Israel: ಭಯಾನಕ ವಿಡಿಯೋ ರಿಲೀಸ್ ಮಾಡಿದ ಹಮಾಸ್ ಉಗ್ರರು!
ಇಸ್ರೇಲ್ ಮೇಲೆ ದಾಳಿ ನಡೆಸಿರುವ ಹಮಾಸ್ ಉಗ್ರರು ಭಾರಿ ಕಿರುಕುಳ ನೀಡುತ್ತಿದ್ದು, ಇದೇ ಕಾರಣಕ್ಕೆ ಇಸ್ರೇಲ್ ಕೂಡ ಯುದ್ಧ ಘೋಷಣೆ ಮಾಡಿದೆ. ಹಮಾಸ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಭೀಕರ ಅಟ್ಯಾಕ್ ಮಾಡ್ತಿದೆ. ಆದ್ರೆ ಈ ಸಮಯದಲ್ಲೇ ವಿಡಿಯೋ ರಿಲೀಸ್ ಮಾಡಿ ಶಾಕ್ ಕೊಟ್ಟಿದ್ದಾರೆ ಹಮಾಸ್ ಉಗ್ರರು. ಹಾಗಾದರೆ ಆ ವಿಡಿಯೋದಲ್ಲಿ ಇರುವುದು ಏನು?
ಶನಿವಾರ ಶುರುವಾದ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಅದರಲ್ಲೂ ಇಸ್ರೇಲ್ ಒಳಗೆ ನುಗ್ಗಿರುವ ಹಮಾಸ್ ಗ್ಯಾಂಗ್, ಈಗಾಗಲೇ ನೂರಾರು ಇಸ್ರೇಲ್ ನಾಗರಿಕರನ್ನ ಕೊಂದು ಹಾಕಿರುವ ಆರೋಪ ಕೂಡ ಕೇಳಿಬಂದಿದೆ. ಈ ಬೆಳವಣಿಗೆ ನಡುವೆ ಹಮಾಸ್ ಉಗ್ರರು ಅಪಹರಣ ಮಾಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಮುಂದೆ ಏನು ಮಾಡೋದು ಅನ್ನೋದೆ ಕಿಡ್ನಾಪ್ ಆಗಿರುವ ಕುಟುಂಬ ಸದಸ್ಯರಿಗೆ ತಿಳಿಯುತ್ತಿಲ್ಲ. ಈ ನಡುವೆ ಇಡೀ ಇಸ್ರೇಲ್‌ಗೆ ಮತ್ತೊಂದು ಆಘಾತ ಸಿಕ್ಕಿದೆ.

ಸೇನಾ ಅಧಿಕಾರಿಗಳೇ ಉಗ್ರರ ವಶದಲ್ಲಿ!
ಹಮಾಸ್ ಉಗ್ರರು ಇಸ್ರೇಲ್ ನೆಲಕ್ಕೆ ನುಗ್ಗಿ ಕೇವಲ ನಾಗರಿಕರನ್ನು ಕಿಡ್ನಾಪ್ ಮಾಡಿಲ್ಲ, ಈ ಮಧ್ಯೆ ಸೇನೆ ವಿರುದ್ಧವೂ ದಾಳಿ ಮಾಡಿ ಸೇನಾಧಿಕಾರಿಗಳನ್ನೇ ಅಪಹರಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಡಿಯೋ ಕೂಡ ರಿಲೀಸ್ ಮಾಡಿದ ಉಗ್ರರು, ಇಸ್ರೇಲ್ ಸರ್ಕಾರಕ್ಕೆ ಸವಾಲು ಕೂಡ ಹಾಕಿದ್ದಾರೆ. ಹಾಗೇ ಇಸ್ರೇಲ್‌ನಲ್ಲಿ ಬಂಧಿಯಾಗಿರುವ ಹಮಾಸ್ ಉಗ್ರರ ಬಿಡುಗಡೆಗೆ ಇವರ ಮೂಲಕ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಇದೆಲ್ಲವನ್ನ ನೋಡಿ ಮತ್ತಷ್ಟು ರೊಚ್ಚಿಗೆದ್ದಿರುವ ಇಸ್ರೇಲ್ ಸೇನೆ ತನ್ನ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿದೆ.
