ಗಾಜಾ ನೆಲದಲ್ಲಿ ಮತ್ತೆ ಹರಿದ ನೆತ್ತರು, ಇಸ್ರೇಲ್ ನಡೆಸಿದ ದಾಳಿಯಲ್ಲಿ ಮತ್ತೆ 5 ಜನ...
ಗಾಜಾ ಪಟ್ಟಿಯಲ್ಲಿ ಹಿಂಸಾಚಾರಕ್ಕೆ ಯಾವುದೇ ರೀತಿಯಲ್ಲೂ ಬ್ರೇಕ್ ಬೀಳುತ್ತಿಲ್ಲ, ಬದಲಾಗಿ ಈ ಭಾಗದಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಇನ್ನಷ್ಟು ಹೆಚ್ಚಾಗುತ್ತಲೇ ಇದೆ. ಇಸ್ರೇಲ್ & ಗಾಜಾದ ನಡುವೆ ರಣಭೀಕರ ಕಾಳಗವೇ ನಡೆಯುತ್ತಿದ್ದು, ನೋಡ ನೋಡುತ್ತಲೇ ನರಕವಾಗಿ ಬದಲಾಗಿದೆ ಗಾಜಾ ಪಟ್ಟಿ. ಇಂದು ಕೂಡ ಅದೇ ರೀತಿಯಾಗಿ, ಇಸ್ರೇಲ್ ದಾಳಿಯಲ್ಲಿ ಮತ್ತೆ ನೆತ್ತರು ಹರಿದಿದೆ ಎಂಬ ಆರೋಪ ಮಾಡಲಾಗಿದೆ. ದಿಢೀರ್ ದಕ್ಷಿಣ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ 5 ಜನ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಅಂದಹಾಗೆ ಇಂದು ದಿಢೀರ್ ಇಸ್ರೇಲ್ ಸೇನೆಯು ದಕ್ಷಿಣ ಗಾಜಾ ಖಾನ್ ಯೂನಿಸ್‌ನ ಪೂರ್ವದಲ್ಲಿ ಇರುವ ಬನಿ ಸುಹೇಲಾ ಪ್ರದೇಶದ ಮೇಲೆ ದಾಳಿ ನಡೆಸಿದೆ. ಒಂದು ಮನೆ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯ ಪರಿಣಾಮ ಕನಿಷ್ಠ 5 ಜನ ಪ್ಯಾಲೆಸ್ಟಿನ್ ಪ್ರಜೆಗಳು ಮೃತಪಟ್ಟಿದ್ದಾರೆಂದು ಆರೋಪ ಮಾಡಲಾಗಿದೆ. ಜೊತೆಗೆ ಹಲವರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಈ ಮೂಲಕ ಗಾಜಾ ಪಟ್ಟಿಯು ಮತ್ತೆ ರಣರಣ ರಕ್ತದಲ್ಲಿ ಬೆಂದು ಹೋಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ಒಟ್ಟು 12 ಮಕ್ಕಳು & 8 ಮಹಿಳೆಯರು ಸೇರಿ 32 ಪ್ಯಾಲೆಸ್ಟೀನ್ ಪ್ರಜೆಗಳನ್ನ ಬಲಿಪಡೆದಿದೆ ಎಂದು ಆರೋಪಿಸಲಾಗಿದೆ.

60,000 ಜನರು ಈವರೆಗೂ ಯುದ್ಧಕ್ಕೆ ಬಲಿ?
