ಉಕ್ರೇನ್ ಡ್ಯಾಂ ಬ್ಲಾಸ್ಟ್: ರೋಡ್‌ಗೆ ಬಂದ ಹಾವು, ಮೀನು, ಬಾತುಕೋಳಿ!
ಖೆರ್ಸನ್: ಡ್ಯಾಂ ಬ್ಲಾಸ್ಟ್ ಬಳಿಕ ಉಕ್ರೇನ್ ತತ್ತರಿಸಿದೆ. ಖೆರ್ಸನ್ ಪ್ರಾಂತ್ಯದ ಡ್ಯಾಂ ಸ್ಫೋಟಕ್ಕೆ ರಷ್ಯಾ ಕಾರಣ ಎಂಬ ಆರೋಪ ಕೇಳಿಬರುತ್ತಿದೆ, ಆದ್ರೆ ರಷ್ಯಾ ಸೇನೆ ನಾವು ಈ ಕೃತ್ಯ ಎಸಗಿಲ್ಲ. ಉಕ್ರೇನ್ ತಾನೇ ಬ್ಲಾಸ್ಟ್ ಮಾಡಿ ರಷ್ಯಾ ಮೇಲೆ ಆರೋಪ ಹೊರಿಸಿದೆ ಎಂದು ಆರೋಪಿಸುತ್ತಿದೆ. ಈ ಮಧ್ಯೆ ರೋಡ್ ರೋಡ್‌ನಲ್ಲಿ ಹಾವು, ಮೀನು, ಬಾತುಕೋಳಿಗಳು ಎಂಟ್ರಿ ಕೊಟ್ಟಿವೆ!
ಸೋವಿಯತ್ ಕಾಲದಲ್ಲಿ ನಿರ್ಮಾಣ ಆಗಿದ್ದ ಈ ಡ್ಯಾಂಗೆ ರಷ್ಯಾ ಸೈನಿಕರು ಬಾಂಬ್ ಇಟ್ಟಿದ್ದಾರೆ ಅಂತಾ ಉಕ್ರೇನ್ ಅಧ್ಯಕ್ಷರೇ ಆರೋಪ ಮಾಡುತ್ತಿದ್ದಾರೆ. ಆದರೆ ರಷ್ಯಾ ಮಾತ್ರ ತಾನು ಇಂತಹ ಕೆಲಸ ಮಾಡಿಲ್ಲ ಅಂತಿದೆ. ಇವರ ಕಿತ್ತಾಟ ಹೀಗಿರಲಿ, ದಿಢೀರ್ ನುಗ್ಗಿದ ಡ್ಯಾಂ ನೀರಿನಿಂದಾಗಿ ಸುತ್ತಮುತ್ತಲ ಭಾಗದ ನೂರಾರು ಹಳ್ಳಿಗಳು ಮುಳುಗಿ ಹೋಗಿವೆ. ಎಲ್ಲೆಲ್ಲೂ ಹಾವು, ಮೀನು, ಬಾತುಕೋಳಿಗಳೇ ಕಾಣುತ್ತಿವೆ. ಜನರಿಗೆ ಊರು ಯಾವುದು, ಅಲ್ಲಿ ನದಿ ಯಾವುದು ಅನ್ನೋದು ಗೊತ್ತಾಗ್ತಿಲ್ಲ (Russia Ukraine War). ಈ ನಡುವೆ ಲಕ್ಷಾಂತರ ಜನರ ಜೀವಕ್ಕೆ ಗಂಡಾಂತರ ಎದುರಾಗಿದೆ.

ನೀರು ಬಂತು ಓಡಿ.. ಓಡಿ..!
