82 ಜನರು ವಾಯು ದಾಳಿಗೆ ಬಲಿ, ಗಾಜಾ ಪಟ್ಟಿಯಲ್ಲಿ ನಿಲ್ಲದ ರಕ್ತಪಾತ?

ಗಾಜಾ ಪಟ್ಟಿಯಲ್ಲಿ ಎಲ್ಲಾ ಸರಿ ಆಯ್ತು, ಬಿಡು ಇನ್ನೇನು ಎಲ್ಲಾ ತಣ್ಣಗಾಯ್ತು ಅನ್ನುಷ್ಟರಲ್ಲೇ ಮತ್ತೊಮ್ಮೆ ಗಾಜಾ ನಗರ ಧಗಧಗ ಹೊತ್ತಿ ಉರಿಯಲು ಶುರು ಮಾಡಿದೆ. ಇಸ್ರೇಲ್ & ಹಮಾಸ್ ನಡುವೆ ಶುರುವಾಗಿದ್ದ ಭೀಕರ ಕಾಳಗದ ಪರಿಣಾಮ ಈಗಾಗಲೇ ಸರ್ವನಾಶವಾಗಿ ಹೋಗಿರುವ ಗಾಜಾ ಪಟ್ಟಿಗೆ ಹೊಸ ಬೆಂಬಲವು ಬೇಕಿತ್ತು. ಆದರೆ ಅದೆಲ್ಲವನ್ನೂ ಮೀರಿ ಇದೀಗ ಗಾಜಾ ಪಟ್ಟಿಯಲ್ಲಿ ನರಕ ಸೃಷ್ಟಿಯಾಗಿದೆ. ಹೀಗಿದ್ದಾಗಲೇ ಕೆಲವು ಗಂಟೆಗಳ ಹಿಂದಷ್ಟೇ ಕದನ ವಿರಾಮ ಘೋಷಣೆಗೆ ಕೂಡ ಒಪ್ಪಿಗೆ ಸೂಚಿಸಲಾಗಿತ್ತು. ಇದೆಲ್ಲಾ ಈಗ ಠುಸ್ಸ್ ಪಟಾಕಿ ಆಗಿದೆ...

ಹೌದು, ಗಾಜಾದಲ್ಲಿ 60 ದಿನಗಳ ಕದನ ವಿರಾಮ ಜಾರಿಗೆ ಅಗತ್ಯ ಇರುವ ಷರತ್ತುಗಳಿಗೆ ಇದೀಗ ಇಸ್ರೇಲ್ ಒಪ್ಪಿಕೊಂಡಿದೆ ಅಂತಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು. ಹಾಗೇ, ಅಕಸ್ಮಾತ್ ಕದನ ವಿರಾಮ ಒಪ್ಪಂದ ತಿರಸ್ಕಾರ ಮಾಡಿದರೆ ಹಮಾಸ್ ವಿರುದ್ಧ ಇನ್ನಷ್ಟು ಘೋರ ಕ್ರಮ ಕೈಗೊಳ್ಳುವ ವಾರ್ನಿಂಗ್ ಕೊಟ್ಟಿದ್ದರು. ಕೆಲವೇ ಗಂಟೆಗಳ ಹಿಂದೆ ಈ ರೀತಿಯಾಗಿ ಇಸ್ರೇಲ್ & ಗಾಜಾ ಕದನ ವಿರಾಮದ ಬಗ್ಗೆ ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ ಈ ಒಪ್ಪಂದ ಏರ್ಪಟ್ಟ ಕೆಲವೇ ಗಂಟೆಗಳಲ್ಲಿ ಗಾಜಾ ಪಟ್ಟಿಯಲ್ಲಿ 82 ಜನರು ವಾಯುದಾಳಿಗೆ ಬಲಿ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Allegedly 82 Palestinians Killed in Gaza By Air Strike

82 ಜನರ ಭೀಕರ ಸಾವು?

