Israel: ಇಸ್ರೇಲ್ ಸೇನೆಯಿಂದ ಶಾಲೆ ಮೇಲೆ ಭೀಕರ ದಾಳಿ, 17 ಜನರು ಬಲಿ?
ಇಸ್ರೇಲ್
& ಹಮಾಸ್ ತಿಕ್ಕಾಟದಲ್ಲಿ ನೊಂದು, ಬೆಂದು ಹೋಗಿರುವ ಗಾಜಾ ಸ್ಥಿತಿ ಒಂದು ಚೂರು ಕೂಡ ಬದಲಾಗಿಲ್ಲ. ಯಾಕೆ ಅಂದ್ರೆ ಇಬ್ಬರ ನಡುವೆ ಬಡಿದಾಟ ಮತ್ತಷ್ಟು ಜೋರಾಗಿದೆ. ಈ ಇಬ್ಬರು ಹೀಗೆ ಕಿತ್ತಾಡುವ ಅಬ್ಬರದಲ್ಲಿ ಮಧ್ಯ ಸಿಲುಕಿ ನರಳುತ್ತಿರುವುದು ಸಾಮಾನ್ಯ ಜನ ಎಂಬ ಆರೋಪ ಇದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಪದೇ ಪದೇ ದಾಳಿಗಳು ನಡೆಯುತ್ತಿವೆ. ಅದರಲ್ಲೂ ಗಾಜಾ ಪಟ್ಟಿ ಭಾಗದಲ್ಲಿ ನಿರಾಶ್ರಿತರು ಇರುವ ಜಾಗಗಳನ್ನೇ ಟಾರ್ಗೆಟ್ ಮಾಡಿ, ಇಸ್ರೇಲ್‌ನ ಮಿಲಿಟರಿ ದಾಳಿ ಮಾಡುತ್ತಿದೆ ಎಂಬ ಆರೋಪಗಳ ನಡುವೆ ಮತ್ತೊಂದು ಘೋರ ಘಟನೆ ಸಂಭವಿಸಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಗಾಜಾ
ಪಟ್ಟಿ ಭಾಗದಲ್ಲಿ ಜನರು ತುತ್ತು ಅನ್ನಕ್ಕೂ ಪರದಾಡುವ ವಾತಾವರಣ ಇದ್ದು, ವಿದೇಶಗಳಿಂದ ಬರುತ್ತಿರುವ ಅಕ್ಕಿ ಮತ್ತು ಗೋಧಿ ಹಿಟ್ಟು ಸೇರಿದಂತೆ ಇತರೆ ವಸ್ತುಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಹೀಗಿದ್ದಾಗ ಪದೇ, ಪದೇ ಗಾಜಾ ಪಟ್ಟಿ ಭಾಗದ ಮೇಲೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸುತ್ತಿದೆ ಎಂಬ ಆರೋಪ ಇದ್ದು, ಈಗಾಗಲೇ ಇಸ್ರೇಲ್‌ನ ದಾಳಿಗೆ ಹತ್ತಾರು ಸಾವಿರ ಗಾಜಾ ಪ್ರಜೆಗಳು ಮೃತಪಟ್ಟಿರುವ ಆರೋಪ ಇದೆ. ಇಂತಹ ಸಮಯದಲ್ಲೇ ಮತ್ತೊಮ್ಮೆ ಇದೇ ಇಸ್ರೇಲ್ ಸೇನೆ ಶಾಲೆಯ ಮೇಲೆ ವಾಯುದಾಳಿ ನಡೆಸಿ ಸುಮಾರು 17 ಜನರ ಜೀವ ತೆಗೆದಿರುವ ಆರೋಪ ಕೇಳಿ ಬಂದಿದೆ. id='are-slot-2' class='oiad oi-axt oiadv'>












Click it and Unblock the Notifications