Ukraine War: ಉಕ್ರೇನ್ ಮೇಲೆ ಮುಂದುವರಿದ ರಷ್ಯಾ ಡೆಡ್ಲಿ ಅಟ್ಯಾಕ್- ಮತ್ತಷ್ಟು ಜೀವಗಳು ಬಲಿ
ರಷ್ಯಾ ಒಂದು ಕಡೆ ಘೋರವಾಗಿ ದಾಳಿ ಮಾಡುತ್ತಾ, ಉಕ್ರೇನ್ ದೇಶವನ್ನೇ ಇಲ್ಲ ಅನ್ನಿಸಲು ಮುಂದೆ ನುಗ್ಗುತ್ತಿದೆ. ಇನ್ನೊಂದು ಕಡೆ ಉಕ್ರೇನ್ ಅವರಿವರ ಕಾಲು ಹಿಡಿದು ಅನುದಾನವನ್ನ ತಂದು ಯುದ್ಧ ಮಾಡಬೇಕಾದ ಪರಿಸ್ಥಿತಿಗೆ ತಲುಪಿದೆ. ಇಬ್ಬರ ಈ ಜಗಳವೇ ಅಮೆರಿಕ ಸೇರಿ ಯುರೋಪ್ ಒಕ್ಕೂಟಕ್ಕೂ ಭಾರಿ ತಲೆನೋವು ತರಿಸಿದೆ. ಇಂದು ಕೂಡ ರಷ್ಯಾ ತನ್ನ ದಾಳಿ ಮುಂದುವರಿಸಿದ್ದು, ಉಕ್ರೇನ್ ಪ್ರಮುಖ ನಗರಗಳೇ ಟಾರ್ಗೆಟ್ ಆಗಿವೆ. ಪರಿಣಾಮ ಉಕ್ರೇನ್ ನೆಲ ಅಲ್ಲಾಡಿ ಹೋಗಿದೆ.
ಇದೀಗ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯ ದಿಕ್ಕನ್ನೇ ಬದಲಾವಣೆ ಮಾಡುತ್ತಾ, ಉಕ್ರೇನ್ ಮಿಲಿಟರಿಗೆ ಆಘಾತ ನೀಡುತ್ತಿದೆ. ಗಡಿ ಭಾಗದಲ್ಲಿ ಸೇನೆಯನ್ನ ನುಗ್ಗಿಸಿ, ಬಹುತೇಕ ಪ್ರದೇಶಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದಿದೆ. ಹಾಗೇ ಈಶಾನ್ಯ ಉಕ್ರೇನ್‌ನ ಹಾರ್ಕಿವ್ ಮತ್ತು ಸುಮಿ ಪ್ರದೇಶದ ಮೇಲೆ ಮಿಸೈಲ್ ಅಂದ್ರೆ ಕ್ಷಿಪಣಿ ಹಾಗೂ ವೈಮಾನಿಕ ದಾಳಿಯನ್ನ ನಡೆಸಿ ಶಾಕ್ ಕೊಟ್ಟಿದೆ. ರಾತ್ರಿಯಿಂದ ಶುರುವಾಗಿದ್ದ ದಾಳಿ ಇಂದು ಕೂಡ ಮುಂದುವರಿದಿದ್ದು, ಆ ಪರಿಣಾಮ 27 ಜನ ಗಾಯಗೊಂಡಿದ್ದಾರೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ ಎಂದು ದಾಳಿ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ.

ಜನರು ವಾಸವಿರುವ ಜಾಗವೇ ಟಾರ್ಗೆಟ್?
ರಷ್ಯಾ ಮಿಲಿಟರಿ ಇದೀಗ ಉಕ್ರೇನ್ ದೇಶದಲ್ಲಿ ಜನರು ವಾಸ ಮಾಡುತ್ತಿರುವ ಜಾಗಗಳ ಮೇಲೆ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ. ಒಂದು ಕಡೆ ಸಾವಿನ ಸಂಖ್ಯೆ ಹೆಚ್ಚಾಗುವ ಜೊತೆಗೇ, ಇನ್ನೊಂದು ಕಡೆ ಮೂಲ ಸೌಕರ್ಯ ಕೂಡ ಹಾಳಾಗಿ ಹೋಗುತ್ತಿದೆ. ರಸ್ತೆ, ನೀರು ಸೇರಿದಂತೆ ಕಟ್ಟಡಗಳು ಈಗಾಗಲೇ ಸರ್ವನಾಶ ಆಗಿವೆ. ಔಷಧ ತಯಾರಿಕಾ ಕಂಪನಿಗಳ ಮೇಲೆಯೂ ರಷ್ಯಾ ದಾಳಿಯನ್ನ ನಡೆಸಿದೆ ಎಂಬ ಆರೋಪ ಇದ್ದು, ಭಾರತ ಮೂಲದ ಮಾಲೀಕರ ಕಂಪನಿಯು ಇದಾಗಿದೆ ಎಂಬ ಮಾಹಿತಿ ಇದೆ. ಈ ರೀತಿಯಾಗಿ ರಷ್ಯಾ ರೊಚ್ಚಿಗೆದ್ದು ಅಟ್ಯಾಕ್ ಮಾಡ್ತಿರುವ ಕಾರಣಕ್ಕೆ ಭಯದ ವಾತಾವರಣ ಸೃಷ್ಟಿಯಾಗಿದೆ.
ಪುಟಿನ್ ವಿರುದ್ಧ ಟ್ರಂಪ್ ಆಕ್ರೋಶ?
ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋಪ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಒಂದು ರೌಂಡ್ ವಾರ್ನಿಂಗ್ ಕೂಡ ಕೊಟ್ಟಿರುವ ಡೊನಾಲ್ಡ್ ಟ್ರಂಪ್, ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಅಂತಾ ಹೇಳಿದ್ದಾರೆ. ಹೀಗಿದ್ದಾಗಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಪ್ಲಾನ್ ಮಾಡಿದ್ದಾರಂತೆ. ಈ ಮೂಲಕವೇ ರಷ್ಯಾಗೆ ಹೊಸ ಶಾಕ್ ನೀಡುತ್ತಿರುವುದು ತಲ್ಲಣ ಎಬ್ಬಿಸಿದೆ. ಅಮೆರಿಕದ ಜೊತೆ ಹೊಸ ಡೀಲ್ ಮಾಡಿಕೊಂಡು ಯುದ್ಧಕ್ಕೆ ಅನುದಾನ & ಶಸ್ತ್ರಾಸ್ತ್ರ ಪಡೆಯಲು ಉಕ್ರೇನ್ ಈಗ ಪ್ಲಾನ್ ಮಾಡಿದೆ. ಈ ಮೂಲಕ, ರಷ್ಯಾ ವಿರುದ್ಧ ಅಮೆರಿಕ ಹೊಸ ನಿರ್ಬಂಧ ಹೇರುವಂತೆ ಮಾಡುವ ಪ್ಲಾನ್ ಕೂಡ ಉಕ್ರೇನ್ ಅಧ್ಯಕ್ಷನಿಗೆ ಇದೆ ಎನ್ನಲಾಗಿದೆ.












Click it and Unblock the Notifications