ಐಯೋ.. ಏನ್ ಕಾಟ ಗುರೂ.. ಮತ್ತೊಂದು ಯುದ್ಧ ಮಾಡ್ತೀನಿ ಅಂತಿದ್ದಾನೆ ಈ ಸರ್ವಾಧಿಕಾರಿ!

ಯುದ್ಧ.. ಯುದ್ಧ.. ಯುದ್ಧ.. ಹೀಗೆ ಜಗತ್ತಿನ ಯಾವ ಮೂಲೆಯಲ್ಲಿ ಕೇಳಿದರೂ ಇದೀಗ ಬರೀ ಯುದ್ಧದ ಮಾತೇ ಕಿವಿಗೆ ಬೀಳುತ್ತಿದೆ. ಇರಾನ್, ಲೆಬನಾನ್, ಸಿರಿಯಾ ವಿರುದ್ಧ ಈಗ ಇಸ್ರೇಲ್ ಯುದ್ಧ ಮಾಡುತ್ತಿದೆ. ಇನ್ನೊಂದು ಕಡೆ ರಷ್ಯಾ & ಉಕ್ರೇನ್ ಜಂಗಿ ಕುಸ್ತಿ ಶುರು ಮಾಡಿ ಮುಂದಿನ ಫೆಬ್ರವರಿಗೆ 3 ವರ್ಷ ತುಂಬಿ 4ನೇ ವರ್ಷ ಶುರುವಾಗಲಿದೆ. ಹೀಗಿದ್ದಾಗಲೇ ನಾನು ಯಾಕೆ ಸುಮ್ಮನೆ ಇರಲಿ? ಅಂತಾ ಉತ್ತರ ಕೊರಿಯಾ ಸರ್ವಾಧಿಕಾರಿ ಕೂಡ ಗುಡುಗಿದ್ದಾನೆ!

3ನೇ ಮಹಾಯುದ್ಧ ನಡೆಸಲು ಬಹುಶಃ ಮನುಷ್ಯರು ತುದಿಗಾಲಲ್ಲಿ ನಿಂತಿರುವ ರೀತಿ ಕಾಣ್ತಾ ಇದೆ. ಯಾಕಂದ್ರೆ ಎಲ್ಲಿ ನೋಡಿದರೂ ಬರೀ ಯುದ್ಧ & ಹಿಂಸೆ ಬಗ್ಗೆಯೇ ಚರ್ಚೆಗಳು ಈಗ ನಡೆಯುತ್ತಿವೆ. ಇದು ಒಂದು ರೀತಿ ಯುದ್ಧದ ನಾಡಾಗಿ ಪರಿವರ್ತನೆ ಆಗುತ್ತಿದ್ದು, ಮನುಷ್ಯ ಮಾಡುತ್ತಿರುವ ಪಾಪ ಇದೀಗ ಭೂಮಿಯನ್ನೇ ಬಲಿ ತೆಗೆದುಕೊಳ್ಳಲು ಸಜ್ಜಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದೇ ಸಮಯದಲ್ಲಿ ನಾನು ಯಾಕೆ ಸುಮ್ಮನೆ ಇರಲಿ? ಅಂತಾನೇ ಕಿರಿಕ್ ಶುರು ಮಾಡಿದ್ದಾನೆ ಆಧುನಿಕ ಜಗತ್ತಿನ ಪಾಲಿಗೆ ಯಮರಾಜ ಕಿಮ್ ಜಾಂಗ್ ಉನ್!

Allegedly North Korean Supreme Leader Kim Jong Un Warned About Nuclear Attack Against South Korea Allegedly North Korean Supreme Leader Kim Jong Un Warned About Nuclear Attack Against South Korea Allegedly North Korean Supreme Leader Kim Jong Un Warned About Nuclear Attack Against South Korea Allegedly North Korean Supreme Leader Kim Jong Un Warned About Nuclear Attack Against South Korea

ಅಣ್ಣಾ ಬಂದ.. ಅಣ್ಣಾ ಬಂದ..!

