Ukraine War: ರಷ್ಯಾ ದಾಳಿಯಲ್ಲಿ 13 ಉಕ್ರೇನ್ ಪ್ರಜೆಗಳು ಬಲಿ ಆರೋಪ
ಯುರೋಪ್ ನೆಮ್ಮದಿ ಕೆಡಿಸಿರುವ ರಷ್ಯಾ & ಉಕ್ರೇನ್ ವಾರ್ ಯಾವಾಗ ನಿಲ್ಲುತ್ತೆ? ಅಂತಾನೇ ಇದೀಗ ಕೋಟ್ಯಂತರ ಜನ ಕಾಯುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲೂ ರಷ್ಯಾ & ಉಕ್ರೇನ್ ಮಧ್ಯೆ ಪರಸ್ಪರ ದಾಳಿ ಮುಂದುವರಿದಿದ್ದು, ಭೀಕರ ದಾಳಿಯಲ್ಲಿ ಇದೀಗ ಘೋರ ದುರಂತ ಕೂಡ ಸಂಭವಿಸುತ್ತಿದೆ. ಅದರಲ್ಲೂ ರಷ್ಯಾ ದಾಳಿಯಲ್ಲಿ ಇದೀಗ 13 ಉಕ್ರೇನ್ ಪ್ರಜೆಗಳು ಬಲಿ ಆಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
ರಷ್ಯಾ ಸೇನೆ ಉಕ್ರೇನ್ ದೇಶದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಆಘಾತ ನೀಡುತ್ತಿದೆ. ಇದೇ ರೀತಿ ಕೆಲವೇ ಗಂಟೆಗಳಲ್ಲಿ ರಷ್ಯಾ ನಡೆಸಿರುವ ದಾಳಿಯಲ್ಲಿ ಈಗ ಉಕ್ರೇನ್ ಮೂಲದ ಸುಮಾರು 13 ಪ್ರಜೆಗಳು ಬಲಿಯಾಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈಗಾಗಲೇ ಯುದ್ಧ ನಿಲ್ಲಿಸಲು ರಷ್ಯಾ & ಉಕ್ರೇನ್ ಅಧಿಕಾರಿಗಳು ಹಾಗೂ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಹೀಗೆ ಒಂದು ಕಡೆ ಶಾಂತಿ ಮಾತುಕತೆ ನಡೆಯುವಾಗಲೇ ಇನ್ನೊಂದು ಕಡೆ ಯುದ್ಧದ ಹಿಂಸೆ ಕೂಡ ಮುಂದುವರಿದಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲೂ ಆಕ್ರೋಶ ಈಗ ಮೊಳಗಿದೆ.

ಉಕ್ರೇನ್ ಸ್ಥಿತಿ ಮತ್ತಷ್ಟು ಹೀನಾಯ...
ಕಳೆದ 3 ವರ್ಷಗಳಿಂದ ಉಕ್ರೇನ್ ನೆಲ ರಷ್ಯಾ ದಾಳಿಯ ಪರಿಣಾಮ ನಲುಗಿ ಹೋಗಿದೆ, ಈ ಮೂಲಕ ಅನ್ನ & ನೀರಿಗೂ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಇಷ್ಟಾದರೂ ಯುದ್ಧವನ್ನ ನಿಲ್ಲಿಸುವ ಪ್ರಯತ್ನ ಆಗಿರಲಿಲ್ಲ. ಆದರೆ ಈಗ ಒಂದಷ್ಟು ಗಂಭೀರ ಮಾತುಕತೆ ಆರಂಭವಾಗಿ ಚರ್ಚೆ ನಡೆಯುತ್ತಿದೆ, ಇಂತಹ ಸಮಯದಲ್ಲೂ ದಾಳಿ ಮುಂದುವರಿದು ಚಿಂತೆ ಹೆಚ್ಚಿಸುತ್ತಿದೆ. ಈಗಾಗಲೇ ಈ ಭೀಕರ ಯುದ್ಧದಲ್ಲಿ ಲಕ್ಷಾಂತರ ಜನ ಬಲಿಯಾಗಿರುವ ಆರೋಪ ಮಾಡಿರುವ ಜಾಗತಿಕ ಸಂಸ್ಥೆಗಳು ವಿನಾಶದ ಮುನ್ಸೂಚನೆ ನೀಡಿವೆ.
ಯಾವುದೇ ಕ್ಷಣದಲ್ಲಿ ಕದನ ವಿರಾಮ?
ಕಳೆದ 1 ತಿಂಗಳಿಂದ ನಿರಂತರವಾಗಿ ಹೀಗೆ ರಷ್ಯಾ ಮಿಲಿಟರಿ ತನ್ನ ದಾಳಿ ನಡೆಸುತ್ತಿದ್ದು, ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದು ನಲುಗಿ ಹೋಗಿದ್ದಾರೆ. ಅದೇ ರೀತಿ ಉಕ್ರೇನ್ ಶಕ್ತಿ ಘಟಕಗಳ ಮೇಲೆ ಕೂಡ ಭೀಕರ ದಾಳಿ ನಡೆಸಲಾಗಿದೆ. ಈ ಮೂಲಕ ಭಾರಿ ದೊಡ್ಡ ಎಡವಟ್ಟುಗಳೇ ನಡೆದು ಹೋಗಿದ್ದು, ಹಲವರ ಜೀವ ಬಲಿಯಾಗಿದ್ದರೆ ಹತ್ತಾರು ಜನರಿಗೆ ಸಾವು & ಬದುಕಿನ ಹೋರಾಟ ಶುರುವಾಗಿದೆ. ಇನ್ನೊಂದು ಕಡೆ ಅಮೆರಿಕದ ನೇತೃತ್ವದಲ್ಲಿ ಮಾತುಕತೆ ಕೂಡ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಆಗುವ ನಿರೀಕ್ಷೆ ಇದೆ.












Click it and Unblock the Notifications