ಉಕ್ರೇನ್ ಅಧ್ಯಕ್ಷನ ವಿರುದ್ಧ ರೊಚ್ಚಿಗೆದ್ದ ಪ್ರಜೆಗಳು?

ರಷ್ಯಾ ವಿರುದ್ಧ ಉಕ್ರೇನ್ ರೊಚ್ಚಿಗೆದ್ದು ದಾಳಿ ನಡೆಸುತ್ತಿದ್ದು, ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ. ಯಾಕಂದ್ರೆ ಉಕ್ರೇನ್ ನಡೆಸುತ್ತಿರುವ ದಾಳಿ ರಷ್ಯಾಗೆ ಸೊಳ್ಳೆ ಕಚ್ಚಿದಂತಿದೆ. ಹೀಗಿದ್ದಾಗಲೂ ರಷ್ಯಾ ಜೊತೆಗೆ ಸಂಧಾನಕ್ಕೆ ಉಕ್ರೇನ್ ಒಪ್ಪಿಗೆ ಸೂಚಿಸುತ್ತಿಲ್ಲ. ಇದು ಸ್ವತಃ ಉಕ್ರೇನ್ ಪ್ರಜೆಗಳನ್ನ ರೊಚ್ಚಿಗೇಳುವಂತೆ ಮಾಡಿದೆ ಎಂಬ ಆರೋಪ ಈಗ ಕೇಳಿಬಂದಿದೆ.

ಉಕ್ರೇನ್ ಈಗ ಬಡಕಲಾಗಿ ಹೋಗಿದೆ, ಎಲ್ಲವನ್ನೂ ಕಳೆದುಕೊಂಡು ರಷ್ಯಾ ಎದುರಲ್ಲಿ ಭೀಕರ ಸೋಲು ಅನುಭವಿಸುತ್ತಿದೆ. ಹೀಗಿದ್ದಾಗಲೇ ಇತ್ತೀಚೆಗೆ ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಒಂದು ಆಫರ್ ನೀಡಿದ್ದರು. ರಷ್ಯಾ ಸಂಧಾನ ಮಾತುಕತೆ ನಡೆಸಲು ಸಿದ್ಧವಿದೆ ಎಂದಿದ್ದರು. ಆದರೆ ಪುಟಿನ್ ಮಾತಿಗೆ ಬೆಲೆ ನೀಡದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುದ್ಧ ಮುಂದುವರಿಸಿದ್ದಾರೆ. ಇದೆಲ್ಲವನ್ನೂ ನೋಡಿ ನೋಡಿ ಈಗ ಉಕ್ರೇನ್ ಜನ ಸ್ವತಃ ತಮ್ಮ ಅಧ್ಯಕ್ಷನ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Allegedly This Is What Is Going On In Ukraine After War Against The Russia

ಲಕ್ಷ ಲಕ್ಷ ಜನರ ಸಾವು?

ಈಗಿರುವ ಆರೋಪಗಳ ಪ್ರಕಾರ ಈಗಾಗಲೇ ಉಕ್ರೇನ್ ಲಕ್ಷಾಂತರ ಸೈನಿಕರು & ಜನರನ್ನ ಕಳೆದುಕೊಂಡಿದೆ. ಹೀಗಾಗಿ ಕೂಡಲೇ ರಷ್ಯಾ ಜೊತೆಗೆ ಮಾತುಕತೆ ಮಾಡಿ, ಯುದ್ಧವನ್ನ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈ ಮಾತಿಗೆ ಮನ್ನಣೆ ಸಿಗುತ್ತಿಲ್ಲ, ಉಕ್ರೇನ್ ಅಧ್ಯಕ್ಷ ತನ್ನ ಹಠ ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈಗ ತಿಕ್ಕಾಟ ಜೋರಾಗಿದ್ದು, ಉಕ್ರೇನ್‌ಗೆ ಆಂತರಿಕ ಯುದ್ಧದ ಭೀತಿ ಕೂಡ ಆವರಿಸಿದೆ. ಇತ್ತ ರಷ್ಯಾ ಕೂಡ ಉಕ್ರೇನ್ ಮೇಲೆ ಡಿಸೈನ್ ಡಿಸೈನ್ ದಾಳಿಗೆ ಸ್ಕೆಚ್ ಹಾಕುತ್ತಿದೆ.

ಯುರೋಪ್ ಜೊತೆಗೆ ಉಕ್ರೇನ್ ಅಧ್ಯಕ್ಷ

ಅಂದಹಾಗೆ ಇದೀಗ ಯುರೋಪಿಯನ್ ಒಕ್ಕೂಟದ ಜೊತೆಗೆ ಭದ್ರತಾ ಒಪ್ಪಂದಕ್ಕಾಗಿ ಸಹಿ ಹಾಕುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಘೋಷಿಸಿದ್ದು, ರಷ್ಯಾ ಸೇನೆ ಪಿತ್ತ ನೆತ್ತಿಗೆ ಏರುವಂತೆ ಮಾಡಿದೆ. ಉಕ್ರೇನ್‌ ದೇಶವನ್ನ ತಮ್ಮ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವದ ಸಂಬಂಧ ಔಪಚಾರಿಕ ಮಾತುಕತೆ ಆರಂಭ ಮಾಡುತ್ತೇವೆ ಎಂದು ಯುರೋಪ್ ಘೋಷಣೆ ಮಾಡಿತ್ತು. ಹೀಗೆ ಯುರೋಪ್ ಒಕ್ಕೂಟದ ನಾಯಕರು ಹೇಳಿಕೆ ನೀಡಿರುವ ಕೆಲವೇ ದಿನಗಳ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ರಷ್ಯಾಗೆ ಸವಾಲು ಹಾಕಿದ್ದಾರೆ.

17 ದೇಶಗಳ ಜೊತೆ ಒಪ್ಪಂದ!

ಉಕ್ರೇನ್ ಈಗಾಗಲೇ ಅಮೆರಿಕ, ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಮತ್ತು ಜಪಾನ್‌ ಸೇರಿದಂತೆ ಒಟ್ಟಾರೆ 17 ದೇಶಗಳ ಜೊತೆ ಇದೇ ರೀತಿ ದ್ವಿಪಕ್ಷೀಯ ಭದ್ರತಾ ಒಪ್ಪಂದಕ್ಕೆ ಉಕ್ರೇನ್‌ ಸಹಿ ಹಾಕಿದ್ದು, ಇದೀಗ ಮತ್ತೊಂದು ಗಟ್ಟಿ ನಿರ್ಧಾರ ಕೈಗೊಂಡಿದೆ. ಆದರೆ ಈ ಬಗ್ಗೆ ರಷ್ಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದು ಕಡೆ ಉಕ್ರೇನ್ ಒಳಗೆ ಆಂತರಿಕ ಕಿಚ್ಚು ಕೂಡ ಹೊತ್ತಿಕೊಂಡಿದೆ ಎಂಬ ಆರೋಪ ಈಗ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+