ಕಿಮ್ ಜಾಂಗ್ ಉನ್ ಹೆಸರು ಕೇಳಿದರೆ ಸಾಕು ಜನರು ನಗ್ತಾರೆ, ಅದರಲ್ಲೂ ಟ್ರೋಲ್ ಮಾಡುವ ಜನರಿಗೆ ಕಿಮ್ ಜಾಂಗ್ ಉನ್ ಒಂದು ರೀತಿ ಸಖತ್ ಸಬ್ಜೆಕ್ಟ್ ಕಂ ಮಟೀರಿಯಲ್. ಇಂತಿಪ್ಪ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಪರಮಾಣು ಯುದ್ಧದ ಬಗ್ಗೆ ಮಾತನಾಡಿದ್ದಾನೆ. ಅದರಲ್ಲೂ ಇರಾನ್, ಲೆಬನಾನ್, ಸಿರಿಯಾ ವಿರುದ್ಧ ಇಸ್ರೇಲ್ ಯುದ್ಧ ಮಾಡುತ್ತಿರುವಾಗ, ಇನ್ನೊಂದು ಕಡೆ ರಷ್ಯಾ & ಉಕ್ರೇನ್ ಕಾಳಗ ನಡೆಯುವ ಸಮಯದಲ್ಲೇ ಈ ಸರ್ವಾಧಿಕಾರಿ ಕಿಮ್ಮಣ್ಣ ಅಲಿಯಾಸ್ ಕಿಮ್ ಜಾಂಗ್ ಉನ್ ಕೂಡ ಯುದ್ಧಕ್ಕೆ ಸಿದ್ಧವಾಗಿದ್ದಾನೆ!

ಹೌದು, ಉತ್ತರ ಕೊರಿಯಾದ ಅತಿದೊಡ್ಡ ಶತ್ರು ದಕ್ಷಿಣ ಕೊರಿಯಾ ವಿರುದ್ಧ ಕಿಮ್ ಜಾಂಗ್ ಉನ್ ಈಗ ಕೆಂಡ ಕಾರಿದ್ದಾನೆ. ಉತ್ತರ ಕೊರಿಯಾ ತಂಟೆಗೆ ಬಂದು ಕೆಣಕಿದರೆ ನಾವು ಯಾವ ಮುಲಾಜು ಕೂಡ ನೋಡದೆ ಪರಮಾಣು ಅಸ್ತ್ರಗಳನ್ನ ಬಳಸುತ್ತೇವೆ ಎಂದಿದ್ದಾನೆ ಕಿಮ್ ಜಾಂಗ್ ಉನ್. ಅಂದ್ರೆ ದಕ್ಷಿಣ ಕೊರಿಯಾ ಮೇಲೆ ಅಣು ಬಾಂಬ್ ಹಾಕಿ ಸಂಪೂರ್ಣ ನಾಶ ಮಾಡಿ ಬಿಸಾಡುತ್ತೇವೆ ಎಂದು ಗುಡುಗಿದ್ದಾನೆ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಈಗ ಇದೇ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮತ್ತೊಂದು ಆತಂಕದ ಮೋಡ ಆವರಿಸಿದೆ.

ದಕ್ಷಿಣ ಕೊರಿಯಾಗೆ ದಿಢೀರ್ ಬೆದರಿಕೆ?

ಉತ್ತರ ಕೊರಿಯಾ & ದಕ್ಷಿಣ ಕೊರಿಯಾ ಆಗಾಗ, ಹಾವು & ಮುಂಗುಸಿ ರೀತಿ ಕಿತ್ತಾಡುತ್ತಲೇ ಇರುತ್ತವೆ. ಆದರೆ ಇದೀಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೀಡಿದ ಹೇಳಿಕೆ ಹೊಸ ಆತಂಕ ಹುಟ್ಟು ಹಾಕಿದೆ. ಉತ್ತರ ಕೊರಿಯಾ & ದಕ್ಷಿಣ ಕೊರಿಯಾ ಎರಡು ದೇಶಗಳು ನಿರಂತರವಾಗಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದ್ದು, ತನ್ನ ಭೂಪ್ರದೇಶವನ್ನು ವಿಸ್ತರಿಸಲು ದಕ್ಷಿಣ ಕೊರಿಯಾ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಿಮ್ ಇದೀಗ ಅಣುಬಾಂಬ್ ದಾಳಿ ಎಚ್ಚರಿಕೆ ನೀಡಿದ್ದಾನೆ. ಅಲ್ಲದೆ ಭೂಪಟದಲ್ಲಿ ದಕ್ಷಿಣ ಕೊರಿಯಾ ಇಲ್ಲದಂತೆ ಮಾಡಿ ಹಾಕುವೆ ಎಂದಿದ್ದಾನೆ ಕಿಮ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+