ಸಾವಿನ ಸಂಖ್ಯೆ ಮಾತ್ರವಲ್ಲದೆ ಗಾಯಾಳುಗಳ ಸಂಖ್ಯೆ ಕೂಡ ಗಾಜಾ ಪಟ್ಟಿಯಲ್ಲಿ ಏರಿಕೆ ಕಾಣುತ್ತಿದೆ ಎಂಬುದು ಸ್ಥಳೀಯ ಆರೋಗ್ಯ ಅಧಿಕಾರಿಗಳ ಆರೋಪ. ಅದರಲ್ಲೂ ಅಕ್ಟೋಬರ್ 7, 2023 ರಂದು ಹಮಾಸ್ ವಿರುದ್ಧ ಶುರುವಾಗಿದ್ದ ಈ ಘೋರ ಯುದ್ಧವು ಈಗಾಗಲೇ 60,000 ಮೀರಿ ಜನರನ್ನು ಬಲಿ ಪಡೆದಿರುವ ಆರೋಪ ಇದೆ. ಇದರ ಜೊತೆಗೆ 1 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಹಾಗೇ ಇಸ್ರೇಲ್ ಕಡೆ ಕೂಡ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಈವರೆಗೂ ಇಸ್ರೇಲ್ 1,139 ಜನರನ್ನು ಕಳೆದುಕೊಂಡಿದೆ ಇಸ್ರೇಲ್.
ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಎಂಟ್ರಿ?
ಗಾಜಾ ಪಟ್ಟಿಯಲ್ಲಿ ಭೀಕರ ಪರಿಸ್ಥಿತಿ ಎದುರಾಗಿದ್ದು, ಅನ್ನ & ಆಹಾರಕ್ಕೆ ಕೂಡ ಅಲ್ಲಿನ ಜನರು ನರಳುತ್ತಿದ್ದಾರೆ. ಅಲ್ಲದೆ ಈ ರೀತಿ ಹಲವು ವರ್ಷಗಳಿಂದ ಅಲ್ಲಿನ ಜನರು ಒದ್ದಾಡುತ್ತಿದ್ದರೂ ಈ ಪರಿಸ್ಥಿತಿ ಮಾತ್ರ ಸರಿಯಾಗುತ್ತಿಲ್ಲ. ಇನ್ನೊಂದು ಕಡೆ ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸೋಕೆ ಇಷ್ಟು ದಿನ ನಡೆಸಿದ ಪ್ರಯತ್ನಗಳೆಲ್ಲಾ ಸಕ್ಸಸ್ ಆಗಿಲ್ಲ. ಆದರೆ ಈಗ ಅಮೆರಿಕ ಅಧ್ಯಕ್ಷರಾದ ಟ್ರಂಪ್ ಅವರು ಬೇರೆಯದ್ದೇ ದಾಳ ಉರುಳಿಸಿದ್ದಾರೆ...
ಇದೆಲ್ಲವನ್ನೂ ಗಮನಿಸಿಯೇ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಮತ್ತೊಂದು ಸುತ್ತಿನ ಸಂಧಾನ ಪ್ರಕ್ರಿಯೆ ನಡೆಯುವುದು ಗ್ಯಾರಂಟಿ ಆಗಿದ್ದು, ಇದು ಪಕ್ಕಾ ಸಕ್ಸಸ್ ಆಗುತ್ತೆ ಅಂತಾ ಅಮೆರಿಕ ಕೂಡ ನಂಬಿಕೆಯಲ್ಲೇ ಇದೆ. ವಿಶ್ವಸಂಸ್ಥೆ ಮೂಲಕ ಈ ಯುದ್ಧವನ್ನು ಕೊನೆಗಾಣಿಸಲು ಇದೀಗ ಟ್ರಂಪ್ ಪ್ಲಾನ್ ಮಾಡಿದ್ದಾರೆ, ಆದರೂ ಹಮಾಸ್ ಯಾವ ಕ್ಷಣದಲ್ಲಿ ಕಿರಿಕ್ ತೆಗೆಯುತ್ತೋ? ಅನ್ನೋ ಆತಂಕ ಕೂಡ ಇದ್ದೇ ಇದೆ. ಯಾಕಂದ್ರೆ ಹಮಾಸ್ ಕಿರಿಕ್ ಮಾಡಿದರೆ ಮತ್ತೆ ಯುದ್ಧ ಮುಂದುವರಿಯುವ ಅಪಾಯವಿದೆ.












Click it and Unblock the Notifications