Israel: ಭಾರತೀಯರ ಮೇಲೆಯೇ ದಾಳಿ ಮಾಡಿತಾ ಇಸ್ರೇಲ್ ಮಿಲಿಟರಿ?

ಇಸ್ರೇಲ್ & ಇರಾನ್ ನಡುವೆ ಯುದ್ಧ ಶುರುವಾಗಿ, ಲೆಬನಾನ್ & ಇಸ್ರೇಲ್ ಜೊತೆಗೂ ಕಿರಿಕ್ ನಡೆಯುತ್ತಿದೆ, ಹಾಗೇ ಕಳೆದ 1 ವರ್ಷದಿಂದ ಕೂಡ ಗಾಜಾ ಪಟ್ಟಿ & ಇಸ್ರೇಲ್ ನಡುವೆ ಬಾರಿ ಘೋರ ಕಾಳಗ ನಡೆಯುತ್ತಿದೆ. ಹೀಗೆ ಇಸ್ರೇಲ್ ಮಧ್ಯಪ್ರಾಚ್ಯ ಭಾಗದ ಬಹುತೇಕ ದೇಶಗಳನ್ನು ಎದುರು ಹಾಕಿಕೊಂಡು ಬಡಿದಾಡುವ ಸಮಯದಲ್ಲೇ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ ಮೇಲೆ ಕೂಡ ಇಸ್ರೇಲ್ ಮಿಲಿಟರಿ ಡೆಡ್ಲಿ ಅಟ್ಯಾಕ್ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಈ ಮೂಲಕ ಪರೋಕ್ಷವಾಗಿ ಭಾರತೀಯರ ಮೇಲೆಯೂ ದಾಳಿ ನಡೆಯಿತಾ?

ಇಸ್ರೇಲ್ & ಲೆಬನಾನ್ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ, ಅಲ್ಲದೆ ಈ ಜಗಳದಿಂದಾಗಿ ಇರಾನ್ ಕೂಡ ಇಸ್ರೇಲ್ ವಿರುದ್ಧ ಮಿಸೈಲ್ ದಾಳಿ ಮಾಡುವ ಪರಿಸ್ಥಿತಿ ಬಂತು. ಇದೆಲ್ಲವೂ ಒಂದು ಕಡೆ ಇರಲಿ, ಯುದ್ಧ ಬೇಗ ನಿಲ್ಲಲಿ. ಈ ಮೂಲಕ ಜಗತ್ತಿನಲ್ಲಿ ಶಾಂತಿ ನೆಲಸಬೇಕು ಎಂಬ ಆಗ್ರಹ ಜಗತ್ತಿನಾದ್ಯಂತ ಕೇಳಿಬರುತ್ತಿದೆ. ಹಾಗೇ ಯುದ್ಧ ನಿಲ್ಲಿಸಲು ಒತ್ತಡ ಕೂಡ ಈ ಸಮಯದಲ್ಲಿ ಹೆಚ್ಚಾಗುತ್ತಿದೆ. ಇದೆಲ್ಲಾ ಏನೇ ಇರಲಿ ನಾನು ಮಾತ್ರ ಯುದ್ಧ ನಿಲ್ಲಿಸುವುದಿಲ್ಲ ಎನ್ನುತ್ತಿರುವ ಇಸ್ರೇಲ್, ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿರುವ ಆರೋಪ ಇದೆ. ಹೀಗಿದ್ದಾಗ ಭಾರತದ ವಿಚಾರದಲ್ಲೂ ಇಸ್ರೇಲ್ ಒಂದು ದೊಡ್ಡ ಎಡವಟ್ಟು ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ.

Allegedly Israel Continues Attack On UN Peacekeeping Personnel

ಭಾರತದ ವಿಚಾರದಲ್ಲೂ ಇಸ್ರೇಲ್ ಎಡವಟ್ಟು?

ಇಸ್ರೇಲ್ ಈಗ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ಇಸ್ರೇಲ್ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದ್ದು, ಲೆಬನಾನ್ & ಗಾಜಾ ಪಟ್ಟಿ ಪ್ರದೇಶಗಳು ನರಳಿ ಹೋಗಿವೆ. ಇದೆಲ್ಲಾ ಏನೇ ಇರಲಿ, ಸ್ವತಃ ಅಮೆರಿಕ ಹೇಳುತ್ತಿರುವ ಮಾತು ಕೂಡ ಕೇಳುತ್ತಿಲ್ಲ ಇಸ್ರೇಲ್ ಸೇನೆ. ಹೀಗೆ ದೊಡ್ಡ ಮಟ್ಟಿಗೆ ಜಗಳ ಆಗುತ್ತಿರುವ ಸಮಯದಲ್ಲೇ ಲೆಬನಾನ್ & ಇಸ್ರೇಲ್ ಗಡಿಯಲ್ಲಿ ಇರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಮೇಲೆ ಕೂಡ ಇಸ್ರೇಲ್ ಸೇನೆ ನಿರಂತರ ದಾಳಿ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಇದೇ ವಿಚಾರ ಈಗ ಭಾರತವನ್ನೂ ಕೆರಳಿಸಿದೆ.

ಇಸ್ರೇಲ್ ಬಗ್ಗೆ ಭಾರತದ ಅಸಮಾಧಾನ?

ಹೌದು, ಜಗತ್ತಿನ ಯಾವುದೇ ಜಾಗದಲ್ಲಿ ಹಿಂಸೆ ಶುರುವಾದರೆ ಅಲ್ಲಿಗೆ ಶಾಂತಿಪಾಲನಾ ಪಡೆ ಕಳುಹಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ವಿಶ್ವಸಂಸ್ಥೆಯ ಉದ್ದೇಶ. ಈ ಕಾರಣಕ್ಕೆ ವಿಶ್ವಸಂಸ್ಥೆ ಬಳಿ ಶಾಂತಿಪಾಲನಾ ಪಡೆ ಇದ್ದು, ಜಗತ್ತಿನಲ್ಲಿ ಇದರ ಪಾತ್ರ ಬಹು ಮುಖ್ಯವೂ ಆಗಿದೆ. ಹೀಗೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲಿ ಭಾರತದ ಯೋಧರು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಇಂತಹ ಸಮಯದಲ್ಲೂ ಇಸ್ರೇಲ್ ಮಾತ್ರ ಲೆಬನಾನ್ ಗಡಿಯಲ್ಲಿ ಇರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಮೇಲೆ ದಾಳಿ ಮಾಡಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಹಿಗಾಗಿ ಭಾರತ ಕೂಡ ಇಸ್ರೇಲ್ ಸೇನೆಯ ಇಂತಹ ದಾಳಿ ಬಗ್ಗೆ ಅಸಮಾಧಾನ ಹೊರ ಹಾಕಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+