ಖೆರ್ಸನ್ ಜಲಾಶಯ ನಿರ್ಮಾಣವಾಗಿದ್ದು 1956ರಲ್ಲಿ. ಸುಮಾರು 240 ಕಿ.ಮೀ. ವಿಸ್ತಾರದವರೆಗೂ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿತ್ತು ಜಲಾಶಯ. ಈಗ ಇಂತಹ ಬೃಹತ್ ಜಲಾಶಯ ಸ್ಫೋಟಗೊಂಡಿರುವ ಪರಿಣಾಮ ಡ್ನಿಪ್ರೊದ ಪಶ್ಚಿಮ ದಂಡೆಯಲ್ಲಿ ಬರುವ ನೂರಾರು ಹಳ್ಳಿಗಳಿಗೆ ಅಪಾಯ ಎದುರಾಗಿದೆ. ನೀರು ಮನೆಗಳಿಗೆ ನುಗುತ್ತಿದೆ. ಬರೀ ನೀರು ನುಗ್ಗಿದ್ದರೆ ಪರವಾಗಿಲ್ಲ ಅನ್ನಬಹುದು, ಆದರೆ ನದಿ ನೀರಿನ ಜೊತೆಗೆ ಹಾವು, ಚೇಳು, ಮೊಸಳೆ, ಮೀನು ಹೀಗೆ ಜೀವ ತೆಗೆಯುವ ಜೀವಿಗಳು ಕೂಡ ಮನೆಗೆ ನುಗ್ಗುತ್ತಿವೆ. ಹೀಗಾಗಿ ಜನ ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಇಲ್ಲಿನ ಜನ ಪರದಾಡುತ್ತಿದ್ದಾರೆ.
()NEWS UPDATE & ANALYSIS NOVA KAKHOVKA DAM DESTROYED MORNING JUNE 6
— Mikael Valtersson (@MikaelValterss1) June 6, 2023
The very large hydroelectric powerplant (HPP) dam over the Dniepr in northern Kherson oblast (region) has been destroyed. Exactly what happened is unclear, Ukraine and its western allies blame Russia. Some… pic.twitter.com/Fk8GxBJVQ3
ಒಂದೇ ಸೆಕೆಂಡ್‌ನಲ್ಲಿ ಡ್ಯಾಂ ಢಮಾರ್!
ಅಂದಹಾಗೆ ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಜಲಾಶಯ ಸ್ಫೋಟದ ಬಳಿಕ ಜನ ಆತಂಕದಲ್ಲೇ ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಇನ್ನೊಂದು ಕಡೆ ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರುತ್ತಿದೆ. ಆದ್ರೆ ಡ್ಯಾಂ ಬ್ಲಾಸ್ಟ್ ಆಗುವ ವಿಡಿಯೋ ಜನರನ್ನ ರೊಚ್ಚಿಗೆಬ್ಬಿಸಿದೆ. ಖೆರ್ಸನ್ ಡ್ಯಾಂ ಸ್ಫೋಟಗೊಳ್ಳುವ ವಿಡಿಯೋ ಎನ್ನಲಾದ ಫುಟೇಜ್ ಒಂದು ವೈರಲ್ ಆಗುತ್ತಿದೆ. ಸಿಸಿ ಕ್ಯಾಮೆರಾ ವಿಡಿಯೋ ಪ್ರಕಾರ, ಕ್ಷಣಮಾತ್ರದಲ್ಲಿ ಸ್ಫೋಟ ಸಂಭವಿಸಿ ನೂರಾರು ಟಿಎಂಸಿ ನೀರು ಹೊರಗೆ ನುಗ್ಗುತ್ತದೆ. ನೋಡ ನೋಡುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗಿದೆ.
