ಎಸ್-300 ಕ್ಷಿಪಣಿ ದಾಳಿ: 16 ಜನರನ್ನು ಹತ್ಯೆ ಮಾಡಿದ ರಷ್ಯಾ ಸೇನೆ?
ಉಕ್ರೇನ್ ವಿರುದ್ಧ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿದೆ. ಕಳೆದ 2 ವರ್ಷಗಳಿಂದ ಹೀಗೆ ಪ್ರತಿ ದಿನವೂ ದಾಳಿ ಮಾಡುತ್ತಿರುವ ರಷ್ಯಾಗೆ ಶಸ್ತ್ರಾಸ್ತ್ರ ಖಾಲಿ ಆಗುವ ಭಯ ಎದುರಾಗಿತ್ತು. ಈ ನಡುವೆ ಚೀನಾ & ಉತ್ತರ ಕೊರಿಯಾ ಸಹಾಯ ಪಡೆಯುತ್ತಿರುವ ರಷ್ಯಾ ಸೇನೆ, ಉಕ್ರೇನ್ ವಿರುದ್ಧ ಪುಟಿದೆದ್ದಿದೆ. ಅದರಲ್ಲೂ ರಷ್ಯಾ ಸೇನೆ ನಿನ್ನೆ ಎಸ್-300 ಕ್ಷಿಪಣಿ ಬಳಸಿ ನಡೆಸಿರುವ ದಾಳಿಗೆ 16 ಜನ ಜೀವ ಬಿಟ್ಟಿದ್ದಾರೆ.
ರಷ್ಯಾ ಈಗ ತನ್ನ ದಾಳಿಯ ತಂತ್ರವನ್ನು ಬದಲಾಯಿಸಿದೆ. ಯಾಕಂದ್ರೆ ಇಷ್ಟು ದಿನ ಉಕ್ರೇನ್ ನೆಲದ ಮೇಲೆ ತನ್ನ ಭೂ ಸೇನೆಯ ಮೂಲಕ ಹೆಚ್ಚಾಗಿ ದಾಳಿ ಮಾಡಿದ್ದ ರಷ್ಯಾ, ಈಗ ತನ್ನ ಬಳಿ ಇರುವ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಹೊರಗೆ ತೆಗೆಯುತ್ತಿದೆ. ಇಷ್ಟು ದಿನಗಳ ಕಾಲ ಉಕ್ರೇನ್ ಬಳಿ ಇರುವ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಪರಿಶೀಲನೆ ಮಾಡಿ ನಂತರ ರಷ್ಯಾ ಈ ರೀತಿ ಅಟ್ಯಾಕ್ ಶುರು ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಪೈಕಿ ಈಗ, ಎಸ್-300 ಕ್ಷಿಪಣಿ ಬಳಸಿ ಡೆಡ್ಲಿ ಅಟ್ಯಾಕ್ ಮಾಡಿದೆ ರಷ್ಯಾ ಸೇನೆ.

16 ಜನ ಬಲಿ, ಕಟ್ಟಡಗಳು ಉಡೀಸ್!
ಉಕ್ರೇನ್ ದೇಶದ ಅತಿದೊಡ್ಡ ಪ್ರಾಂತ್ಯ ಖಾರ್ಕಿವ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡುತ್ತಿದೆ ರಷ್ಯಾ ಸೇನೆ. ನಿನ್ನೆ ಕೂಡ ಉಕ್ರೇನ್‌ನ ಖಾರ್ಕಿವ್ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 16ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಹಾಗೂ ಹಲವು ಕಟ್ಟಡಗಳು ನಾಶವಾಗಿವೆ ಎಂದು ಇದೀಗ ಉಕ್ರೇನ್ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಪ್ರಮುಖವಾಗಿ ರಷ್ಯಾ ಬಳಿ ಇರುವ ಕ್ಷಿಪಣಿ ವ್ಯವಸ್ಥೆ ಪೈಕಿ ಎಸ್-300 ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಎಸ್-300 ಒಂದು ಸ್ಯಾಂಪಲ್ ಅಷ್ಟೇ, ರಷ್ಯಾ ಬಳಿ ಈ ರೀತಿ ನೂರಾರು ವೆಪನ್ಸ್ ಇವೆ. ಹೀಗೆ ಸದ್ಯಕ್ಕೆ ಸ್ಯಾಂಪಲ್ ಎನ್ನುವಂತೆ ಉಕ್ರೇನ್ ವಿರುದ್ಧ ರಷ್ಯಾ ಸೇನೆ ಈಗ ಎಸ್-300 ಅಸ್ತ್ರವನ್ನ ಬಳಕೆ ಮಾಡಿದೆ. ಹೀಗಿದ್ದಾಗಲೇ ಅಮೆರಿಕ & ಯುರೋಪ್ ದೇಶಗಳು ಸಹಾಯ ಮಾಡಿದರೂ ಉಕ್ರೇನ್‌ಗೆ ಈಗ ರಷ್ಯಾ ವಿರುದ್ಧ ಗೆಲ್ಲಲು ಆಗುತ್ತಿಲ್ಲ. ಇದು ಯುದ್ಧದ ರಕ್ತಪಾತ ಹೆಚ್ಚಾಗಲು ಕಾರಣವಾಗಿದೆ ಎಂಬ ಮಾತು ಕೇಳಿಬಂದಿದೆ.

ಯುದ್ಧ ಮುಗಿಯುವ ಹಂತಕ್ಕೆ ಬಂತಾ?
ಉಕ್ರೇನ್ ಕೂಡ ರಷ್ಯಾ ನಡೆಸುತ್ತಿರುವ ದಾಳಿಗೆ ರೊಚ್ಚಿಗೆದ್ದಿದೆ, ಆದರೆ ಏನೂ ಮಾಡಲಾಗದ ಪರಿಸ್ಥಿತಿಗೆ ತಲುಪಿರುವ ಉಕ್ರೇನ್ ಪರದಾಡ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾ ದಾಳಿ ಅತ್ಯಂತ ಕ್ರೂರ ಎಂದು ಕರೆದು ಆಕ್ರೋಶ ಹೊರಹಾಕಿದ್ದಾರೆ. ಹೀಗೆ ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್‌ಗೆ ಬರುತ್ತಿರುವ ಸೇನಾ ನೆರವು ಸಾಲುತ್ತಿಲ್ಲ ಎಂಬ ಬೇಸರ ಕೂಡ ಉಕ್ರೇನ್ ಸೇನೆಯ ಕಡೆಯಿಂದ ಈಗ ವ್ಯಕ್ತವಾಗಿದೆ. ಈಗಾಗಲೇ ಉಕ್ರೇನ್‌ನ ಬಹುತೇಕ ಪ್ರದೇಶಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದೆ, ಹೀಗಾಗಿ ಇನ್ನೇನು ಕೆಲವೇ ತಿಂಗಳಲ್ಲಿ ಉಕ್ರೇನ್ ಸಂಪೂರ್ಣ ಸೋತು ಸುಣ್ಣವಾಗುವ ಭಯ ಕಾಡುತ್ತಿದೆ.












Click it and Unblock the Notifications