ಅಯ್ಯಯ್ಯೋ... ರಷ್ಯಾ ಹಾಕಿದ ಬಾಂಬ್‌ಗೆ ಉಕ್ರೇನ್ ಉಡೀಸ್

ಶತ್ರು ನಾಶಕ್ಕೆ ಪಣತೊಟ್ಟ ರಷ್ಯಾ ಈಗ ವಿನಾಶಕಾರಿ ಹೆಜ್ಜೆ ಇಡುತ್ತಿದ್ದು, ಭೀಕರ ವಾಯು ದಾಳಿ ನಡೆಸುತ್ತಿದೆ. ಈ ರೀತಿ ರಷ್ಯಾ ಸೇನೆ ನಡೆಸಿದ ವಾಯು ದಾಳಿಯಲ್ಲಿ ಮಹಾ ವಿನಾಶ ಉಂಟಾಗಿದೆ. ಹಾಗಾದರೆ ಹೇಗಿತ್ತು ರಷ್ಯಾ ನಡೆಸಿದ ವಾಯು ದಾಳಿಯ ಅಬ್ಬರ? ಸಾವಿನ ಸಂಖ್ಯೆ ಎಷ್ಟಕ್ಕೆ ತಲುಪಿದೆ? ರಷ್ಯಾ ಸೇನೆ ವಿರುದ್ಧ ಪ್ರತಿಕಾರಕ್ಕೆ ಉಕ್ರೇನ್ ಹಾಕಿರುವ ಸ್ಕೆಚ್ ಎಂತಹದ್ದು?

ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ವಿನಾಶಕಾರಿ ದಾಳಿಗೆ ಸೂಚನೆ ಕೊಟ್ಟಂತೆ ಈಗ ಭಾಸವಾಗುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಪಡೆಗಳು ಕೂಡ ದಾಳಿ ತೀವ್ರಗೊಳಿಸಿವೆ. ಹೀಗೆ ಇಂದು ಉಕ್ರೇನ್ ಮೇಲೆ ಹಾರಿಬಂದ ಮಿಸೈಲ್‌ಗಳ ರಾಶಿ, ಕ್ಷಣಮಾತ್ರದಲ್ಲಿ ಎಲ್ಲಾ ಧೂಳ್ ಧೂಳ್ ಮಾಡಿಬಿಟ್ಟಿದೆ. ಅದರಲ್ಲೂ ಉಕ್ರೇನ್‌ನ ಖಾರ್ಕಿವ್ ಪ್ರಾಂತ್ಯದ ಕುಪಿಯಾನ್ಸ್ಕ್ ಜಿಲ್ಲೆ ಮೇಲೆ ಬಿದ್ದ ರಷ್ಯಾ ಕ್ಷಿಪಣಿಗಳು ದೊಡ್ಡ ವಿನಾಶ ಸೃಷ್ಟಿ ಮಾಡಿವೆ. ನೋಡ ನೋಡುತ್ತಲೆ ಕುಪಿಯಾನ್ಸ್ಕ್ ಜಿಲ್ಲೆ ಸ್ಮಶಾನವಾಗಿದೆ.

50-killed-in-ukraine-after-russian-missile-attack

ರಷ್ಯಾ ದಾಳಿಗೆ 51 ಮಂದಿ ಬಲಿ?

ಅಂದಹಾಗೆ ಕುಪಿಯಾನ್ಸ್ಕ್ ಜಿಲ್ಲೆಯ ಸೂಪರ್ ಮಾರ್ಕೆಟ್ ಒಂದರ ಮೇಲೆ ರಷ್ಯಾ ಸೇನೆಯ ಮಿಸೈಲ್‌ಗಳು ಬಂದು ಬಿದ್ದಿವೆ. ಪರಿಣಾಮ ನೋಡ ನೋಡುತ್ತಲೇ ಕಟ್ಟಡಗಳು ಕುಸಿದಿದ್ದು ಸುಮಾರು 51 ಜನ ಈವರೆಗೂ ಬಲಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಆವರಿಸಿದೆ. ಈ ಕುರಿತು ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ಸೇನೆ ವಿರುದ್ಧ ಪ್ರತಿಕಾರದ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಉಕ್ರೇನ್ ನೆಲ ನಾಶವಾಗಿ ಹೋಗುತ್ತಿದೆ.

ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ

ಇನ್ನು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರಷ್ಯಾ ಈಗ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಕುರಿತು ಸ್ವತಃ ಪುಟಿನ್ ಮಾಹಿತಿ ನೀಡಿದ್ದಾರೆ. ನ್ಯೂಕ್ಲಿಯರ್ ಸಾಮರ್ಥ್ಯ ಇರುವ ಹೊಸ ಕ್ಷಿಪಣಿ ಪರೀಕ್ಷೆಯನ್ನು ರಷ್ಯಾ ಯಶಸ್ವಿಯಾಗಿ ನಡೆಸಿದೆ ಎಂದು ವ್ಲಾದಿಮಿರ್ ಪುಟಿನ್ ಮಾಹಿತಿ ನೀಡಿದ್ದಾರೆ. ಹೀಗೆ ರಷ್ಯಾ ತನ್ನಲ್ಲಿ ಇರುವಂಥ ಪರಮಾಣು ಅಸ್ತ್ರಗಳನ್ನ ಸಿದ್ಧಮಾಡಿ ಇಟ್ಟುಕೊಂಡಿರುವ ಮುನ್ಸೂಚನೆ ಸಿಕ್ಕಿದೆ. ಶತ್ರು ವಿರುದ್ಧ ರಷ್ಯಾ ಭೀಕರ ಯುದ್ಧಕ್ಕೆ ಮುಂದಾಗಿದ್ದು, ಮಹಾಯುದ್ಧದ ಆತಂಕದ ಮೋಡ ಆವರಿಸಿದೆ.

ಯುದ್ಧದ ಸಹಾಯ ನಿಲ್ಲಿಸುತ್ತಾ ಅಮೆರಿಕ?

ರಷ್ಯಾ & ಉಕ್ರೇನ್ ನಡುವೆ ಯುದ್ಧ ಜ್ವಾಲೆ ಧಗಧಗಿಸುವ ಸಮಯದಲ್ಲಿ ಅಮೆರಿಕದಿಂದ ಉಕ್ರೇನ್ ಸೇನೆಗೆ ಕೆಟ್ಟ ಸುದ್ದಿ ಸಿಕ್ಕಿದೆ. ಅದೇನಂದ್ರೆ ಅಮೆರಿಕ ಈಗಾಗಲೇ ಉಕ್ರೇನ್ ಸೇನೆಗೆ ಮತ್ತು ಉಕ್ರೇನ್ ಸರ್ಕಾರಕ್ಕೆ ಸಾಕಷ್ಟು ಸಹಾಯ ಮಾಡಿದೆ. ಈ ಮೂಲಕ ರಷ್ಯಾ ವಿರುದ್ಧ ಹೋರಾಡಲು ಬಲ ತುಂಬಿದೆ. ಆದರೆ ಈಗಿನ ಸ್ಥಿತಿಯಲ್ಲಿ ಅಮೆರಿಕ ಸಹಾಯ ಮಾಡುವುದನ್ನು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕದ ಆಡಳಿತ ಪಕ್ಷ & ವಿರೋಧ ಪಕ್ಷದ ನಡುವೆ ಎದ್ದಿರುವ ದೊಡ್ಡ ಗೊಂದಲ ಉಕ್ರೇನ್‌ಗೆ ನೀಡುತ್ತಿರುವ ಸಹಾಯಕ್ಕೆ ಅಡ್ಡಿಯಾಗುತ್ತಿದೆ. ಈ ಸಮಯಕ್ಕೆ ರಷ್ಯಾ ಕೂಡ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿದೆ.

ಉಕ್ರೇನ್‌ಗೆ ಒಂದೇ ವರ್ಷದಲ್ಲಿ ಅಮೆರಿಕ ಸರ್ಕಾರದಿಂದ 4 ಲಕ್ಷ ಕೋಟಿ ನೆರವು ಸಿಕ್ಕಿದ್ದು, ಕೆಲ ತಿಂಗಳ ಹಿಂದೆ ಸಾವಿರಾರು ಕೋಟಿ ಪ್ಯಾಕೇಜ್ ನೀಡಿದ್ದ ಅಮೆರಿಕ ಹೊಸ ಪ್ಯಾಕೇಜ್‌ ಘೋಷಣೆಗೆ ಸಿದ್ಧವಾಗಿತ್ತು ಎನ್ನಲಾಗಿತ್ತು. ಆದರೆ ಹೊಸ ಪ್ಯಾಕೇಜ್ ಮಾತು ಹಾಗಿರಲಿ, ಈಗಿನ ಪರಿಸ್ಥಿತಿ ನೋಡಿದರೆ ರಷ್ಯಾ ದಾಳಿಯಿಂದ ಉಕ್ರೇನ್ ತನ್ನನ್ನ ತಾನು ರಕ್ಷಿಸಿಕೊಳ್ಳುವುದೇ ಅನುಮಾನ ಎಂಬಂತಾಗಿದೆ. ಈಗಾಗಲೇ ಉಕ್ರೇನ್ ಗಡಿಯಲ್ಲಿ ರಷ್ಯಾ ಪರಮಾಣು ಅಸ್ತ್ರ ಸಿದ್ಧ ಮಾಡಿ ಇಟ್ಟುಕೊಂಡಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಗೊತ್ತಿಲ್ಲ. ಅಮೆರಿಕ ಕೂಡ ಸಹಾಯ ಮಾಡಿ ಮಾಡಿ ಸಾಕಾಗಿ ಹೋಗಿದ್ದು, ನ್ಯಾಟೋ ರಾಷ್ಟ್ರಗಳಿಂದಲೂ ಈಗ ಸಾಕಷ್ಟು ನೆರವು ಸಿಗುವುದೇ ಅನುಮಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+