)The Koshevaya River in the #Kherson region burst its banks as a result of the explosion of the Kakhovka Hydroelectric Station The footage was published by local journalist Konstantin Ryzhenko.#Ukraine #Kakhovka #Dam #Russia #StopRussia #RussiaInvadedUkraine #UkraineWillWin pic.twitter.com/hYYCUaY1sF
— Маттайс 🇺🇦 🇳🇱 Слава Україні (@Roadster1978) June 6, 2023
ಲಕ್ಷಾಂತರ ಅಮಾಯಕರು ಬೀದಿಗೆ
ಉಕ್ರೇನ್ ಯುದ್ಧ ಆರಂಭವಾದ ನಂತರ ಈಗಾಗಲೇ 1 ಚಳಿಗಾಲ ಕಳೆದಿದೆ. ತೀವ್ರ ಚಳಿಯ ಪ್ರದೇಶ ಉಕ್ರೇನ್ ದೇಶದಲ್ಲಿ ಚಳಿಗಾಲದಲ್ಲಿ ಮನೆ ಇದ್ರು ಬದುಕೋದು ಕಷ್ಟ ಕಷ್ಟ. ಪರಿಸ್ಥಿತಿ ಹೀಗಿದ್ದಾಗ, ಯುದ್ಧದ ಪರಿಣಾಮ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಇವರು ಬದುಕಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರದ್ದೋ ಜಗಳಕ್ಕೆ, ಇನ್ಯಾರದ್ದೋ ಪ್ರತಿಷ್ಠೆಗೆ ಲಕ್ಷಾಂತರ ಜನ ಊಟ ನಿದ್ದೆ ಇಲ್ಲದೆ ಉಕ್ರೇನ್ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ಈಗ ಡ್ಯಾಂಗೆ ಬಾಂಬ್ ಇಡಲಾಗಿದ್ದು, ಸ್ವತಃ ಉಕ್ರೇನ್ ಅಧ್ಯಕ್ಷರೇ ಈ ರೀತಿ ಡ್ಯಾಂ ಬ್ಲಾಸ್ಟ್ ಮಾಡಿದ್ದಾರೆ ಅಂತಾ ರಷ್ಯಾ ಆರೋಪಿಸುತ್ತಿದೆ.

ರಷ್ಯಾ ಗಡಿಯಲ್ಲಿ ಫುಲ್ ಅಲರ್ಟ್
ಅತ್ತ ಉಕ್ರೇನ್ ಜಲಾಶಯ ಸ್ಫೋಟಗೊಂಡ ಬೆನ್ನಲ್ಲೇ ರಷ್ಯಾ ಅಲರ್ಟ್ ಆಗಿದೆ. ತನ್ನ ದೇಶದ ಮೇಲೆ ಉಕ್ರೇನ್ ಪಡೆಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಷ್ಯಾ ಸೇನೆ ಅಲರ್ಟ್ ಆಗಿ ಈ ಕ್ರಮ ಕೈಗೊಂಡಿದೆ. ಹಾಗೇ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಕೂಡ ರಷ್ಯಾ ಇದೀಗ ಅಲರ್ಟ್ ಮಾಡಿದ್ದು, ಪರಿಸ್ಥಿತಿ ಅವಲೋಕನ ಮಾಡುತ್ತಿದೆ. ಉಕ್ರೇನ್ ಅಧ್ಯಕ್ಷರ ವಿರುದ್ಧ ಈಗ ಕೊತ ಕೊತ ಕುದಿಯುತ್ತಿರುವ ರಷ್ಯಾ, ಝಲೆನ್ಸ್ಕಿ ವಿರುದ್ಧ ಸೇಡಿಗಾಗಿ ಕಾದು ಕುಳಿತಿದೆ.
ಹಾಗೇ ರಷ್ಯಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗ್ತಿದೆ ಅನ್ನೋದು ಯುರೋಪ್ ಒಕ್ಕೂಟ ಹಾಗೂ ನ್ಯಾಟೋ ರಾಷ್ಟ್ರಗಳ ಆರೋಪವಾಗಿದೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡುತ್ತಿಲ್ಲ ರಷ್ಯಾ, ಬದಲಾಗಿ ಧೈರ್ಯದಿಂದ ತನ್ನ ಶತ್ರುವಿನ ನಾಶಕ್ಕೆ ತೊಡೆತಟ್ಟಿ ನಿಂತಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್‌ಗೆ ಪಾಠ ಕಲಿಸಿಯೇ ಸಿದ್ಧ ಎಂದು ಶಪಥ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ರಷ್ಯಾ ಸೇನೆ ಉಕ್ರೇನ್ ವಿರುದ್ಧ ತನ್ನ ಭೀಕರ ದಾಳಿ ಮುಂದುವರಿಸಿದೆ.












Click it and Unblock the Notifications