3ನೇ ಮಹಾಯುದ್ಧ: ಇಸ್ರೇಲ್ ವಿರುದ್ದ ರಾಕೆಟ್ ದಾಳಿ ನಡೆಸಿದ ಲೆಬನಾನ್?
ಇಸ್ರೇಲ್ ಹೆಸರು ಕೇಳಿದರೆ ಸಾಕು ಮಧ್ಯಪ್ರಾಚ್ಯ ಭಾಗದ ಬಹುತೇಕ ದೇಶಗಳು ಕೊತ, ಕೊತ ಕುದಿಯುತ್ತವೆ. ಅದರಲ್ಲೂ ಕೆಲವು ದಿನಗಳ ಹಿಂದೆ 'ಪೇಜರ್ಸ್' ಸ್ಫೋಟಗೊಂಡ ನಂತರದಲ್ಲಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಇಂತಹ ಸಮಯದಲ್ಲೇ ನೇರವಾಗಿ ಇಸ್ರೇಲ್ ವಿರುದ್ಧವೇ ರಾಕೆಟ್ ಹಾರಿಸಿರುವ ಲೆಬನಾನ್, ಯುದ್ಧಕ್ಕೆ ಆಹ್ವಾನ ನೀಡಿದಂತೆ ಕಾಣುತ್ತಿದೆ. ಹಾಗಾದರೆ ತನ್ನ ಮೇಲೆ ಹಾರಿಬಂದ 100ಕ್ಕೂ ಹೆಚ್ಚು ರಾಕೆಟ್‌ಗಳನ್ನ ಇಸ್ರೇಲ್ ಮಿಲಿಟರಿ ಏನು ಮಾಡಿದೆ? ಬನ್ನಿ ತಿಳಿಯೋಣ ಬನ್ನಿ.
ಪೇಜರ್ಸ್ & ವಾಕಿಟಾಕಿ ಸ್ಫೋಟದ ನಂತರ ಇಸ್ರೇಲ್ ವಿರುದ್ಧ ಲೆಬನಾನ್ & ಇರಾನ್ ಕೂಡ ರೊಚ್ಚಿಗೆದ್ದಿದೆ. ಅದರಲ್ಲೂ ಇದೀಗ ಲೆಬನಾನ್ ನೇರವಾಗಿ ಇಸ್ರೇಲ್ ವಿರುದ್ಧ ದಾಳಿ ಮಾಡ್ತಿದೆ. ಇಸ್ರೇಲ್ ಹಾವಳಿ ಕಂಡು ರೊಚ್ಚಿಗೆದ್ದಿರುವ ಇರಾನ್ ದೇಶಕ್ಕೆ ಇದೀಗ ಯುದ್ಧ ಮಾಡೋದಕ್ಕೆ ಮತ್ತಷ್ಟು ಕಾರಣ ಸಿಕ್ಕಂತಾಗಿದೆ. ಈಗಾಗಲೇ ಲೆಬನಾನ್ ದೇಶದಲ್ಲಿ ಪೇಜರ್ಸ್ & ವಾಕಿ ಟಾಕಿ ಬ್ಲಾಸ್ಟ್ ಆಗಿದ್ದು, ಇದೀಗ ಮೊಬೈಲ್ ಕಂಡರು ಕೂಡ ಜನರು ಭಯಪಡುವ ಪರಿಸ್ಥಿತಿ ಅಲ್ಲಿ ನಿರ್ಮಾಣ ಆಗಿದೆ. ವಿಮಾನಗಳಲ್ಲಿ ಕೂಡ ಪೇಜರ್ಸ್ & ವಾಕಿ ಟಾಕಿ ನಿಷೇಧ ಮಾಡಲಾಗಿದೆ.

ವಾಕಿಟಾಕಿ & ಸೋಲಾರ್ ಪ್ಯಾನಲ್ ಸ್ಫೋಟ!
ಇಷ್ಟೊಂದು ಭಯ ಯಾಕಂದ್ರೆ ಮೊದಲಿಗೆ ಪೇಜರ್ಸ್ ಸ್ಫೋಟದ ಪರಿಣಾಮ ಸಾವಿರ ಸಾವಿರ ಜನರು ಕೈ & ಕಾಲು ಕಳೆದುಕೊಂಡು ಹಲವರು ಜೀವ ಕಳೆದುಕೊಂಡು ಪರಿಸ್ಥಿತಿ ತುಂಬಾನೇ ಸೂಕ್ಷ್ಮವಾಗಿತ್ತು. ಆ ನಂತರ ವಾಕಿಟಾಕಿ & ಸೋಲಾರ್ ಪ್ಯಾನಲ್ ಕೂಡ ಸ್ಫೋಟವಾಗಿವೆ. ಈ ಸಮಯದಲ್ಲೇ ದಿಢೀರ್ ಲೆಬನಾನ್ ನೂರಾರು ರಾಕೆಟ್ ಉಡಾಯಿಸಿದೆ ಎನ್ನುವ ಆರೋಪವನ್ನ ಇಸ್ರೇಲ್ ಮಾಡಿದೆ. ಹಾಗಾದ್ರೆ ಇಸ್ರೇಲ್ ಪರಿಸ್ಥಿತಿ ಈಗ ಹೇಗಿದೆ? ರಾಕೆಟ್ ದಾಳಿಯ ಪರಿಣಾಮ ಏನೆಲ್ಲಾ ಹಾನಿಯಾಗಿದೆ? ಮುಂದೆ ಓದಿ.
ಕಟ್ಟಡ & ವಾಹನಗಳು ಉಡೀಸ್!
ಇಸ್ರೇಲ್ ಮೇಲೆ ಹೀಗೆ ನೂರಾರು ರಾಕೆಟ್‌ಗಳು ಬಂದು ಬಿದ್ದ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಇದೀಗ ಬೆಂಕಿಯನ್ನು ನಿಯಂತ್ರಿಸಿ ಪರಿಸ್ಥಿತಿ ಹಿಡಿತಕ್ಕೆ ತಂದಿರುವ ಇಸ್ರೇಲ್ ಸೇನೆ ಕಟ್ಟೆಚ್ಚರ ವಹಿಸಿದೆ. ಕೆಲವೇ ಗಂಟೆಗಳ ವ್ಯತ್ಯಾಸದಲ್ಲಿ ಈ ರೀತಿ 100ಕ್ಕೂ ಹೆಚ್ಚು ರಾಕೆಟ್ ಉಡಾಯಿಸಲಾಗಿದ್ದು, ಕಟ್ಟಡ & ವಾಹನಗಳ ಮೇಲೆ ಬಂದು ರಾಕೆಟ್‌ಗಳು ಬಿದ್ದಿವೆ. ಆ ತಕ್ಷಣಕ್ಕೆ ಬೆಂಕಿ ಕೂಡ ಧಗಧಗ ಅಂದಿದ್ದು, ಕೂಡಲೇ ಸೇನಾಧಿಕಾರಿಗಳು ಅಲರ್ಟ್ ಆಗಿ ಬೆಂಕಿ ಆರಿಸಿದ್ದಾರೆ. ಈ ಮೂಲಕ ಮತ್ತಷ್ಟು ರೊಚ್ಚಿಗೆದ್ದಿರುವ ಇಸ್ರೇಲ್, ಹಿಜ್ಬುಲ್ಲಾ ವಿರುದ್ಧ ಮತ್ತೊಂದು ದಾಳಿಗೆ ಸಜ್ಜಾಗಿದೆಯಾ? ಎಂಬ ಅನುಮಾನ ಮೂಡಿದೆ.












Click it and Unblock the Notifications