ತೈವಾನ್‌ಗೆ ₹4000 ಕೋಟಿ ಗಿಫ್ಟ್ ಕೊಟ್ಟ ‘ದೊಡ್ಡಣ್ಣ’?

ತೈಪೆ: ರಷ್ಯಾ ವಿರುದ್ಧ ಯುದ್ಧಕ್ಕೆ ಉಕ್ರೇನ್‌ಗೆ ಉಡುಗೊರೆ ಕೊಟ್ಟ ಅಮೆರಿಕ 3 ಲಕ್ಷ ಕೋಟಿ ನೆರವು ನೀಡಿತ್ತು. ಈಗ ಚೀನಾ ವಿರುದ್ಧ ಹೋರಾಡಲು ತೈವಾನ್‌ಗೆ ₹4000 ಕೋಟಿಯ ಗಿಫ್ಟ್ ಘೋಷಿಸಲು ಅಮೆರಿಕ ಚಿಂತನೆ ನಡೆಸುತ್ತಿದೆ. ಅಮೆರಿಕದ ನಡೆ ಮತ್ತೊಮ್ಮೆ ರಷ್ಯಾ-ಚೀನಾ ಸಿಟ್ಟಿಗೆ ಕಾರಣವಾಗುವ ಮುನ್ಸೂಚನೆ ನೀಡಿದ್ದು, ₹4000 ಕೋಟಿಯ ಗಿಫ್ಟ್ ಕಹಾನಿ ಇಲ್ಲಿದೆ.

ತೈವಾನ್‌ಗೆ ಇದೀಗ ಅಮೆರಿಕ ಘೋಷಿಸಲು ಸಿದ್ಧತೆ ನಡೆಸಿರುವ ₹4000 ಕೋಟಿ ನೆರವು ನಗದು ರೂಪದಲ್ಲಿ ಇರಲ್ಲ. ಬದಲಾಗಿ 4000 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ನೀಡಲಿದೆ. ಫೈಟರ್ ಜೆಟ್‌, ಆಧುನಿಕ ಮಿಸೈಲ್ಸ್ ಸೇರಿದಂತೆ ಹಲವು ಬಗೆಯ ವೆಪನ್ಸ್‌ಗಳನ್ನ ಪೂರೈಕೆ ಮಾಡಲು ಅಮೆರಿಕದ ಜೊತೆ ತೈವಾನ್ ಚರ್ಚೆ ನಡೆಸುತ್ತಿದೆ. ಈ ಮೂಲಕ ಮೊದಲೇ ಹೊತ್ತಿ ಉರಿಯುತ್ತಿದ್ದ ಪರಿಸ್ಥಿತಿಗೆ ಪೆಟ್ರೋಲ್ ಸುರಿದಂತಾಗಿದೆ. ಖಡಕ್ ಎಚ್ಚರಿಕೆಯನ್ನ ನೀಡುತ್ತಿರುವ ಚೀನಾ ಕೋಪ ಈಗ ಮತ್ತಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ.

After Ukraine now America in talks to give big budget military aid to Taiwan

ಫೈಟರ್ ಜೆಟ್ ಜೊತೆ ಬಿಗ್ ಗಿಫ್ಟ್?

ಅಮೆರಿಕ & ತೈವಾನ್ ನಡುವೆ ಸಾಕಷ್ಟು ಒಪ್ಪಂದಗಳು ನಡೆದಿವೆ. ಈ ಪೈಕಿ F-16V ಫೈಟರ್ ಜೆಟ್ ಅಥವಾ ಯುದ್ಧ ವಿಮಾನಗಳ ಪೂರೈಕೆ ಪ್ರಮುಖವಾದದ್ದು. ಯಾಕಂದ್ರೆ F-16V ಯುದ್ಧ ವಿಮಾನಗಳು ಶತ್ರುಗಳ ಎದೆ ನಡುಗಿಸಬಲ್ಲವು. ಹೀಗಾಗಿ 66 F-16V ಯುದ್ಧ ವಿಮಾನಗಳನ್ನ ತೈವಾನ್ ಆರ್ಡರ್ ಮಾಡಿದೆ. ಕೆಲ ದಿನದಲ್ಲಿ F-16V ಯುದ್ಧ ವಿಮಾನಗಳು ಅಮೆರಿಕದಿಂದ ತೈವಾನ್ ತೆಕ್ಕೆಗೆ ಸೇರಲಿವೆ. ಇದೇ ಸಂದರ್ಭದಲ್ಲಿ ಅಮೆರಿಕ 4 ಸಾವಿರ ಕೋಟಿ ರೂಪಾಯಿಯ ದೊಡ್ಡ ಉಡುಗೊರೆ ನೀಡಿರುವ ನಿರೀಕ್ಷೆ ಇದೆ.

