Ukraine War: ಉಕ್ರೇನ್ ಬೆನ್ನುಬಿಡದ ರಷ್ಯಾ, ಭೀಕರ ದಾಳಿಯಲ್ಲಿ ಮತ್ತೊಂದು ಬಲಿ...
ರಷ್ಯಾ ಸೇನೆ ಉಕ್ರೇನ್ ದೇಶದ ವಿವಿಧ ಪ್ರದೇಶಗಳ ಮೇಲೆ ಈಗ ಹೈಪರ್‌ಸಾನಿಕ್ & ಕ್ರೂಸ್ ಕ್ಷಿಪಣಿ ಮೂಲಕ ಘೋರ ದಾಳಿ ನಡೆಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾ ನಡೆಸಿರುವ ದಾಳಿಗೆ 30ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಘಟನೆ ಬಳಿಕ ಉಕ್ರೇನ್ ನಿವಾಸಿಗಳಿಗೆ ಆತಂಕ ಶುರುವಾಗಿದ್ದು, ಭವಿಷ್ಯದ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಇದೇ ಸಮಯದಲ್ಲಿ ಇಂದು ಕೂಡ ರಷ್ಯಾ ಸೇನೆಯಿಂದ ಮತ್ತೊಂದು ಘೋರ ದಾಳಿ ನಡೆದೇ ಹೋಗಿದೆ ಎಂದು ಆರೋಪಿಸಿದೆ ಉಕ್ರೇನ್.
ಅಂದಹಾಗೆ ಇದೀಗ ರಷ್ಯಾ ಸೇನೆ ಉಕ್ರೇನ್‌ನ ಖೆರ್ಸಾನ್ ನಗರದ ಮೇಲೆ ಟ್ರೈಡ್ ಬಾಂಬ್‌ಗಳ ಮೂಲಕ ದಾಳಿ ಮಾಡಿದೆ ಎಂಬ ಆರೋಪ ಮಾಡಲಾಗಿದೆ. ಹೀಗೆ ರಷ್ಯಾ ನಡೆಸಿದ ದಾಳಿಯ ನಂತರ ಖೆರ್ಸಾನ್ ನಗರ ಅಲ್ಲಾಡಿ ಹೋಗಿದೆ. ರಷ್ಯಾ ಸೇನೆ ಡೆಡ್ಲಿ ಅಟ್ಯಾಕ್ ಮಾಡಿರುವುದಕ್ಕೆ ಇದೀಗ ಒಬ್ಬರು ಮಹಿಳೆ ಬಲಿಯಾಗಿದ್ದಾರೆ. ದಾಳಿಯ ಪರಿಣಾಮವಾಗಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಉಕ್ರೇನ್ ಕೇಂದ್ರ, ಪೂರ್ವ & ಪಶ್ಚಿಮ ಭಾಗದಲ್ಲಿ ಯುದ್ಧ ಮುಂಚೂಣಿ ನೆಲೆಗಳ ಸಮೀಪ ರಷ್ಯಾ ಬಿಗಿ ಹಿಡಿತ ಸಾಧಿಸಿದೆ. ಮತ್ತೊಂದು ಕಡೆ ಉಕ್ರೇನ್ ರಾಜಧಾನಿ ಮೇಲೂ ಕಣ್ಣಿಟ್ಟು ದಾಳಿ ನಡೆಸಲಾಗುತ್ತಿದೆ ಎಂಬ ಮಾಹಿತಿಯು ಹರಿದಾಡುತ್ತಿದೆ.

ಉಕ್ರೇನ್ ಜನರಿಗೆ ನಿತ್ಯ ನರಕ
ರಷ್ಯಾ ಮಿಲಿಟರಿ ದಿಢೀರ್ ಉಕ್ರೇನ್‌ನ ಖೆರ್ಸಾನ್ ನಗರದ ಮೇಲೆ ಟ್ರೈಡ್ ಬಾಂಬ್‌ಗಳನ್ನು ತಂದು ಸುರಿದ ಪರಿಣಾಮ, ಜನರು ಕೂಡ ಬೆಚ್ಚಿಬಿದ್ದಿದ್ದು ಚಲ್ಲಾಪಿಲ್ಲಿ ಆಗಿದ್ದಾರೆ. ಹಾಗೇ ಈ ಘಟನೆ ಹಿನ್ನೆಲೆ ಉಕ್ರೇನ್ ರಾಜಧಾನಿ ಕೀವ್ ಸುತ್ತಮುತ್ತ ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಿದ್ದು, ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗಿದೆ. ಉಕ್ರೇನ್ ಸೇನೆ ಈಗಾಗಲೇ ತನ್ನ ಬಹುತೇಕ ಪ್ರದೇಶಗಳನ್ನು ಕಳೆದುಕೊಂಡಿದೆ. ಬಾಕಿ ಉಳಿದಿರುವ ಕೆಲವೇ ಪ್ರದೇಶಗಳನ್ನು ಉಳಿಸಿಕೊಳ್ಳಲು ಡೆಡ್ಲಿ ದಾಳಿ ನಡೆಸುತ್ತಿದೆ ಉಕ್ರೇನ್. ಆದರೆ ಉಕ್ರೇನ್ ನಡೆಸುತ್ತಿರುವ ದಾಳಿ ರಷ್ಯಾಗೆ ಏನೂ ಮಾಡುತ್ತಿಲ್ಲ, ಆದರೆ ಬದಲಾಗಿ ರಷ್ಯಾ ಮಿಲಿಟರಿ ನಡೆಸುತ್ತಿರುವ ದಾಳಿಗೆ ನಲುಗಿ ಹೋಗಿದೆ ಉಕ್ರೇನ್ ನೆಲ.
ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣ?
ರಷ್ಯಾ ಸೇನೆ ಉಕ್ರೇನ್ ವಸತಿ ಪ್ರದೇಶ & ಶಾಪಿಂಗ್ ಮಾಲ್ ಸೇರಿ ಪ್ರಮುಖ ಸ್ಥಳಗಳನ್ನ ಗುರಿಯಾಗಿ ಮಾಡಿಕೊಂಡಿದ್ದು, ದಾಳಿ ಮಾಡ್ತಿದೆ. ಖೆರ್ಸಾನ್ ನಗರ ಕೂಡ ದೊಡ್ಡದಾಗಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ತವರು ಪಟ್ಟಣ ಅಂದ್ರೆ ಹುಟ್ಟಿದ ಸ್ಥಳ ಕೂಡ ಇಲ್ಲಿಗೆ ಹತ್ತಿರವಾಗಿದೆ. ಹೀಗಿದ್ದಾಗ ರಷ್ಯಾ ಪದೇ ಪದೇ ಡೆಡ್ಲಿ ದಾಳಿ ನಡೆಸುತ್ತಾ ಭಯದ ವಾತಾವರಣ ಉಂಟು ಮಾಡಿದೆ ಎಂಬ ಗಂಭೀರ ಆರೋಪ ಇದೆ. ಉಕ್ರೇನ್ ಸೇನೆಯು ಇದೀಗ ರಷ್ಯಾ ಸೇನೆ ನಡೆಸುತ್ತಿರುವ ದಾಳಿಯನ್ನ ಕೈಕಟ್ಟಿಕೊಂಡು ನೋಡುವ ಸ್ಥಿತಿ ಎದುರಾಗಿದೆ.












Click it and Unblock the Notifications