ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್ ಭಯೋತ್ಪಾದನಾ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸಾವು

ಫ್ರಾನ್ಸ್ ನಲ್ಲಿ ಗುರುವಾರ ಐಎಸ್ ಐಎಸ್ ಭಯೋತ್ಪಾದನಾ ದಾಳಿ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟು, ಮತ್ತೊಬ್ಬರಿಗೆ ಗಾಯವಾಗಿದೆ. ಕೆಲವೇ ದಿನಕ್ಕೆ ರಾಷ್ಟ್ರಾಧ್ಯಕ್ಷರ ಚುನಾವಣೆ ನಡೆಯಬೇಕಿದ್ದು, ಆತಂಕ ಸೃಷ್ಟಿಯಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಪ್ಯಾರಿಸ್, ಏಪ್ರಿಲ್ 21: ಪ್ಯಾರಿಸ್ ನ ಚಾಂಪ್ಸ್ ಎಲಿಸೀಸ್ ನಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟು, ಮತ್ತೊಬ್ಬರಿಗೆ ಗಾಯವಾಗಿದೆ. ಫ್ರಾನ್ಸ್ ನಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗೆ ಕೆಲ ದಿನಗಳು ಬಾಕಿಯಿದ್ದು, ಈ ದಾಳಿಯಿಂದ ಆತಂಕಕ್ಕೆ ಕಾರಣವಾಗಿದೆ. ಫ್ರಾನ್ಸ್ ನ ಆಂತರಿಕ ಸಚಿವಾಲಯ ನೀಡಿದ ಹೇಳಿಕೆ ಪ್ರಕಾರ, ದಾಳಿಕೋರನನ್ನು ಕೊಲ್ಲಲಾಗಿದೆ.

ನಗರದ ಹೃದಯಭಾಗದಲ್ಲಿ ಶಾಪಿಂಗ್ ಗೆ ಬಹಳ ಹೆಸರುವಾಸಿಯಾದ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿ ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಜತೆಗೆ ಪ್ಯಾರಿಸ್ ನ ಸ್ಥಳೀಯರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇದೀಗ ಶಸ್ತ್ರಸಜ್ಜಿತ ಪೊಲೀಸರು ಇಲ್ಲಿ ಜಮೆಯಾಗಿದ್ದಾರೆ. ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ. ತುರ್ತು ಸೇವೆಗಾಗಿ ಹಲವು ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.[ಫ್ರಾನ್ಸ್ : ಶಾಲೆಯಲ್ಲಿ ಗುಂಡಿನ ದಾಳಿ, ಲೆಟರ್ ಬಾಂಬ್ ಸ್ಫೋಟ]

Ahead of French Presidential polls, one killed in shooting at Paris

2015ರಿಂದ ಫ್ರಾನ್ಸ್ ನಲ್ಲಿ ನಿರಂತರವಾಗಿ ಭಯೋತ್ಪಾದಕರ ದಾಳಿಗಳಾಗುತ್ತಿವೆ. ಆದ್ದರಿಂದ ಇಲ್ಲಿ ತುರ್ತು ಪರಿಸ್ಥಿತಿಯ ಸನ್ನಿವೇಶವಿದೆ. ಗುರುವಾರ ನಡೆದ ದಾಳಿಯೂ ಸೇರಿದಂತೆ 2015ರ ನಂತರ ಭಯೋತ್ಪಾದಕರ ದಾಳಿಯಲ್ಲಿ 230ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಗುರುವಾರ ನಡೆದ ಗುಂಡಿನ ದಾಳಿಯಿಂದ ಫ್ರಾನ್ಸ್ ನಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಐಎಸ್ ಐಎಸ್ ದಾಳಿಯ ಹೊಣೆ ಹೊತ್ತಿಕೊಂಡಿದೆ.

English summary
A police officer was killed and one person was wounded in a shooting that took place at Paris's Champs Elysees on Thursday. The incident took place just days ahead of the presidential elections in France. France's interior ministry said the attacker was killed in the incident in the early evening on the world-famous boulevard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X