ತೈವಾನ್ ಗಡಿಯಲ್ಲಿ ಚೀನಾ ಭಯಂಕರ

ಚೀನಾ ತೈವಾನ್ ಗಡಿಗೆ ನುಗ್ಗಿಸುತ್ತಿರುವ ಪ್ರತಿ ಡ್ರೋನ್ ವಿನಾಶಕಾರಿಯಾಗಿದೆ. ಈ ಹಿಂದೆ ಎಸ್‌ಯು-30, ಎರಡು ಜೆ-16 ಮತ್ತು ಟಿಬಿ-001 ರವಾನಿಸಿತ್ತು. Z-9 ಹೆಲಿಕಾಪ್ಟರ್‌ ಹಾರಾಡಿಸಿ ಭಯಹುಟ್ಟಿಸಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ BZK-005 ಡ್ರೋನ್‌ಗಳ ಪರಿಚಯ ಮಾಡಿಸಿತ್ತು. ಹೀಗೆ ತೈವಾನ್‌ಗೆ ಶಾಕ್ ಮೇಲೆ ಶಾಕ್ ಕೊಡ್ತಾ ಇರುವ ಚೀನಾಗೆ ಇದೀಗ ಅಮೆರಿಕ ನೇರ ಆಘಾತ ನೀಡಿದೆ. ಸುಮಾರು 4 ಸಾವಿರ ಕೋಟಿ ರೂಪಾಯಿ ವೆಚ್ಚದ ಬೃಹತ್ ಪ್ಯಾಕೇಜ್ ಘೋಷಿಸಲು ಅಮೆರಿಕ & ತೈವಾನ್ ಮಾತುಕತೆ ನಡೆಸುತ್ತಿರುವುದು ಸಂಚಲನ ಸೃಷ್ಟಿಸಿದೆ.

ಚೀನಾ-ತೈವಾನ್ ಯುದ್ಧ ಭೀತಿ

ಚೀನಾ ತನ್ನ ಸುತ್ತಮುತ್ತಲ ದೇಶಗಳು ಅಮೆರಿಕ ಸಹವಾಸ ಮಾಡಿದರೆ ಸಹಿಸಲ್ಲ. ಅದ್ರಲ್ಲೂ ತೈವಾನ್ ನಮ್ಮದೇ ಜಾಗ ಎಂದು ಹೇಳಿಕೊಂಡು ಬರುತ್ತಿರುವ ಚೀನಾ, ಅಮೆರಿಕ ಜೊತೆ ತೈವಾನ್ ಸ್ನೇಹ ಬೆಳೆಸಿದರೆ ಉರಿದು ಬೀಳುತ್ತೆ. ಆದರೆ ಈ ಬಾರಿ ಕಿತ್ತಾಟ, ಘರ್ಷಣೆ ಜೋರಾಗಿದೆ. ಪರಿಣಾಮ ತೈವಾನ್ ಸುತ್ತಲೂ ತನ್ನ ಸೇನೆಯನ್ನ ನಿಯೋಜನೆ ಮಾಡಿ, ಪ್ರತಿ ಕ್ಷಣವೂ ತೈವಾನ್ ಮೇಲೆ ಹದ್ದಿನ ಕಣ್ಣು ಇಟ್ಟು ಕೂತಿದೆ ಚೀನಾ. ಇದೇ ಸಂದರ್ಭದಲ್ಲಿ ಅಮೆರಿಕ ಎಂಟ್ರಿ ಕೊಟ್ಟು ತೈವಾನ್‌ಗೆ ಬೆಂಬಲ ನೀಡಿದೆ. ಹೀಗಾಗಿ ಚೀನಾ-ತೈವಾನ್ ಮಧ್ಯೆ ಯುದ್ಧ ಭೀತಿ ಎದುರಾಗಿದೆ.

After Ukraine now America in talks to give big budget military aid to Taiwan

ತೈವಾನ್ ನೀಡಿತ್ತು ಖಡಕ್ ಎಚ್ಚರಿಕೆ!

ಕೆಲ ದಿನಗಳಿಂದ ತೈವಾನ್ ಸುತ್ತಲೂ ಚೀನಾ ಹರಾಡಿಸುತ್ತಿರುವ ಮಾನವ ರಹಿತ ಯುದ್ಧ ವಿಮಾನಗಳು, ಅಂದ್ರೆ ಡ್ರೋನ್ ಭೀತಿ ಸೃಷ್ಟಿಸಿವೆ. ಹೀಗಾಗಿ ತೈವಾನ್‌ ರಕ್ಷಣಾ ಸಚಿವ ಚೂ ಕೋ-ಚೆಂಗ್ ಮೊನ್ನೆತಾನೆ ಗಂಭೀರ ಸಂದೇಶ ಒಂದನ್ನ ಚೀನಾಗೆ ನೀಡಿ, ಪರೋಕ್ಷವಾಗಿ ಕೆಣಕಿದ್ದರು. ಈ ಮೂಲಕ ನಮ್ಮ ತಂಟೆಗೆ ಬರಬೇಡಿ ಎಂದು ತೈವಾನ್ ಎಚ್ಚರಿಕೆ ರವಾನಿಸಿದ್ದರು. ತೈವಾನ್ ಜಲಸಂಧಿ ವಿಚಾರದಲ್ಲಿ ಚೀನಾ ಮೂಗು ತೂರಿಸುತ್ತಿರುವುದು ಸರಿ ಬರಲ್ಲ ಎಂದು ತೈವಾನ್ ಹೇಳಿದ 1 ದಿನದ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ.

ಒಟ್ನಲ್ಲಿ ತೈವಾನ್ ಮತ್ತು ಚೀನಾ ನಡುವಿನ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕ ಕೂಡ ದೊಡ್ಡ ಮೊತ್ತದ ಪ್ಯಾಕೇಜ್ ಗಿಫ್ಟ್ ಕೊಡಲು ಚರ್ಚೆ ಆರಂಭಿಸಿದೆ, ತೈವಾನ್‌ಗೆ ಉಡುಗೊರೆ ಸಿಕ್ಕರೆ ಬೇರೆ ರೀತಿಯ ಪರಿಸ್ಥಿತಿ ನಿರ್ಮಾಣ ಆಗುವುದು ಪಕ್ಕಾ. ಚೀನಾ ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ, ಹಾಗಂತಾ ಸುಮ್ಮನೆ ಕೂರುತ್ತೆ ಚೀನಾ ಅನ್ನೋ ನಂಬಿಕೆ ಕೂಡ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+