ಅಂದಹಾಗೆ ಸುಮಾರು ಒಂದೂವರೆ ವರ್ಷದ ಹಿಂದೆ ಗಾಜಾ ಮತ್ತು ಇಸ್ರೇಲ್ ನಡುವೆ ಯುದ್ಧ ಶುರುವಾಗಿತ್ತು. ಹೀಗೆ 2023 ಅಕ್ಟೋಬರ್ 7 ಶನಿವಾರ ಶುರುವಾಗಿದ್ದ ಗಾಜಾ ಮತ್ತು ಇಸ್ರೇಲ್ ಯುದ್ಧಕ್ಕೆ 60 ದಿನಗಳ ಬ್ರೇಕ್ ಹಾಕಲು ಇದೀಗ ಇಸ್ರೇಲ್ ಒಪ್ಪಿಗೆ ಸೂಚಿಸಿದೆ ಅಂತಾ ಟ್ರಂಪ್ ಹೇಳಿದ್ದರು. ಆದರೆ ಈಗಲೂ ಗಾಜಾ ಮೇಲೆ ಇಸ್ರೇಲ್ ವಾಯುದಾಳಿ ಮಾಡುತ್ತಿದೆ ಅಂತಾ ಆರೋಪ ಮಾಡಲಾಗಿದೆ. ಹೀಗೆ ಗಾಜಾ ಪಟ್ಟಿಯಲ್ಲಿ ಭೀಕರವಾಗಿ ಹತ್ಯೆ ಮಾಡಿರುವ 82 ಜನರ ಪೈಕಿ 38 ಜನಸಾಮಾನ್ಯರು ಅನ್ನ & ಆಹಾರಕ್ಕೆ ಕಾಯುತ್ತಿದ್ದರು ಎನ್ನಲಾಗಿದೆ. ಈ ಘಟನೆ ಇದೀಗ ಜಾಗತಿಕ ಮಟ್ಟದಲ್ಲಿ ಕೂಡ ಭಾರಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ.

ಡೊನಾಲ್ಡ್ ಟ್ರಂಪ್‌ಗೆ ಹೊಸ ತಲೆನೋವು?

ಅಮೆರಿಕ ಈಗ ಇಸ್ರೇಲ್ ಕಾರಣಕ್ಕೆ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧದ ನಡುವೆ ಇರಾನ್ ಜೊತೆಗೂ ಘೋರ ಯುದ್ಧವನ್ನು ಶುರು ಮಾಡಿತ್ತು ಇಸ್ರೇಲ್‌ ಮಿಲಿಟರಿ. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿ, ಪರಮಾಣು ಸಾಮರ್ಥ್ಯ ಇರುವ ಇರಾನ್ ವಿರುದ್ಧ ಕೂಡ ದಾಳಿ ಮಾಡೋಕೆ ಮುಂದಾಗಿತ್ತು ಇಸ್ರೇಲ್. ಆದರೆ ಕೊನೆಗೆ ಅಮೆರಿಕದ ಮಧ್ಯಸ್ಥಿಕೆ ಹಿನ್ನೆಲೆ ಇರಾನ್ ವಿರುದ್ಧದ ಯುದ್ಧವನ್ನ ನಿಲ್ಲಿಸಿತ್ತು ಇಸ್ರೇಲ್. ಇದರ ಜೊತೆಗೆ ಗಾಜಾ ವಿರುದ್ಧದ ಯುದ್ಧಕ್ಕೆ ಕೂಡ ಬ್ರೇಕ್ ಹಾಕಲಾಗಿದೆ ಅಂತಾನೇ ನಂಬಲಾಗಿತ್ತು. ಆದರೆ ಈಗ ಮತ್ತೆ ತಿಕ್ಕಾಟ ಜೋರಾಗಿದ್ದು, ಅಮೆರಿಕದ ನಿದ್ದೆಗೆಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+