1,000 ಉಗ್ರಗಾಮಿಗಳು ಇಸ್ರೇಲ್ ನೆಲದಲ್ಲಿ?
ಹಾಗೇ ಇನ್ನೊಂದು ಕಡೆ ಸಿಗುತ್ತಿರುವ ಮಾಹಿತಿ ಪ್ರಕಾರ, ಸುಮಾರು 1,000 ಉಗ್ರಗಾಮಿಗಳು ಇಸ್ರೇಲ್ ನೆಲದಲ್ಲಿ ಹಿಂಸೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರನ್ನೆಲ್ಲಾ ಹುಡುಕಿ, ಹುಡುಕಿ ಸದೆಬಡಿಯುವ ಕೆಲಸ ಕೂಡ ಸಾಗಿದೆ. ಇಷ್ಟೆಲ್ಲದರ ಮಧ್ಯೆ ಇಸ್ರೇಲ್ ಪ್ರಜೆಗಳು & ಇಸ್ರೇಲ್ ಸೇನಾ ಅಧಿಕಾರಿಗಳನ್ನೇ ಅಪಹರಿಸಿ ಬೆದರಿಕೆ ಹಾಕ್ತಿದ್ದಾರೆ ಉಗ್ರರು. ಈಗಿರುವ ಮಾಹಿತಿಗಳು ಹೇಳುವಂತೆ ಇಸ್ರೇಲ್, ಗಾಜಾಪಟ್ಟಿ ಸೇರಿ 1000ಕ್ಕೂ ಹೆಚ್ಚು ಜನ ಹಿಂಸೆಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಹಮಾಸ್ ಉಗ್ರರ ಅಡಗುದಾಣಗಳ ಮೇಲೆ ಇಸ್ರೇಲ್ ಸೇನೆ ಮಿಸೈಲ್ ದಾಳಿಯನ್ನ ಇನ್ನಷ್ಟು ಪ್ರಖರಗೊಳಿಸಿದೆ.
BREAKING: Hamas releases footage of captured Israeli army officers#Israel #Gaza #Palestine #IStandWithPalestine #طوفان_الأقصى #حماس pic.twitter.com/ZiDvCDacA9
— Sanam Jamali🇵🇰 (@sana_J2) October 9, 2023
ಉಗ್ರರಿಗೆ ಬೆಂಬಲ ನೀಡಿರುವುದು ಯಾರು?
ಹಮಾಸ್ ಇಷ್ಟೊಂದು ಭೀಕರ ದಾಳಿ ನಡೆಸಲು ಶಸ್ತ್ರಾಸ್ತ್ರಗಳು ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಮತ್ತೊಂದು ಕಡೆ ಇರಾನ್ ವಿರುದ್ಧ ಆರೋಪ ಕೇಳಿಬರುತ್ತಿದೆ. ಅಲ್ಲದೆ ಹಮಾಸ್ ದಾಳಿ ನಡೆಸಿದ್ದ ದಿನ ಇರಾನ್ ಸೇನಾ ಕಮಾಂಡರ್ ಈ ದಾಳಿ ಸಮರ್ಥಿಸಿಕೊಂಡಿದ್ರು. ಹೀಗೆ ಇರಾನ್ ಕೈವಾಡ ಇದೆ ಎಂಬ ಆರೋಪದ ಮಧ್ಯೆ ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡಿದೆ. ಸಾವಿರಾರು ಕೋಟಿ ರೂಪಾಯಿ ಸಹಾಯ ಮಾಡಿರುವ ಅಮೆರಿಕ, ಇಸ್ರೇಲ್‌ಗೆ ಬೇಕಾದ ಶಸ್ತ್ರಾಸ್ತ್ರ ಪೂರೈಸಲು ಮುಂದಾಗಿದೆ.
An IDF Spokesperson @jconricus shares an important statement on ‘Swords of Iron’. LIVE from Tel Aviv: https://t.co/5lYJlleXK6
— Israel Defense Forces (@IDF) October 8, 2023












Click it and Unblock the Notifications