ಉಕ್ರೇನ್ ತೈಲ ಸಂಗ್ರಹ ಘಟಕಗಳನ್ನು ನಾಶ ಮಾಡಿದ ರಷ್ಯಾ ಸೇನೆ?
ರಷ್ಯಾ ಸೇನೆ ತನ್ನ ದಾಳಿಯನ್ನ ಮತ್ತಷ್ಟು ಬಿಗಿಗೊಳಿಸಿ, ಉಕ್ರೇನ್ ವಿರುದ್ಧ ಮುಂದಕ್ಕೆ ನುಗ್ಗುತ್ತಿದೆ. ಉಕ್ರೇನ್ ಯುದ್ಧದಲ್ಲಿ ಮತ್ತೆ ಎಂದಿಗೂ ಮೇಲೆದ್ದು ಬರಬಾರದು ಎಂಬುದೇ ರಷ್ಯಾ ಐಡಿಯಾ, ಹೀಗಾಗಿ ರಷ್ಯಾ ಈಗ ಉಕ್ರೇನ್ ಬುಡಕ್ಕೆ ಪೆಟ್ಟು ನೀಡುತ್ತಿದೆ. ಉಕ್ರೇನ್ ಸೇನೆಗೆ ಸೇರಿದ ಆಯಕಟ್ಟಿನ ಪ್ರದೇಶಗಳನ್ನ ವಶಕ್ಕೆ ಪಡೆದಿರುವ ರಷ್ಯಾ ಈಗ ಆ ದೇಶದ ಮೂಲ ಸೌಲಭ್ಯವನ್ನೇ ನಾಶ ಮಾಡುತ್ತಿದೆ.
ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು 2.5 ವರ್ಷ ಮುಗಿಯಲಿದ್ದು, ಕೆಲವೇ ತಿಂಗಳಲ್ಲಿ 3ನೇ ವರ್ಷ ಮುಗಿಸಿ 4ನೇ ವರ್ಷಕ್ಕೆ ಕಾಲಿಡಲಿದೆ. ಹೀಗಿದ್ರೂ ಇಬ್ಬರ ನಡುವಿನ ತಿಕ್ಕಾಟ ಮಾತ್ರ ಶಾಂತವಾಗಿಲ್ಲ. ಇಬ್ಬರೂ ಹಾವು & ಮುಂಗಿಸಿ ರೀತಿ ತಿಕ್ಕಾಟ ನಡೆಸುತ್ತಿದ್ದು, ಇದೀಗ ರಷ್ಯಾ ಸೇನೆ ಉಕ್ರೇನ್‌ನ ತೈಲ ಘಟಕಗಳ ಮೇಲೆ ಭೀಕರ ದಾಳಿ ಮಾಡಿದೆ. ಹಾಗಾದ್ರೆ ರಷ್ಯಾ ದಾಳಿಯಿಂದ ಉಕ್ರೇನ್‌ಗೆ ಏನೆಲ್ಲಾ ನಷ್ಟವಾಗಿದೆ ಗೊತ್ತಾ? ಉಕ್ರೇನ್ ಈಗ ಮರು ದಾಳಿಗೆ ಸ್ಕೆಚ್ ಹಾಕಿದೆಯಾ? ಈ ಕುರಿತಾಗಿ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

8ನೇ ಅತಿದೊಡ್ಡ ದಾಳಿ?
ಅಷ್ಟಕ್ಕೂ ಉಕ್ರೇನ್‌ನ ಆಗ್ನೇಯ & ಪಶ್ಚಿಮ ಭಾಗದ ಇಂಧನ ಸೌಕರ್ಯ ಗುರಿಯಾಗಿಸಿರುವ ರಷ್ಯಾ ಸೇನೆ, ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಮೃತಪಟ್ಟು ಹತ್ತಾರು ಜನರಿಗೆ ಭೀಕರ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ರಷ್ಯಾ ಈ ರೀತಿಯ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ, 3 ತಿಂಗಳಲ್ಲಿ ಉಕ್ರೇನ್ ವಿದ್ಯುತ್ ಉತ್ಪಾದಕ ಘಟಕಗಳನ್ನು ಗುರಿಯಾಗಿಸಿ ನಡೆದ 8ನೇ ಅತಿದೊಡ್ಡ ದಾಳಿ ಇದಾಗಿದೆ ಎಂದು ಆರೋಪ ಮಾಡಲಾಗಿದೆ.
16 ಕ್ಷಿಪಣಿ, 13 ಡ್ರೋನ್ ಅಟ್ಯಾಕ್
ಇದೀಗ ರಷ್ಯಾ ಸೇನೆಯು 16 ಕ್ಷಿಪಣಿ & 13 ಡ್ರೋನ್ ಮೂಲಕ ದಾಳಿ ನಡೆಸಿದೆ. ಈ ಪೈಕಿ 12 ಕ್ಷಿಪಣಿಗಳು, 13 ಡ್ರೋನ್‌ಗಳಿಗೆ ಬ್ರೇಕ್ ಹಾಕಿದ್ದರೂ ಮಿಕ್ಕವು ಬಂದು ಉಕ್ರೇನ್ ತೈಲ ಸಂಗ್ರಹ ಘಟಕಗಳಿಗೆ ಬಡಿದಿವೆ. ಈ ಮೂಲಕ ಉಕ್ರೇನ್ ಮತ್ತಷ್ಟು ಪರದಾಡುವ ಸ್ಥಿತಿಗೆ ಇದೀಗ ನೂಕಲ್ಪಟ್ಟಿದೆ. ಯಾಕಂದ್ರೆ ಮೊದಲೇ ಉಕ್ರೇನ್ ದೇಶದಲ್ಲಿ ನೂರಾರು ಸಮಸ್ಯೆ ಇದ್ದು, ತೈಲ ಸಂಗ್ರಹ ಘಟಕಗಳ ನಾಶದಿಂದ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗ್ತಿದೆ.
ಅಲ್ಲದೆ ಅಮೆರಿಕ & ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ನೀಡುತ್ತಿರುವ ಸಹಾಯ ಕೂಡ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಲಾಗಿದೆ. ಉಕ್ರೇನ್ ದೇಶದಲ್ಲಿ ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಲಕ್ಷಾಂತರ ಜನರು ಪರದಾಡುತ್ತಿದ್ದರೂ ಯುದ್ಧ ನಿಲ್ಲುತ್ತಿಲ್ಲ, ಹೀಗಾಗಿ ಇನ್ನೂ ಹಲವು ವರ್ಷಗಳ ಕಾಲ ಇದೇ ರೀತಿ ಯುದ್ಧವು ಮುಂದುವರಿಯುವ ಭಯ ಆವರಿಸಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications