• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ರಿಪುದಮನ್ ಸಿಂಗ್ ಮಲಿಕ್ ಹತ್ಯೆ

|
Google Oneindia Kannada News

ಕೆನಡಾ,ಜು. 15: 1985 ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್‌ನನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಕೆನಡಾದ ಸುದ್ದಿವಾಹಿನಿಗಳು ವರದಿ ಮಾಡಿವೆ.

ಗುರುವಾರ ಸ್ಥಳೀಯ ಕಾಲಮಾನ ಬೆಳಗ್ಗೆ 9.30ರ ಸುಮಾರಿಗೆ ಮೂರು ಗುಂಡುಗಳನ್ನು ಹಾರಿಸಲಾಗಿದ್ದು ಅವು ಮಲಿಕ್‌ ಕುತ್ತಿಗೆಗೆ ಬಿದ್ದಿವೆ. ಗಾಯಗೊಂಡ ವ್ಯಕ್ತಿ ಮಲಿಕ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ವರದಿ ಮಾಡಿವೆ. ಇದು ಉದ್ದೇಶಿತ ಗುಂಡಿನ ದಾಳಿ ಎಂದು ತೋರುತ್ತದೆ ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಕೆನಡಾದ ಸರ್ರೆಯಲ್ಲಿ ಹತ್ಯೆಯಾದ ರಿಪುದಮನ್ ಸಿಂಗ್ ಮಲಿಕ್ 1985ರಲ್ಲಿ ಏರ್ ಇಂಡಿಯಾದ ಫ್ಲೈಟ್ 182 ಕನಿಷ್ಕಾ ಬಾಂಬ್ ಸ್ಫೋಟದಲ್ಲಿ 331 ಜನರನ್ನು ಕೊಂದ ಶಂಕಿತರಲ್ಲಿ ಒಬ್ಬರಾಗಿದ್ದರು. ಜೂನ್ 23, 1985 ರಂದು ಮಾಂಟ್ರಿಯಲ್‌ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ 747 ಕನಿಷ್ಕ, ಏರ್ ಇಂಡಿಯಾ ವಿಮಾನ 182ರ ಸ್ಫೋಟದ ಮೂವರು ಪ್ರಮುಖ ಆರೋಪಿಗಳಲ್ಲಿ ಮಲಿಕ್, ಇಂದರ್‌ಜೀತ್ ಸಿಂಗ್ ರಿಯಾತ್ ಮತ್ತು ಅಜೈಬ್ ಸಿಂಗ್ ಬಗ್ರಿ ಇದ್ದರು. ಘಟನೆಯಲ್ಲಿ ಎಲ್ಲಾ 329 ಮಂದಿ ಸಾವನ್ನಪ್ಪಿದರು.

ಮಲಿಕ್ ಮತ್ತು ಬಾಗ್ರಿ ವಿರುದ್ಧ 329 ಜನರ ಕೊಲೆಯ ಆರೋಪ ಹೊರಿಸಲಾಗಿತ್ತು. ಆದರೆ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಮಾಡಿದ ರಿಯಾತ್ ಅವರು ಘಟನೆಯ ವಿವರಗಳು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವವರ ಹೆಸರುಗಳನ್ನು ನೆನಪಿಲ್ಲ ಎಂದು ಹೇಳಿದ ನಂತರ ಅವರನ್ನು ಖುಲಾಸೆಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ, ಫೆಬ್ರವರಿಯಲ್ಲಿ ಪಂಜಾಬ್ ಚುನಾವಣೆಗೆ ಮುನ್ನ, ಸಿಖ್ಖರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳಿಗಾಗಿ ಮಲಿಕ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು 1984ರ ಗಲಭೆ ಪ್ರಕರಣಗಳನ್ನು ಪುನಃ ತೆರೆಯಬಾರದು ಸೇರಿದಂತೆ ಬಿಜೆಪಿಯ ವಿವಿಧ ಉಪಕ್ರಮಗಳನ್ನು ಪಟ್ಟಿ ಮಾಡಿದ ಅವರು, ಪ್ರಧಾನಿಯನ್ನು ದೂಷಿಸುವ ಸಂಯೋಜಿತ ಪ್ರಯತ್ನದ ವಿರುದ್ಧ ಎಚ್ಚರಿಕೆ ನೀಡಿದ್ದರು.

 ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸಂತಾಪ

ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸಂತಾಪ

ಬಹು ವೀಸಾ ಮಂಜೂರು ಮಾಡಿದ ನಂತರ ರಿಪುದಮನ್ ಅವರು ಇತ್ತೀಚೆಗೆ ಆಂಧ್ರ ಪ್ರದೇಶ, ದೆಹಲಿ, ಪಂಜಾಬ್ ಮತ್ತು ಮಹಾರಾಷ್ಟ್ರಕ್ಕೆ ತೀರ್ಥಯಾತ್ರೆ ಕೈಗೊಂಡಿದ್ದರು ಎಂದು ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಹೇಳಿದ್ದಾರೆ. ಶಿರೋಮಣಿ ಅಕಾಲಿದಳದ ದೆಹಲಿ ಅಧ್ಯಕ್ಷ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (ಡಿಎಸ್‌ಜಿಎಂಸಿ) ಮಾಜಿ ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಸರ್ನಾ ತಮ್ಮ ಹೇಳಿಕೆಯಲ್ಲಿ, ಕೆನಡಾದಲ್ಲಿ ಸರ್ದಾರ್ ರಿಪುದಮನ್ ಸಿಂಗ್ ಮಲಿಕ್ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ನಷ್ಟ ಭರಿಸಲಾಗದು ಎಂದು ಹೇಳಿದ್ದಾರೆ.

 ನನ್ನ ಪ್ರಾಮಾಣಿಕ ಸಂತಾಪ: ಸರ್ನಾ

ನನ್ನ ಪ್ರಾಮಾಣಿಕ ಸಂತಾಪ: ಸರ್ನಾ

ಸರ್ದಾರ್ ಮಲಿಕ್ ಹಲವಾರು ಖಾಲ್ಸಾ ಶಾಲೆಗಳನ್ನು ನಡೆಸುತ್ತಿದ್ದರು ಮತ್ತು ಕೆನಡಾದಲ್ಲಿ ಮಾನವೀಯ ಚಿಂತನೆಗಳ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ಕುಟುಂಬಕ್ಕೆ ನನ್ನ ಪ್ರಾಮಾಣಿಕ ಸಂತಾಪಗಳು. ಕೆನಡಾದ ಅಧಿಕಾರಿಗಳು ಅವರ ಹತ್ಯೆಯ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸುತ್ತಾರೆ ಮತ್ತು ಅಪರಾಧಿಗಳನ್ನು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಪರಮ್‌ಜಿತ್ ಸಿಂಗ್ ಸರ್ನಾ ತಿಳಿಸಿದ್ದಾರೆ.

 ಜಪಾನಿ ಪ್ರಜೆಗಳನ್ನು ಕೊಂದ ಪ್ರಕರಣ

ಜಪಾನಿ ಪ್ರಜೆಗಳನ್ನು ಕೊಂದ ಪ್ರಕರಣ

ಖಾಲ್ಸಾ ಕ್ರೆಡಿಟ್ ಯೂನಿಯನ್ ಅನ್ನು ಸ್ಥಾಪಿಸಿದ ಮಲಿಕ್ ಅವರನ್ನು ಕೆನಡಾದ ನ್ಯಾಯಾಲಯವು 2005ರಲ್ಲಿ ಏರ್ ಇಂಡಿಯಾ ಪ್ರಕರಣದಲ್ಲಿ ದೋಷಮುಕ್ತಗೊಳಿಸಿತು. ಟೋಕಿಯೊದ ನರಿಟಾ ವಿಮಾನ ನಿಲ್ದಾಣದಲ್ಲಿ ಇಬ್ಬರು ಜಪಾನಿ ಪ್ರಜೆಗಳನ್ನು ಕೊಂದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದ ಎರಡು ನರಹತ್ಯೆಗಾಗಿ ರಿಯಾತ್ ಎಂಬುವವರು ಈ ಹಿಂದೆ ಅಪರಾಧಿ ಎಂದು ಘೋಷಿಸಲ್ಪಟ್ಟು 10 ವರ್ಷಗಳ ಶಿಕ್ಷೆಯನ್ನು ನೀಡಿದ್ದರು. ಕಾನಿಷ್ಕ ಸ್ಫೋಟಕ್ಕಾಗಿ ನರಹತ್ಯೆಗಾಗಿ ಅವರು ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದರು.

ತನಿಖಾಧಿಕಾರಿಗಳ ಪ್ರಕಾರ ಆ ಸಮಯದಲ್ಲಿ, ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಕಂಡು ಬಂದು ವ್ಯಾಂಕೋವರ್‌ನಲ್ಲಿ ನಿಲುಗಡೆ ಸಮಯದಲ್ಲಿ ಸೂಟ್‌ಕೇಸ್‌ನಲ್ಲಿ ಸರಕುಗಳನ್ನು ಪರಿಶೀಲಿಸಲಾಯಿತು. 31,000 ಅಡಿ ಎತ್ತರದಲ್ಲಿ ಐರಿಶ್ ವಾಯುಪ್ರದೇಶದಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಇದು ಸ್ಫೋಟಿಸಿತ್ತು.

 ಇಬ್ಬರು ಬ್ಯಾಗೇಜ್ ಹ್ಯಾಂಡ್ಲರ್‌ಗಳ ಸಾವು

ಇಬ್ಬರು ಬ್ಯಾಗೇಜ್ ಹ್ಯಾಂಡ್ಲರ್‌ಗಳ ಸಾವು

ಅದೇ ದಿನ ನರಿತಾ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡು ಇಬ್ಬರು ಬ್ಯಾಗೇಜ್ ಹ್ಯಾಂಡ್ಲರ್‌ಗಳು ಸಾವನ್ನಪ್ಪಿದರು. ವ್ಯಾಂಕೋವರ್‌ನಲ್ಲಿ ಕೆನಡಿಯನ್ ಪೆಸಿಫಿಕ್ ಏರ್‌ಲೈನ್ಸ್ ಫ್ಲೈಟ್‌ನಲ್ಲಿ ತಪಾಸಣೆ ಮಾಡಲಾದ ಬ್ಯಾಗ್‌ನಲ್ಲಿ ಬಾಂಬ್ ಇರಿಸಲಾಗಿತ್ತು. ನಂತರ ಅದನ್ನು ಬ್ಯಾಂಕಾಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 301 ಇರಿಸಲಾಗಿತ್ತು. ಕೆನಡಾದ ಮತ್ತು ಭಾರತೀಯ ಏಜೆನ್ಸಿಗಳು ಎರಡು ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ 1984ರ ಆಪರೇಷನ್ ಬ್ಲೂ ಸ್ಟಾರ್ ನಂತರ ಕೆನಡಾ ಮೂಲದ ಸಿಖ್ ಪ್ರತ್ಯೇಕತಾವಾದಿಗಳಿಂದ ಇದು ಯೋಜಿಸಿ ಕಾರ್ಯಗತಗೊಳಿಸಲಾಗಿದೆ ಎಂದು ತೀರ್ಮಾನಿಸಲಾಗಿತ್ತು.

Recommended Video

   Jaggesh ಮೋದಿಯವರನ್ನೇ ಲಾಂಛನದ ಸಿಂಹಕ್ಕೆ ಹೋಲಿಸಿದ್ದಾರೆ | *Politics | OneIndia Kannada
   English summary
   Ripudaman Singh Malik, who was acquitted in the 1985 Air India bombing case, was shot dead in Surrey, British Columbia, Canada, Canadian news outlets reported.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X