Israel: ಯುದ್ಧ.. ಯುದ್ಧ.. ಯುದ್ಧ... ಇಸ್ರೇಲ್ ದಾಳಿಗೆ 93 ಜನ ಬಲಿ?
ಇಸ್ರೇಲ್ ರೊಚ್ಚಿಗೆದ್ದು ಗಾಜಾ ವಿರುದ್ಧ ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ಜೋರು ಮಾಡಿದೆ. ಗಾಜಾ ಪಟ್ಟಿ ಭಾಗದ ಸೂಕ್ಷ್ಮ ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಈಗ ಇಸ್ರೇಲ್ ಮಿಲಿಟರಿ ದಾಳಿ ನಡೆಸುತ್ತಿದ್ದು, ಪರಿಸ್ಥಿತಿ ಕೂಡ ಸೂಕ್ಷ್ಮವಾಗುತ್ತಿದೆ. ಇದೇ ರೀತಿಯಾಗಿ ಗಾಜಾ ಪಟ್ಟಿ ಉತ್ತರ ಭಾಗದ ನಿರಾಶ್ರಿತರ ಶಿಬಿರದ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿರುವ ಇಸ್ರೇಲ್ ಸೇನೆ ಇದೀಗ ಹತ್ಯೆ ಮಾಡಿದ್ದು ಎಷ್ಟು ಜನರನ್ನು ಗೊತ್ತಾ? ಮುಂದೆ ಓದಿ.
ಹಮಾಸ್ ಮತ್ತು ಇಸ್ರೇಲ್ ನಡುವಿನ ರಣ ಕಾಳಗದಲ್ಲಿ ಈಗಾಗಲೇ ಸಾವಿರಾರು ಜನ ಬಲಿಯಾಗಿದ್ದಾರೆ ಇದೇ ಸಮಯದಲ್ಲಿ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ, ಇಸ್ರೇಲ್ ಮೂಲದ ಸೈನಿಕರು ಪ್ರಬಲ ದಾಳಿ ನಡೆಸುತ್ತಿದ್ದಾರೆ. ಆದರೆ ಹೀಗೆ ಕಾರ್ಯಾಚರಣೆ ನಡೆಸುವಾಗ ನಿರಾಶ್ರಿತರ ಶಿಬಿರಗಳನ್ನು ಕೂಡ ಟಾರ್ಗೆಟ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಗಾಜಾ ಪಟ್ಟಿ ಉತ್ತರ ಭಾಗದ ನಿರಾಶ್ರಿತರ ಶಿಬಿರದ ಮೇಲಿನ ದಾಳಿಯಲ್ಲಿ ಒಟ್ಟು 93 ಜನ ಬಲಿಯಾಗಿದ್ದಾರೆ ಎನ್ನುವ ಭಾರಿ ಗಂಭೀರ ಆರೋಪ ಮಾಡಲಾಗಿದೆ.

ಮಕ್ಕಳು & ಮಹಿಳೆಯರೇ ಹೆಚ್ಚು?
ಒಂದ್ಕಡೆ ಇಸ್ರೇಲ್ & ಹಮಾಸ್ ಯುದ್ಧ ಭೀಕರವಾಗುತ್ತಿರುವ ನಡುವೆ ಮತ್ತೊಂದು ಮಹಾ ಯುದ್ಧದ ಭೀತಿಯು ಆವರಿಸಿದೆ. ಇಸ್ರೇಲ್ ದಾಳಿಗೆ ಈಗಾಗಲೇ ಸಂಪೂರ್ಣ ನಲುಗಿ ಹೋಗಿರುವ ಗಾಜಾ ಪಟ್ಟಿ ಭಾಗದಲ್ಲಿ ಮತ್ತಷ್ಟು ತಿಕ್ಕಾಟದ ಭಯವೂ ಕಾಡುತ್ತಿದೆ. ಅದರಲ್ಲೂ ಇದೀಗ ಇಸ್ರೇಲ್ ಮಿಲಿಟರಿಯ ದಾಳಿಯಲ್ಲಿ ಮೃತಪಟ್ಟಿರುವ 93 ಜನರ ಪೈಕಿ ಮಹಿಳೆಯರು, ಮಕ್ಕಳೇ ಅರ್ಧಕ್ಕಿಂತಲೂ ಹೆಚ್ಚಿದ್ದಾರೆ ಎಂದು ಗಾಜಾ ಪಟ್ಟಿ ಆರೋಗ್ಯ ಇಲಾಖೆ ಆರೋಪ ಮಾಡಿದೆ ಎಂದು ವರದಿಯಾಗಿದೆ. ಮತ್ತೊಂದು ಕಡೆ ಇಸ್ರೇಲ್ ವಿರುದ್ಧ ಇರಾನ್ ಕೂಡ ದಾಳಿ ನಡೆಸುವ ಭಯ ಆವರಿಸಿದೆ.
ಯುದ್ಧ ನಿಲ್ಲುವ ಗ್ಯಾರಂಟಿ ಇಲ್ಲ!
ಗಾಜಾ ಪಟ್ಟಿ ಉತ್ತರ ಭಾಗದಲ್ಲಿ ನಿರಾಶ್ರಿತರ ಕಟ್ಟಡದ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಒಟ್ಟು 93 ಜನ ಬಲಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ಕ್ಷಣಕ್ಷಣಕ್ಕೂ ಇದೀಗ ಭೀಕರವಾಗುತ್ತಿದೆ. ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಇನ್ನೂ ಎಷ್ಟು ಜನ ಈ ಯುದ್ಧಕ್ಕಾಗಿ ಜೀವನವನ್ನೇ ತ್ಯಾಗ ಮಾಡ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ನಿಲ್ಲಿಸಲು ಜಗತ್ತಿನ ಹಲವು ದೇಶಗಳು ಯತ್ನಿಸುತ್ತಿವೆ. ಆದ್ರೆ ಇದ್ಯಾವುದೂ ಫಲ ನೀಡುತ್ತಿಲ್ಲ, ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.












Click it and Unblock the Notifications