Russia & Ukraine: ಉಕ್ರೇನ್ ವಿರುದ್ಧ ರೊಚ್ಚಿಗೆದ್ದ ಪುಟಿನ್ ಸೇನೆ, ರಷ್ಯಾ ದಾಳಿಗೆ 25 ಬಲಿ?
ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಲ್ಲಿಸಬೇಕು ಅಂತಾ ಇಡೀ ಜಗತ್ತು ಕಾಯುತ್ತಿದ್ದರೆ, ಇತ್ತ ಎರಡೂ ದೇಶಗಳು ಬಡಿದಾಡುವುದನ್ನ ಮಾತ್ರ ನಿಲ್ಲಿಸಿಲ್ಲ. ಉಕ್ರೇನ್ ವಿರುದ್ಧ ಮಾರಣಾಂತಿಕ ದಾಳಿ ಮುಂದುವರಿಸಿರುವ ರಷ್ಯಾ ಸೇನೆ ಕಂಡ ಕಂಡ ಕಡೆಗಳಲ್ಲಿ ಬಾಂಬ್ ಮಳೆಗರೆಯುತ್ತಿದೆ. ಇದರ ಪರಿಣಾಮ ಇಷ್ಟು ದಿನಗಳ ಕಾಲ ಕಟ್ಟಡಗಳು ಮಾತ್ರ ಕುಸಿದು ಬೀಳುತ್ತಿದ್ದವು. ಆದರೆ ಇಂದು ಒಂದೇ ದಿನ ರಷ್ಯಾ ದಾಳಿಗೆ 25 ಜನ ಬಲಿಯಾಗಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ.
ಉಕ್ರೇನ್ ತಮ್ಮ ಮಾತು ಕೇಳುತ್ತಿಲ್ಲ ಅನ್ನೋ ಸಿಟ್ಟು ಇಟ್ಟುಕೊಂಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಇದೀಗ ತಮ್ಮ ಸೇನೆಗೆ ಇನ್ನಷ್ಟು ಘೋರವಾದ ದಾಳಿ ನಡೆಸಲು ಆದೇಶ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಪರಿಣಾಮ ಉಕ್ರೇನ್ ನೆಲ ಸಂಪೂರ್ಣವಾಗಿ ನಲುಗಿದ್ದು, ಸಾಮಾನ್ಯ ಜನರ ಪಾಡು ಹೇಳ ತೀರದಾಗಿದೆ. ಹೀಗಿದ್ದಾಗಲೇ ಇಂದು ತುಂಬಾ ವಿಕೃತವಾಗಿ ರಷ್ಯಾ ಸೇನೆ ವಾಯುದಾಳಿ ನಡೆಸಿದೆ ಎಂದು ಆರೋಪ ಮಾಡಿದೆ ಉಕ್ರೇನ್. ಅಲ್ಲದೆ ಹೀಗೆ ರಷ್ಯಾ ಸೇನೆ ನಡೆಸಿದ ದಾಳಿಯ ಪರಿಣಾಮ ಬರೋಬ್ಬರಿ 25 ಜನ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ನೂರಾರು ಜನರಿಗೆ ಗಂಭೀರ ಗಾಯ?
ರಷ್ಯಾ ಸೇನೆ ಉಕ್ರೇನ್ ವಿರುದ್ಧದ ವಾಯು ದಾಳಿಗೆ ಡ್ರೋನ್, ಖಂಡಾಂತರ ಕ್ಷಿಪಣಿ ಸೇರಿದಂತೆ ತನ್ನ ಬಳಿ ಇರುವ ಎಲ್ಲಾ ಆಧುನಿಕ ಅಸ್ತ್ರಗಳನ್ನು ಬಳಸಿಕೊಂಡಿದೆ ಎಂದು ಗಂಭೀರವಾದ ಆರೋಪ ಮಾಡಲಾಗಿದೆ. ಅದರಲ್ಲೂ ಹಾರ್ಕೀವ್, ಒಡೆಸ್ಸಾ ಸೇರಿದಂತೆ ಡೊನೆಟ್ಸ್ಕ್ ಪ್ರಾಂತ್ಯ ರಷ್ಯಾ ನಡೆಸಿರುವ ಭೀಕರ ದಾಳಿಗೆ ನಲುಗಿ ಹೋಗಿದೆ. 25 ಜನರು ಬಲಿಯಾಗುವ ಜೊತೆಯಲ್ಲೇ ನೂರಾರು ಜನರು ಗಾಯಗೊಂಡಿದ್ದಾರೆ, ಎಂದು ಉಕ್ರೇನ್ ಅಧಿಕಾರಿಗಳು ಇದೀಗ ಮಾಹಿತಿ ನೀಡಿದ್ದಾರೆ. ಇದು ಯುದ್ಧದ ಪರಿಣಾಮವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ.












Click it and Unblock the Notifications