ಟರ್ಕಿಷ್ ರೆಸ್ಟೋರೆಂಟ್ ಮೇಲೆ ಉಗ್ರರ ದಾಳಿ, ಹದಿನೇಳು ಮಂದಿ ಸಾವು

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ ದೇಶದ ಟರ್ಕಿಷ್ ರೆಸ್ಟೋರೆಂಟ್ ಮೇಲೆ ಭಾನುವಾರ ನಡೆದ ಬಂದೂಕುಧಾರಿ ಉಗ್ರರ ದಾಳಿಯಲ್ಲಿ ಹದಿನೇಳು ಮಂದಿ ಮೃತಪಟ್ಟಿದ್ದಾರೆ. ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಈ ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದಕರ ಉಪಟಳ ವಿಪರೀತ ಹೆಚ್ಚಾಗಿದೆ.

ಕಳೆದ ವರ್ಷ ಜನವರಿಯಲ್ಲಿ ಕೆಫೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮೂವತ್ತು ಮಂದಿ ಮೃತಪಟ್ಟಿದ್ದರು. ಭಾನುವಾರ ನಡೆದ ದಾಳಿಯು ಜಿಹಾದಿಗಳ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರೆಸ್ಟೋರೆಂಟ್ ಮೇಲಿನ ದಾಳಿಯ ಮಾಹಿತಿ ಸಿಗುತ್ತಿದ್ದಂತೆ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಬಂದಿದ್ದಾರೆ.

Africa: 17 dead in Burkino Faso cafe attack

ದಾಳಿಯ ಬಗ್ಗೆ ಪೊಲೀಸ್ ವಕ್ತಾರ ಕ್ಯಾ. ಗೈ ಯೇ ಮಾತನಾಡಿ, ಟರ್ಕಿಷ್ ರೆಸ್ಟೋರೆಂಟ್ ಅಜಿಜ್ ಇಸ್ತಾಂಬುಲ್ ಅನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬುರ್ಕಿನಾ ಫಾಸೋ ಜಗತ್ತಿನ ಅತ್ಯಂತ ಬಡ ದೇಶಗಳಲ್ಲಿ ಒಂದು. ದೇಶದ ಉತ್ತರ ಗಡಿಯು ಮಾಲಿ ದೇಶದೊಂದಿಗೆ ಇದೆ. ಅಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಳೆದ ವರ್ಷ ನಡೆದ ದಾಳಿಯಲ್ಲಿ ಭಾಗಿಯಾಗಿದ್ದವರು ವಿದೇಶಿ ಉಗ್ರರು. ಅಲ್ ಕೈದಾ ಉಗ್ರ ಸಂಘಟನೆ ಪ್ರಕಾರ, ಅಲ್ ಮೌರಾಬಿಟೌನ್ ಸಂಘಟನೆ ಜತೆ ಸೇರಿ ಈ ದಾಳಿ ನಡೆಸಲಾಗಿದೆ. ಆದರೆ ಬುರ್ಕಿನಾ ಫಾಸೋಗೆ ಸ್ಥಳೀಯರಿಂದಲೇ ಆತಂಕ ಹೆಚ್ಚಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+