ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ಪಾಕಿಸ್ತಾನದಲ್ಲಿ ಇಳಿದ ಭಾರತದ ವಿಮಾನ, ಕಾರಣ ನಿಗೂಢ!

|
Google Oneindia Kannada News

ಇಸ್ಲಮಾಬಾದ್, ಆಗಸ್ಟ್ 16: 12 ಪ್ರಯಾಣಿಕರೊಂದಿಗೆ ಭಾರತದಿಂದ ಹೊರಟಿದ್ದ ಚಾರ್ಟರ್ ವಿಮಾನವೊಂದು ಸೋಮವಾರ ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ವರದಿಗಳ ಪ್ರಕಾರ, ವಿಮಾನವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ 12 ಪ್ರಯಾಣಿಕರಿದ್ದ ವಿಮಾನವೂ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಪಾಕಿಸ್ತಾನದ ಕರಾಚಿಯಲ್ಲಿ ಇಳಿದ ಸ್ವಲ್ಪ ಸಮಯದ ನಂತರ, ವಿಶೇಷ ವಿಮಾನವು ವಾಪಸ್ ಹೊರಟಿದೆ. ಆದರೆ, ಈ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಏಕೆ ಇಳಿದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

 Airplane from India Landed at Pakistan’s Karachi Airport

ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಈ ಘಟನೆಯನ್ನು ದೃಢಪಡಿಸಿದೆ. ಅಂತರರಾಷ್ಟ್ರೀಯ ಚಾರ್ಟರ್ ವಿಮಾನವು ಭಾರತದಿಂದ ಹೊರಟಿದೆ ಅಷ್ಟೆ. ಅದಕ್ಕೆ ದೇಶದೊಂದಿಗೆ ಬೇರೆ ಯಾವುದೇ ಸಂಬಂಧವು ಇಲ್ಲ ಎಂದಿದೆ.

ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ತಿಂಗಳು ಭಾರತದ ಎರಡು ವಿಮಾನಗಳು ಕರಾಚಿಗೆ ಬಂದಿಳಿದಿದ್ದವು.

ಪೈಲೆಟ್ ತಾಂತ್ರಿಕ ತೊಂದರೆ ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಶಾರ್ಜಾ- ಹೈದರಾಬಾದ್ ನಡುವಿನ ಇಂಡಿಗೋ ವಿಮಾನವನ್ನು ಮುಂಜಾಗ್ರತಾ ಕ್ರಮವಾಗಿ ಕರಾಚಿಯಲ್ಲಿ ಇಳಿಸಲಾಗಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಜುಲೈ 17 ರಂದು ಪ್ರಕಟಣೆ ಮೂಲಕ ಇಂಡಿಗೋ ಮಾಹಿತಿ ನೀಡಿತ್ತು.

ಭಾರತದ ಕಡಿಮೆ ಪ್ರಯಾಣದರದ ವಿಮಾನವಾದ ಇಂಡಿಗೋ ಕರಾಚಿಯಿಂದ ಹೈದರಾಬಾದ್‌ಗೆ ಆಗಮಿಸುತ್ತಿತ್ತು. ಸದ್ಯ ಕರಾಚಿಯಲ್ಲಿರುವ ಪ್ರಯಾಣಿಕರನ್ನು ಕರೆತರಲು ಮತ್ತೊಂದು ವಿಮಾನವನ್ನು ಕಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿತ್ತು.

ಈ ಹಿಂದೆ, ಸ್ಪೈಸ್‌ಜೆಟ್‌ನ ದೆಹಲಿ-ದುಬೈ ವಿಮಾನದಲ್ಲಿಯೂ ತಾಂತ್ರಿಕ ತೊಂದರೆ ಕಾರಣದಿಂದಾಗಿ ಜುಲೈ 5 ರಂದು ಕರಾಚಿ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

English summary
Charter airplane from India landed at Pakistan’s Jinnah International Airport in Karachi. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X