Israel: ಇಸ್ರೇಲ್ & ಲೆಬನಾನ್ ನಂತರ ಗಾಜಾ ಯುದ್ಧಕ್ಕೂ ಬ್ರೇಕ್?
ಅಂತೂ.. ಇಂತೂ... ಇಸ್ರೇಲ್ & ಲೆಬನಾನ್ ನಡುವೆ ನಡೆಯುತ್ತಿರುವ ಘೋರ ಕಾಳಗಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಸುಮಾರು 60 ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಿ, ಈ ಮೂಲಕ ಬಡಿದಾಟ ನಿಲ್ಲಿಸಲು ಇದೀಗ ಇಸ್ರೇಲ್ ಹಾಗೂ ಲೆಬನಾನ್ ನಾಯಕರು ಭಾರಿ ಚರ್ಚೆಯ ನಂತರ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಇಂತಹ ಸಮಯದಲ್ಲೇ, ಇಸ್ರೇಲ್ & ಲೆಬನಾನ್ ನಂತರ ಗಾಜಾ ಯುದ್ಧಕ್ಕೂ ಬ್ರೇಕ್ ಬೀಳುತ್ತಾ? ಬನ್ನಿ ತಿಳಿಯೋಣ.
ಅದು 2023ರ ಅಕ್ಟೋಬರ್ 7ರ ಶನಿವಾರ, ಇಸ್ರೇಲ್‌ನ ಜನರು ವೀಕೆಂಡ್ ಖುಷಿಯಲ್ಲಿ ಇದ್ದ ಸಮಯದಲ್ಲೇ ನುಗ್ಗಿ ಬಂದ ವಿರೋಧಿ ಪಡೆಯ ರಾಕೆಟ್ & ಕ್ಷಿಪಣಿಗಳು ಘೋರ ಪರಿಸ್ಥಿತಿಯ ಸೃಷ್ಟಿ ಮಾಡಿಬಿಟ್ಟವು. ಹೀಗೆ 2023ರ ಅಕ್ಟೋಬರ್ 7ಕ್ಕೆ ಶುರುವಾದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಆದರೆ ನಿನ್ನೆ ಮೊನ್ನೆ ಶುರುವಾಗಿರುವ ಇಸ್ರೇಲ್ & ಲೆಬನಾನ್ ಯುದ್ಧ ನಿಂತು ಹೋಗಿದ್ದು, ಮತ್ತೊಂದು ಕಡೆ ಇಸ್ರೇಲ್ & ಗಾಜಾ ಯುದ್ಧಕ್ಕೂ ಬ್ರೇಕ್ ಹಾಕೋದಕ್ಕೆ ಇದೀಗ ಒತ್ತಡ ಹೆಚ್ಚಾಗಿದೆ!

ಯುದ್ಧದಿಂದ ಎದುರಾಗಿದೆ ಘೋರ ಪರಿಸ್ಥಿತಿ
ಗಾಜಾ & ಇಸ್ರೇಲ್ ಜಗಳದ ರೀತಿಯೇ ಇಸ್ರೇಲ್ & ಲೆಬನಾನ್ ಕೂಡ ಕಚ್ಚಾಡಿ ಬಡಿದಾಡಿದ್ದವು. ಇಸ್ರೇಲ್ & ಲೆಬನಾನ್ ನಡುವೆ ಗಲಾಟೆ ಜೋರಾದ ನಂತರ ಸುಮಾರು 1.2 ಮಿಲಿಯನ್ ಅಂದ್ರೆ 12 ಲಕ್ಷ ಲೆಬನಾನ್ ನಾಗರಿಕರು & 50,000ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ನೆಲೆ ಇಲ್ಲದೆಯೇ ಅಲೆದಾಡುವ ಪರಿಸ್ಥಿತಿ ಬಂದಿತ್ತು. ಪುಟಾಣಿ ಮಕ್ಕಳು ಅಪ್ಪ & ಅಮ್ಮನ ಕಳೆದುಕೊಂಡು ಈಗ ಅನಾಥರಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದು, ಯುದ್ಧ ನಿಲ್ಲಿಸಲು ಆಗ್ರಹ ಕೂಡ ಕೇಳಿ ಬಂದಿತ್ತು. 3,700 ಜನರು ಸುಮಾರು 1 ತಿಂಗಳ ಅಂತರದಲ್ಲಿ ಜೀವ ಕಳೆದುಕೊಂಡಿದ್ದಾರೆ, ಎಂಬ ಗಂಭೀರ ಆರೋಪ ಕೂಡ ಇದೆ.
ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುತ್ತಾ?
ಹೀಗಿದ್ದಾಗಲೇ ಇಸ್ರೇಲ್ & ಲೆಬನಾನ್ ಯುದ್ಧಕ್ಕೆ ಇದೀಗ ಬ್ರೇಕ್ ಹಾಕಲಾಗಿದೆ. ಆದರೆ ಇದೇ ವೇಳೆ ಗಾಜಾ & ಇಸ್ರೇಲ್ ಯುದ್ಧಕ್ಕೂ ಬ್ರೇಕ್ ಹಾಕಬೇಕು, ಎಂಬ ಒತ್ತಾಯ ಕೇಳಿ ಬಂದಿದೆ. ಯಾಕಂದ್ರೆ ಈಗಾಗಲೇ 1 ವರ್ಷ ಪೂರೈಸಿ ಮತ್ತೊಂದು ವರ್ಷಕ್ಕೆ ಎಂಟ್ರಿ ಕೊಟ್ಟಿರುವ ಗಾಜಾ & ಇಸ್ರೇಲ್ ಯುದ್ಧ ಇನ್ನಷ್ಟು ಕಠಿಣವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಗಾಜಾ & ಇಸ್ರೇಲ್ ಯುದ್ಧಕ್ಕೂ ಬ್ರೇಕ್ ಹಾಕಿದರೆ ಮಧ್ಯಪ್ರಾಚ್ಯ ನೆಮ್ಮದಿಯಾಗಿ ಇರಲು ಸಾಧ್ಯ ಎಂಬ ಲೆಕ್ಕಾಚಾರ ಈಗ ಮೂಡಿದೆ.
ಯುದ್ಧಗಳು ಬೇಡ ಎಂಬ ಒತ್ತಾಯ
ಒಟ್ನಲ್ಲಿ ಏನೇ ಆಗಲಿ ಯುದ್ಧಗಳು ನಿಲ್ಲಲಿ ಎಂಬುದೇ ಜಗತ್ತಿನ ಆಸೆಯಾಗಿದ್ದು, ಈಗಿನ ಸ್ಥಿತಿ ನೋಡಿದರೆ ಮುಂದೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣ ಯುದ್ಧಗಳನ್ನ ನಿಲ್ಲಿಸಿ, ಶಾಂತಿಯುತ ಜೀವನ ನಡೆಸಬೇಕು ಎಂಬುದೇ ಜಗತ್ತಿನ ಪ್ರತಿಯೊಂದು ದೇಶದ ಆಸೆಯಾಗಿದೆ. ಆದರೆ ಈ ಆಸೆ ಈಡೇರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications