ಇಸ್ರೇಲ್ ಮಿಲಿಟರಿ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಬಲಿ?

ಇಸ್ರೇಲ್ ಸೇನೆ & ಹಿಜ್ಬುಲ್ಲಾ ಸಂಘಟನೆ ನಡುವೆ ಕಾಡ್ಗಿಚ್ಚೇ ಹೊತ್ತಿಕೊಂಡಂತೆ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಕಿತ್ತಾಟ ಜೋರಾಗುತ್ತಿದೆ. ಅದರಲ್ಲೂ ಇಸ್ರೇಲ್ ಮಿಲಿಟರಿ ರೊಚ್ಚಿಗೆದ್ದು, ದಕ್ಷಿಣ ಲೆಬನಾನ್ ಪ್ರದೇಶದ ಮೇಲೆ ಮಾರಣಾಂತಿಕ ದಾಳಿ ಮಾಡುತ್ತಿದೆ. ಇಂತಹ ಸಂಕೀರ್ಣ ಸಮಯದಲ್ಲೇ ಸ್ಫೋಟಕ ಮಾಹಿತಿ ಒಂದು ಹೊರ ಬಿದ್ದಿದೆ. ಇಸ್ರೇಲ್ ಮಿಲಿಟರಿ ಈಗ ಭಾರಿ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇಸ್ರೇಲ್ ಮಿಲಿಟರಿ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಜೀವ ಬಿಟ್ಟಿರುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ಹಿಜ್ಬುಲ್ಲಾ ಸಂಘಟನೆ ವಿರುದ್ಧ ಇಸ್ರೇಲ್ ಯಾವ ರೀತಿ ದಾಳಿ ಮಾಡುತ್ತಿದೆ ಎಂದರೆ, ಈಗಿನ ಪರಿಸ್ಥಿತಿ ನೋಡಿದರೆ ಹಿಜ್ಬುಲ್ಲಾ ಸಂಘಟನೆಯ ದೊಡ್ಡ ದೊಡ್ಡ ನಾಯಕರು ಜೀವ ಬಿಡುವುದು ಗ್ಯಾರಂಟಿ ಎನ್ನಲಾಗಿದೆ. ಅದೇ ರೀತಿ ಇದೀಗ, ಒಬ್ಬರಾದ ನಂತರ ಒಬ್ಬರು ಮುಖಂಡರು & ನಾಯಕರು ಜೀವ ಬಿಡುತ್ತಿದ್ದಾರೆ. ಒಂದು ದಿನದ ಹಿಂದಷ್ಟೆ ಹಿಜ್ಬುಲ್ಲಾ ಸಂಘಟನೆ ಕಮಾಂಡರ್ ಜೀವ ಕಳೆದುಕೊಂಡ ನಂತರ ಇದೀಗ ಮತ್ತೊಂದು ಭೀಕರ ಆರೋಪ ಕೇಳಿಬಂದಿದೆ. ಅದು ಏನಂದ್ರೆ, ಇಸ್ರೇಲ್ ಮಿಲಿಟರಿ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಉಸಿರು ಚೆಲ್ಲಿರುವ ಸುದ್ದಿ ಮಿಂಚಿನಂತೆ ಸಂಚರಿಸಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧ ಶುರುವಾಯ್ತಾ?

Allegedly Hezbollah Leader Hassan Nasrallah Killed By Israel Military

3ನೇ ಮಹಾಯುದ್ಧಕ್ಕೆ ಇಲ್ಲಿಂದಲೇ ಆರಂಭ?

ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಲವು ದೇಶಗಳ ಮಧ್ಯೆ ಹಿಂಸೆ ಶುರುವಾಗಿದೆ. ಇಸ್ರೇಲ್ & ಲೆಬನಾನ್ ಮಾತ್ರವಲ್ಲ ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಈ ತಿಕ್ಕಾಟ ನೋಡುತ್ತಿದ್ದರೆ ಶೀಘ್ರದಲ್ಲೇ ಮತ್ತೊಂದು ಮಹಾಯುದ್ಧ, ಅಂದ್ರೆ 3ನೇ ಮಹಾಯುದ್ಧ ಗ್ಯಾರಂಟಿ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಇಬ್ಬರ ನಡುವೆ ಶುರುವಾಗಿರುವ ಯುದ್ಧ ಈಗಾಗಲೇ ಭಯ ಹುಟ್ಟು ಹಾಕಿದೆ.

ಎಲ್ಲೆಲ್ಲೂ ಕಾಣುತ್ತಿರುವ ಶವಗಳು...

ದಕ್ಷಿಣ ಲೆಬನಾನ್‌ನ ಶೆಬಾ ಪಟ್ಟಣ ಇದೀಗ ನರಕವಾಗಿದ್ದು, ಇಸ್ರೇಲ್ ಮಿಲಿಟರಿಯ ವಾಯು ದಾಳಿ ತೀವ್ರತೆಗೆ ಇದೀಗ ಒಂದೇ ಕುಟುಂಬದ 9 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 4 ಮಕ್ಕಳು ಕೂಡ ಸೇರಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇಸ್ರೇಲ್ ದಾಳಿಯ ಕುರಿತು ದಕ್ಷಿಣ ಲೆಬನಾನ್‌ನ ಶೆಬಾ ಪಟ್ಟಣದ ಮೇಯರ್ ಮಾಹಿತಿ ನೀಡಿದ್ದು, ದಾಳಿ ತೀವ್ರತೆ ಹೆಚ್ಚಾದ ಕಾರಣ ಜನರು ಕೂಡ ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲೇ ಭೂ ದಾಳಿ ಮೂಲಕ, ಶತ್ರುಗಳ ನೆಲವನ್ನು ತನ್ನ ವಶಕ್ಕೆ ಪಡೆಯಲು ಈಗ ಇಸ್ರೇಲ್ ಸೇನೆ ಸಿದ್ಧತೆ ನಡೆಸಿದೆ. ಮತ್ತೊಂದು ಕಡೆ ಕಣ್ಣು ಬಿಟ್ಟಷ್ಟು ದೂರಕ್ಕೆ ಬರೀ ಶವಗಳೇ ಕಾಣಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+