ಉಕ್ರೇನ್ ವಿರುದ್ಧ ರಷ್ಯಾ ಸೇನೆಯಿಂದ ಭಯಾನಕ ಬಾಂಬ್ ಬಳಕೆ?

ರಷ್ಯಾ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಜಗತ್ತೇ ನಡುಗುವ ರೀತಿ ಸುದ್ದಿಯೊಂದು ಸ್ಫೋಟವಾಗಿದೆ. ಉಕ್ರೇನ್ ವಿರುದ್ಧ ಈಗಾಗಲೇ ರಷ್ಯಾ ಯುದ್ಧ ಆರಂಭಿಸಿ, ಘೋರ ದಾಳಿ ನಡೆಸುತ್ತಿರುವ ವಿಚಾರ ಇಡೀ ಜಗತ್ತಿಗೇ ಗೊತ್ತಿದೆ. ಹೀಗಿದ್ದಾಗ ಉಕ್ರೇನ್ ನಾಶ ಮಾಡಲು ರಷ್ಯಾ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೂಡ ಇದ್ದು. ಈ ಆರೋಪಕ್ಕೆ ಪೂರಕವಾಗಿ ಇದೀಗ, ಉಕ್ರೇನ್ ವಿರುದ್ಧ ರಷ್ಯಾ ಸೇನೆಯಿಂದ ಭಯಾನಕ ಬಾಂಬ್ ಬಳಕೆ ಆಗಿದೆಯಾ? ಎಂಬ ಪ್ರಶ್ನೆ ಮೂಡಿದೆ.

ಉಕ್ರೇನ್‌ಗೆ ಈಗ ರಷ್ಯಾ ಸೇನೆ ಕೊಡುತ್ತಿರುವ ಒಂದೊಂದು ಏಟು ಸದಾ ನೆನಪಿನಲ್ಲೇ ಉಳಿಯುವ ರೀತಿ ಇದ್ದು, ಭರ್ಜರಿಯಾಗಿ ದಾಳಿ ನಡೆಸುತ್ತಿದೆ ರಷ್ಯಾ ಸೇನೆ. ಹೀಗಿದ್ದಾಗ ರಷ್ಯಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಅದು ಏನು ಅಂದ್ರೆ ನ್ಯೂಕ್ಲಿಯರ್ ಅಸ್ತ್ರದ ರೀತಿಯಲ್ಲೇ ಕೆಲಸ ಮಾಡುವ, ಅಂದ್ರೆ ಪರಮಾಣು ಅಸ್ತ್ರದಂತೆ ಇರುವ ಭಯಾನಕ ಬಾಂಬ್ ಒಂದನ್ನ ರಷ್ಯಾ ಪ್ರಯೋಗ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಮಿಲಿಟರಿ ನಿಷೇಧಿತ ಬಾಂಬ್ ಪ್ರಯೋಗ ಮಾಡಿದೆ ಎಂಬ ಗಂಭೀರವಾದ ಆರೋಪ ಮಾಡಲಾಗಿದೆ. ಹಾಗಾದ್ರೆ ಯಾವುದು ಅಂತಹ ಭಯಾನಕ ಬಾಂಬ್? ಯಾಕೆ ಆ ಬಾಂಬ್ ಪ್ರಯೋಗ ಮಾಡಿದೆ ರಷ್ಯಾ ಸೇನೆ? ಮುಂದೆ ಓದಿ.

Allegedly Russia May Used The Thermobaric Bomb Against Ukraine

ಉಕ್ರೇನ್ ಕಥೆ ಮುಗಿಸಲು ರಷ್ಯಾ ಸ್ಕೆಚ್?

ಹೌದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ರಷ್ಯಾದ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. 'ಥರ್ಮೋಬಾರಿಕ್' ಎಂದು ಕರೆಯಲ್ಪಡುವ, ರಷ್ಯಾದ ಒಡಿಎಬಿ-9000 (ODAB-9000) ಸೂಪರ್ ಬಾಂಬ್ ಒಂದನ್ನ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಮಿಲಿಟರಿ ಪ್ರಯೋಗ ಮಾಡಿದೆ ಎಂದು ಆರೋಪಿಸಲಾಗಿದೆ. ಆರೋಪ ಸಾಬೀತು ಮಾಡುವಂತೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಕೂಡ ವೈರಲ್ ಆಗುತ್ತಿದ್ದು, ಪಾಶ್ಚಿಮಾತ್ಯ ದೇಶಗಳು ಇದೇ ವಿಡಿಯೋ ಮೂಲಕ ರಷ್ಯಾದ ವಿರುದ್ಧ ಆಕ್ರೋಶ ಹೊರ ಹಾಕುತ್ತಿವೆ.

ಹಲವು ಯುದ್ಧಗಳು ಶುರು ಗುರೂ!

ಒಟ್ನಲ್ಲಿ ಏನೋ ಮಾಡಲು ಹೋಗಿ ಏನೇನೋ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಆರೋಪಗಳು ಕೂಡ ಕೇಳಿಬರುತ್ತಿವೆ. ಒಂದು ಕಡೆ ಈಗ ರಷ್ಯಾ & ಉಕ್ರೇನ್ ನಡುವಿನ ಯುದ್ಧದಲ್ಲಿ ನಿಷೇಧಿತ ಬಾಂಬ್ ಬಳಕೆ ಮಾಡಲಾಗಿದೆ. ಹಾಗೇ ಇನ್ನೊಂದು ಕಡೆ ಇಸ್ರೇಲ್ ಸೇನೆಯ ವಿರುದ್ಧ, ಲೆಬನಾನ್, ಇರಾನ್ & ಸಿರಿಯಾ ಸೇರಿದಂತೆ ಗಾಜಾ ಪಟ್ಟಿ ಯುದ್ಧ ಮಾಡುತ್ತಿದೆ. ಇದು ಸಾಲದು ಎನ್ನುವಂತೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಕೂಡ ಯುದ್ಧಕ್ಕೆ ಸಿದ್ಧವಾಗಿವೆ. ಹೀಗೆ ನಡೆಯುತ್ತಿದ್ದರೆ ಅತಿ ಶೀಘ್ರದಲ್ಲೇ 3ನೇ ಮಹಾಯುದ್ಧ ಗ್ಯಾರಂಟಿ ಎಂಬ ಭಯ ಹುಟ್ಟಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+