘಟನೆಯ ಬಗ್ಗೆ ಖುದ್ದು ಇಸ್ರೇಲ್ ಪ್ರಧಾನಿ ಕೂಡ ಹೇಳಿಕೆ ನೀಡಿದ್ದು ಗಮನ ಸೆಳೆದಿದೆ. ಆಕಸ್ಮಿಕವಾಗಿ ನಡೆದ ಈ ಘಟನೆಯಲ್ಲಿ, ಅಮಾಯಕರು ಜೀವ ಬಿಟ್ಟಿದ್ದಾರೆ. ಈ ದಾಳಿ ಬಗ್ಗೆ ಇಸ್ರೇಲ್ ಆಂತರಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ ಅಂತಾ, ಇಸ್ರೇಲ್ ಪ್ರಧಾನಿ ಬೆಂಜ್‌ಮಿನ್ ನೇತನ್ಯಾಹು ಅವರು ಈಗ ಹೇಳಿದ್ದಾರೆ. ಹಾಗೇ ಮತ್ತೊಂದು ಕಡೆ ಇದು ನಮ್ಮ ಕಡೆಯಿಂದ ತಪ್ಪಾಗಿ ನಡೆದ ದಾಳಿ ಅಂತಲೂ ಇಸ್ರೇಲ್ ಸೇನೆ ಸ್ಪಷ್ಟನೆ ಕೂಡ ಕೊಟ್ಟಿದೆ. ಹಾಗೇ ಈ ಘಟನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+