Ukraine: ರಷ್ಯಾ ಸೇನಾ ದಾಳಿಯಲ್ಲಿ 3 ಉಕ್ರೇನ್ ನಾಗರಿಕರ ಸಾವು ಆರೋಪ
ರಷ್ಯಾ ಸೇನೆಯಿಂದ ಉಕ್ರೇನ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಶುರುವಾಗಿದ್ದು, ಮತ್ತೆ ಮತ್ತೆ ನಾಗರಿಕರು ವಾಸ ಇರುವ ಜಾಗಗಳನ್ನೇ ಗುರಿಯಾಗಿಸಿ ರಷ್ಯಾ ದಾಳಿ ಮಾಡುತ್ತಿದೆ ಎನ್ನುವ ಆರೋಪವನ್ನ ಉಕ್ರೇನ್ ಮಾಡುತ್ತಿದೆ. ಕಳೆದ 4 ದಿನಗಳಿಂದ ತನ್ನ ದಾಳಿಯನ್ನು ಮತ್ತಷ್ಟು ಘೋರ ರೀತಿಯಲ್ಲಿ ಮುಂದುವರಿಸಿರುವ ರಷ್ಯಾ ಮಿಲಿಟರಿ, ಉಕ್ರೇನ್ ಸೇನೆಗೆ ಸುಧಾರಿಸಿಕೊಳ್ಳಲು ಕೂಡ ಸಮಯ ಕೊಡುತ್ತಿಲ್ಲ. ಆ ರೇಂಜ್‌ಗೆ ದಾಳಿ ನಡೆಯುತ್ತಿರುವ ಕಾರಣ ಭಯದ ವಾತಾವರಣ ಕೂಡ ಶುರುವಾಗಿದ್ದು, ಚಳಿಗಾಲದ ನಡುವೆ ಉಕ್ರೇನ್ ನಿವಾಸಿಗಳಿಗೆ ಮತ್ತಷ್ಟು ಸಮಸ್ಯೆ ಎದುರಾಗಿದೆ.
ಉಕ್ರೇನ್ ರಾಜಧಾನಿ ಕೀವ್ ಸುತ್ತಮುತ್ತಲ ಪ್ರದೇಶದ ಮೇಲೆ ರಷ್ಯಾ ಡ್ರೋನ್ & ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ರೀತಿ ರಷ್ಯಾ ನಡೆಸಿದ ದಿಢೀರ್ ದಾಳಿಯ ಪರಿಣಾಮವಾಗಿ, ಕನಿಷ್ಠ 3 ಜನ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ. ಹೀಗೆ, ರಷ್ಯಾ ಮತ್ತು ಉಕ್ರೇನ್ ತಿಕ್ಕಾಟ ಇನ್ನಷ್ಟು ಜೋರಾಗಿದೆ.

ಅಮೆರಿಕ ನೇತೃತ್ವದಲ್ಲಿ ಒಂದು ಕಡೆ, ಶಾಂತಿ ಮಾತುಕತೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಈ ರೀತಿಯ ಬೇಡದ ಜಗಳ ಕೂಡ ಹೆಚ್ಚು ಹೆಚ್ಚಾಗುತ್ತಿದೆ. ಮುಂದಿನ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಚರ್ಚೆಗಾಗಿ ಅಮೆರಿಕದ ನಿಯೋಗ ಮಾಸ್ಕೋ ಕಡೆಗೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದ್ದು, ಟ್ರಂಪ್ ಈ ಬಗ್ಗೆ ಮುಂಜಾಗ್ರತೆ ವಹಿಸಿದ್ದಾರೆ.
ಯುದ್ಧ ನಿಲ್ಲಿಸಲು ರಷ್ಯಾ ಒಪ್ಪಿಗೆ?
ಉಕ್ರೇನ್ ವಿರುದ್ಧ ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ರಷ್ಯಾಗೆ ಈಗ ಯುದ್ಧ ಸಾಕಾಗಿದೆ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ಈಗಾಗಲೇ ಅಮೆರಿಕ ಸೂಚಿಸಿರುವ ಶಾಂತಿ ಮಾತುಕತೆಗಾಗಿ ರಷ್ಯಾ ಸಿದ್ಧವಾಗಿದೆ. ಆದರೆ ಉಕ್ರೇನ್ ಮಾತ್ರ ತನ್ನ ಹಠ ಮುಂದುವರಿಸಿದ ಕಾರಣಕ್ಕೆ, ರಷ್ಯಾ ಸೇನೆ ಈಗ ನಿರಂತರವಾಗಿ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮತ್ತೊಂದು ಕಡೆ ಈ ದಾಳಿಗೆ ಪ್ರತಿಯಾಗಿ ಉಕ್ರೇನ್ ಕೂಡ ಅಟ್ಯಾಕ್ ಮಾಡಲು ಚಿಂತನೆ ನಡೆಸುತ್ತಿದೆ.
ಉಕ್ರೇನ್ ರಾಜಧಾನಿ ವಶಕ್ಕೆ ರಷ್ಯಾ ಸಿದ್ಧತೆ?
ಇಷ್ಟೆಲ್ಲದರ ನಡುವೆ ರಷ್ಯಾ ಸ್ಕೆಚ್ ನೇರವಾಗಿ ಉಕ್ರೇನ್ ರಾಜಧಾನಿ ಕೀವ್ ಆಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಹೇಗೆದಂರೆ ಚಳಿಗಾಲದ ಸಮಯದಲ್ಲಿ ಉಕ್ರೇನ್ ಸೇನೆಯ ಜಾಲವನ್ನು ಹಿಂದೆ ಹಾಕಿ ಕೀವ್ ಪ್ರದೇಶವನ್ನ ಮುತ್ತಿಗೆ ಹಾಕಲು ರಷ್ಯಾ ಸಿದ್ಧತೆ ನಡೆಸಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಉಕ್ರೇನ್ ಸೇನೆ ಕೂಡ ಈಗ ಒಂದಷ್ಟು ಹೆದರಿದೆ.












Click it and Unblock the Notifications